ರಾಯಚೂರು: ರಿಮ್ಸ್ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ವಿಕಲಚೇತನರ ಕೊಠಡಿಯಲ್ಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ವಿಕಲಚೇತನರ ಚುನರ್ವಸತಿ ಕೇಂದ್ರದ ಅಧಿಕಾರಿಗಳು ಹಣ ಪಡೆಯುತ್ತಿದ್ದು ಅವರ ಮೆಲೆ ಕ್ರಮ ಕೈಗೊಳ್ಳಬೇಕು ಎಂದು ಹೈದರಾಬಾದ್ ಕರ್ನಾಟಕ ವಿಕಲಚೇತನರ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ನೀಡಿ ನಗರದ ರಿಮ್ಸ್ ಆಸ್ಪತ್ರೆಯ ವಿಕಲಚೇತನರ ಮನರ್ವಸತಿ ಕೇಂದ್ರದ ಕೊಠಡಿಯಲ್ಲಿ ಕಾರ್ಯನಿರ್ವಹಿ ಸುತ್ತಿರುವ ಕಂಪ್ಯೂಟರ್ ಆಪರೇಟರ್ ಎಂ.ಡಿ. ರಫಿ ಮತ್ತು ನೋಡಲ್ ಅಧಿಕಾರಿ ಹನುಮಂತು ಹಾಗೂ ಆನಂದ, ಚಂದು ಇವರು ವಿಕಲಚೇತನರ ವೈದ್ಯಕೀಯ ಪ್ರಮಾಣ ಪತ್ರ ನೀಡಲು ವಿಕಲ ಚೇತನರ ಬಳಿ ಹಣವನ್ನು ಪಡೆದುಕೊಂಡು ಪ್ರಮಾಣ ಪತ್ರಗಳು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಹಣ ಪಡೆದು ಯಾವುದೇ ರಸೀದಿ ನೀಡುವುದಿಲ್ಲ, ಪ್ರಮಾಣ ಪತ್ರಗಳು ನೀಡಲು ಯಾವುದೇ ಶುಲ್ಕ ತೆಗೆದುಕೊಳ್ಳಲು ಸರ್ಕಾರದ ಆದೇಶವಿದೆ.ಆದರೆ ಅಲ್ಲಿನ ಅಧಿಕಾರಿಗಳು ವೈದ್ಯ ಕೀಯ ಅಧೀಕ್ಷಕರು 200 ರೂ. ಹಣ ಪಡೆದು ಪ್ರಮಾಣ ಪತ್ರ ನೀಡಬೇಕು ಎಂದು ಹೇಳಿದ್ದಾರೆ. ಇದೇ ರೀತಿ ಸುಮಾರು ಜಿಲ್ಲೆಯಾ ದ್ಯಾದಂತ 10 ಸಾವಿರ ವಿಕಲಚೇತನರ ಪ್ರಮಾಣ ಪತ್ರ ನೀಡಿರು ತ್ತಾರೆ ಎಂದರು.
ವಿಕಲಚೇತನ ಪ್ರಮಾಣ ಪತ್ರಗಳನ್ನು ಸುಮಾರು 13 ತಿಂಗಳಿಂದ ನೀಡುತ್ತಿದ್ದಾರೆ.ಆನಂದ ಮತ್ತು ಚಂದ್ರು ಡಿ.ಡಿ.ಆರ್.ಸಿ.ಯಲ್ಲಿ ಕೆಲಸ ಮಾಡು ತ್ತಿದ್ದು ಇವರು ವಿಕಲಚೇತನ ಕೊಠಡಿಯಲ್ಲಿ ವಿಕಲಚೇತನರಿಂದ 200 ರೂ.ತೆಗೆದುಕೊಂಡು ಪ್ರಮಾಣ ನೀಡುತ್ತಿದ್ದಾರೆ.
ನೋಡಲ್ ಅಧಿಕಾರಿಗಳು ವಾರಕ್ಕೊಮ್ಮೆ ಬರುತ್ತಿದ್ದಾರೆ.ಇಲ್ಲಿ ಕೇಳುವವರು ಯಾರು ಇಲ್ಲತಾಗಿದೆ.ಕೆಲವು ವಿಕಲಚೇತನರಿಗೆ ಡಾಕ್ಟರ್‌ಗಳು ಓಪಿಡಿ ರಸೀದಿ ನೀಡಿರುವುದಿಲ್ಲ, ಅಂತಹ ವಿಕಲಚೇತನರಿಗೂ ಸಹ ಈ ಸಿಬ್ಬಂದಿಗಳು ಹಣವನ್ನು ಪಡೆದುಕೊಂಡು ಪ್ರಮಾಣ ಪತ್ರಗಳನ್ನು ನೀಡುತ್ತಿದ್ದಾರೆ, ಪಾಸವರ್ಡ ಕೊಟ್ಟವರು ಯಾರು ಎಂದು ಇದುವರೆಗೆ ಯಾರೂ ಹೇಳುತ್ತಿಲ್ಲ ಅಧಿಕಾರಿಗಳು ದುರ್ಭಳಕೆ ಮಾಡಿಕೊಳ್ಳುತ್ತಾರೆ ಎಂದರು.
ಈ ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಕೊಠಡಿಯಲ್ಲಿ ನೋಡಲ್ ಅಧಿಕಾರಿಗಳ ಇರುವಂತೆ ನೋಡಿಕೊಳ್ಳಬೇಕು, ಇಲಾಖೆಯ ಲಾಗ್ ಇನ್ ಪಾಸ್ ವರ್ಡ್ ದುರ್ಭಳೆಯಾಗುತ್ತಿದ್ದು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಮಹಮದ್ ಅಹ್ಮದ್ ರಫಿ ಸೇರಿದಂತೆ ಅನೇಕರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…