ಕಲಬುರಗಿ: ನಾಡಿನ ಸುಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಇಲ್ಲಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಚೇರ್‌ಪರ್ಸನ್ ಪೂಜ್ಯ ಮಾತೋಶ್ರೀ ದಾಕ್ಷಾಯಿಣಿಅವ್ವಜಿಅವರುದಾವಣಗೆರೆ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ಸಂಘದ ಪ್ರತಿಷ್ಠಿತ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ (ಬೋರ್ಡ್‌ಆಫ್‌ಗೌರ‍್ನರ‍್ಸ್) ಸದಸ್ಯರೂಆಗಿರುವ ಪೂಜ್ಯ ಮಾತೋಶ್ರೀ ದಾಕ್ಷಾಯಿಣಿಅವ್ವಅವರು ಶೈಕ್ಷಣಿಕಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ, ಸಾಧನೆ ಮತ್ತು ಸೇವೆಗಳನ್ನು ಪರಿಗಣಿಸಿ ಗೌರವಡಾಕ್ಟರೇಟ್ ಪದವಿ ನೀಡಲಾಗುತ್ತಿದೆ.
ಬುಧವಾರದಾವಣಗೆರೆ ವಿಶ್ವವಿದ್ಯಾಲಯದ ‘ಶಿವಗಂಗೋತ್ರಿ’ ಕ್ಯಾಂಪಸ್‌ನಲ್ಲಿ ನಡೆಯಲಿರುವ ವಿ.ವಿ. ಘಟಿಕೋತ್ಸವದಲ್ಲಿ ಮಾತೋಶ್ರೀ ದಾಕ್ಷಾಯಿಣಿಅವ್ವಜಿಅವರಿಗೆಗೌರವಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದುಎಂದು ವಿ.ವಿ. ಕುಲಪತಿಡಾ.ಶರಣಪ್ಪ ವಿ. ಹಲ್ಸೆ ತಿಳಿಸಿದ್ದಾರೆ.
ಮಾತೋಶ್ರೀ ದಾಕ್ಷಾಯಿಣಿಅವ್ವಅವರಿಗೆದಾವಣಗೆರೆ ವಿ.ವಿ. ಗೌರವಡಾಕ್ಟರೇಟ್ ಪದವಿ ಸಂದಿರುವುದಕ್ಕೆ ಶ್ರೀಶೈಲಂ ಸಾರಂಗ ಮಠದ ಪೂಜ್ಯಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಅತೀವ ಹರ್ಷ ವ್ಯಕ್ತಪಡಿಸಿ ಮಾತೋಶ್ರೀ ದಾಕ್ಷಾಯಿಣಿಅವ್ವಅವರನ್ನು ಸತ್ಕರಿಸಿ ಅಭಿನಂದಿಸಿದ್ದಾರೆ.ಮಾತೋಶ್ರೀ ದಾಕ್ಷಾಯಿಣಿಅವ್ವಅವರಿಗೆಗೌರವಡಾಕ್ಟರೇಟ್ ಪದವಿ ನೀಡುವ ಮೂಲಕ ದಾವಣಗೆರೆ ವಿಶ್ವವಿದ್ಯಾಲಯತನ್ನಗೌರವ ಹೆಚ್ಚಿಸಿಕೊಂಡಿದೆ ಎಂದರು.
ಮಾತೋಶ್ರೀ ಅವರಿಗೆಗೌರವಡಾಕ್ಟರೇಟ್ ಸಂದಿರುವುದರಿಂದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣ ಬಸವ ವಿ.ವಿ.ಗೆ ಶೈಕ್ಷಣಿಕಕ್ಷೇತ್ರದಲ್ಲಿಇನ್ನೂ ಮಹೋನ್ನತ ಸಾಧನೆಯತ್ತದಾಪುಗಾಲಿಡಲು ಪ್ರೇರಣೆ ಸಿಕ್ಕಂತಾಗಿದೆ ಎಂದೂಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಮಾತೋಶ್ರೀ ಅವರನ್ನು ಸತ್ಕರಿಸಿದ ಶರಣಬಸವ ವಿ.ವಿ. ಕುಲಸಚಿವಡಾ.ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವಡಾ. ಲಿಂಗರಾಜ ಶಾಸ್ತ್ರಿ, ಡೀನ್‌ಡಾ. ಲಕ್ಷ್ಮೀ ಪಾಟೀಲ, ಡಾ.ಬಸವರಾಜ ಮಠಪತಿ ಹಾಗೂ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರುಅವ್ವಾಜಿಯವರಿಗೆ ಸನ್ಮಾನಿಸಿದರು.
ಮಾತೋಶ್ರೀ ಅವ್ವನವರು ಮಾತನಾಡಿ, ‘ಶರಣಬಸವೇಶ್ವರರು ಹಾಗೂ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯಡಾ.ಶರಣಬಸವಪ್ಪಅಪ್ಪಅವರ ಆಶೀರ್ವಾದ ಫಲವಾಗಿ ಮಾತೋಶ್ರೀ ಅವರಿಗೆಗೌರವದಾಕ್ಟರೇಟ್ ಪದವಿ ಲಭಿಸಿದೆ’ ಎಂದರು.
ಪೂಜ್ಯಡಾ.ಶರಣಬಸವಪ್ಪಅಪ್ಪಅವರು ಉಪಸ್ಥಿತಿ ವಹಿಸಿದರು.ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜದೇಶಮುಖ ಮತ್ತಿತರರು ಸಹ ಮಾತೋಶ್ರೀ ದಾಕ್ಷಾಯಿಣಿಅವ್ವ ಹಾಗೂ ಪೂಜ್ಯಡಾ. ಶರಣಬಸವಪ್ಪಅಪ್ಪಅವರನ್ನು ಸನ್ಮಾನಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…