ಬಿಸಿ ಬಿಸಿ ಸುದ್ದಿ

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ಬಿಲ್‌ಗಳಲ್ಲಿ ನಿಯಮಾವಳಿಗಳ ಉಲ್ಲಂಘನೆ: ಕ. ದಲಿತ ಸಂಘರ್ಷ ಬೃಹತ್‌ ಪ್ರತಿಭಟನೆ

ಬೆಂಗಳೂರು: ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ಬಿಲ್‌ಗಳಲ್ಲಿ ಅವ್ಯವಹಾರ ಆಗಿದೆ ಹಾಗೂ ಎಸ್.ಸಿ .ಎಸ್.ಟಿ ಜನಾಂಗದ ಅಭಿವೃದ್ದಿಗಾಗಿ ಮೀಸಲಿಟ್ಟಿರುವ ಅಭಿವೃದ್ದಿ ಅನುದಾನ ಕಾನೂನು ಬಾಹಿರವಾಗಿ ಕ್ರಿಯಾ ಯೋಜನೆಯಿಲ್ಲದೆ ಜಾಬ್ ಕೋಡ್‍ಗಳನ್ನು ಜಾರಿ ಮಾಡಿರುವುದರ ಮುಖಾಂತರ ಸದರಿ ವರ್ಗದ ಹಕ್ಕುಗಳು ಉಲ್ಲಂಘನೆಯಾಗಿರುತ್ತದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಇಂದು ರಾಜ್ಯಾಧ್ಯಕ್ಷರಾದ ಡಾ ಸಿ ಎಸ್‌ ರಘು ನೇತೃತ್ವದಲ್ಲಿ ಬಿಬಿಎಂಪಿ ಮುಖ್ಯ ಕಚೇರಿಯ ಎದುರು ಬೃಹತ್‌ ಪ್ರತಿಭಟನೆಯನ್ನು ನಡೆಸಲಾಯಿತು.

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭಿವೃದ್ದಿಗಾಗಿ ಮೀಸಲಿಟ್ಟ ಅನುದಾನವನ್ನು ಬಳಕೆಮಾಡುವಲ್ಲಿ ಶಾಸನಬದ್ದ ಕಾನೂನು ನಿಯಾಮವಳಿಗಳನ್ನು ಉಲ್ಲಂಘಿಸಿ ಜಾಬ್ ಕೋಡ್‍ಗಳನ್ನು ಸೃಷ್ಟಿಸಿರುವುದು ಪರಿಶಿಷ್ಟರ ಆರ್ಥಿಕ ಅಭಿವೃದ್ದಿಯ ವಿರೋಧಿ ನೀತಿಯಾಗಿರುತ್ತದೆ. ಆದ್ದರಿಂದ ಸಂವಿಧಾನಬದ್ದ ಎಸ್.ಸಿ / ಎಸ್.ಟಿ ವರ್ಗದ ಹಕ್ಕುಗಳು ಉಲ್ಲಾಂಘನೆಯಾಗಿರುವ ಬಗ್ಗೆ ಕಾನೂನ್ಮತಕ ಕ್ರಮವನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ ಸಿ ಎಸ್‌ ರಘು ಆಗ್ರಹಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕೆ.ಟಿ.ಪಿ.ಪಿ ಕಾಯ್ದೆ ಹಾಗೂ ಕೆ.ಎಂ.ಸಿ ಕಾಯ್ದೆ ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸದೆ ಬಿಲ್‍ಗಳನ್ನು ಪಾವತಿಸಿರುತ್ತಾರೆ. ಕೆ.ಆರ್ ಮಾರ್ಕೆಟ್ ವಾರ್ಡ್ ಸಂಖ್ಯೆ: 139 ಮಧ್ಯಾಹ್ನ ಪಾಳಿ ಹಾಗೂ ರಾತ್ರಿ ಪಾಳಿ ಕಾನೂನುಬಾಹಿರವಾಗಿ ಕಾರ್ಯದೇಶವನ್ನು ನೀಡಿ ಬಿಲ್‍ಗಳ ಮೊತ್ತವನ್ನು ನೀಡಿರುತ್ತಾರೆ. ಗುತ್ತಿಗೆ ಪೌರಕಾರ್ಮಿಕರಿಗೆ & ಖಾಯಂ ಪೌರಕಾರ್ಮಿಕರಿಗೆ ಸಲಕರಣಿಗಳನ್ನು ನೀಡಲು ನೆಪ ಮಾತ್ರಕ್ಕೆ ಕಾರ್ಯದೇಶವನ್ನು ನೀಡಿ ಪೌರಕಾರ್ಮಿಕರ ರಕ್ಷಣೆಗೆ ನೀಡಬೇಕಾದ ಸಲಕರಣಿಗಳನ್ನೂ ನೀಡದೆ ಬೋಗಸ್ ಬಿಲ್‍ಗಳನ್ನು ನೀಡಿರುತ್ತಾರೆ ಎಂದು ಸಿ ಎಸ್‌ ರಘು ಆರೋಪಿಸಿದರು.

ಈಗಾಗಲೇ ಪಾಲಿಕೆಯ ಆಧಾರದಲ್ಲಿ 629 ಕಾಂಪ್ಯಾಕ್ಟರ್‍ಗಳನ್ನು ಘಟಕಗಳು / ಕ್ವಾರೆಗಳಿಗೆ ನಿಯೋಜಿಸಲಾಗಿದ್ದು ಇದರಲ್ಲಿ ಕೇವಲ 489 ಕಾಂಪ್ಯಾಕ್ಟರ್‍ಗಳು ಮಾತ್ರ ಅಧಿಕೃತವಾಗಿವೆ, ಅವುಗಳಲ್ಲಿ ಕೇವಲ 340 ರಿಂದ 350 ಕಾಂಪ್ಯಾಕ್ಟರ್‍ಗಳು ಮಾತ್ರ ಪ್ರತಿದಿನ ಘಟಕಗಳು/ ಕ್ವಾರೆಗಳಿಗೆ ತಲುಪಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಇಷ್ಟೇಲ್ಲಾ ಮಾಹಿತಿ ಇದ್ದರೂ ಅಧಿಕಾರಿಗಳು ಪಾಲಿಕೆ ಆರ್ಥಿಕ ಹಿತದೃಷ್ಟಿಯಿಂದ ಕಾನೂನ್ಮತಕ ಕ್ರಮಕೈಗೊಳ್ಳದೆ ನಿಯೋಜಿತ ಎಲ್ಲಾ ವಾಹನಗಳಿಗೂ ಸಹಾ ಕಸ ವಿಲೇವಾರಿ ಘಟಕಗಳಿಗೆ ತೆರಳದೆ ಇದ್ದರೂ ಗುತ್ತಿಗೆದಾರರಿಗೆ ನೂರಕ್ಕೆ ನೂರರಷ್ಟು ಹಣ ಪಾವತಿಸಿರುವುಸುದು ಅಕ್ರಮ ಹಾಗೂ ಕಾನೂನು ಬಾಹಿರವಾದ ಕ್ರಮವಾಗಿದ್ದು ಇದು ಪಾಲಿಕೆಯ ಆರ್ಥಿಕ ವಿರೋಧಿ ನೀತಿಯಾಗಿರುತ್ತದೆ ಎಂದು ಹೇಳಿದರು.

ಗುತ್ತಿಗೆ ಪೌರಕರ್ಮಿಕರಿಗೆ 2018 ರಿಂದ ಇಲ್ಲಿಯವರೆವಿಗೂ ಇ.ಎಸ್.ಐ ಹಾಗೂ ಪಿ.ಎಫ್ ಪಾವತಿ ಮಾಡದೇ ನಿರ್ಲಷಿಸಿರುತ್ತಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ಸುಮಾರು 4 ಸಾವಿರ ಟನ್ ಅಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಪಾಲಿಕೆಯಿಂದ ನಿಯೋಜಿಸಿದ ಸಂಖ್ಯೆಯಲ್ಲಿ ಕಾಂಪ್ಯಕ್ಟರ್ ವಾಹನಗಳು, ಸಂಸ್ಕರಣಾ ಘಟಕಗಳು / ವೈಜ್ಞಾನಿಕ ಭೂ-ಭರ್ತಿ ಜಾಗಗಳಿಗೆ ಕೇಳದೆ ಇರುವುದು ಕಂಡುಬಂದಿದ್ದರೂ ಸಹಾ ಪ್ರತಿ ತಿಂಗಳು ಕೊನೆಯಲ್ಲಿ ನಿಯೋಜಿತ ಎಲ್ಲಾ ವಾಹನಗಳಿಗೂ ನೂರಕ್ಕೆ ನೂರರಷ್ಟು ಅಕ್ರಮವಾಗಿ ಗುತ್ತಿಗೆದಾರರಿಗೆ ಹಣ ಪಾವತಿಯಾಗುತ್ತಿರುವುದು ಪಾಲಿಕೆಗೆ ಆರ್ಥಿಕ ನಷ್ಟ ಆಗುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

9 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

20 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

20 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

22 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

22 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

22 hours ago