ಶಹಾಬಾದ:ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಚಿಂತನೆ, ಮೌಲ್ಯಗಳು ಇಡೀ ಜಗತ್ತಿಗೆ ಆದರ್ಶ ಪ್ರಾಯ ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ವಿದ್ಯಾಸಾಗರ ಕುಲಕರ್ಣಿ ಹೇಳಿದರು.
ಅವರು ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರಾಮಾಣಿಕ ವ್ಯಕ್ತಿಯಾಗಿದ್ದ ಅವರು ತನಗಾಗಿ ಏನನ್ನು ಬಯಸಲಿಲ್ಲ. ಪಕ್ಷದ ಏಳಿಗೆಗಾಗಿ ದುಡಿದ ಧೀಮಂತ ನಾಯಕ. ಇಂದು ನಾವೆಲ್ಲರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಘಟಿತರಾಗಬೇಕಿದೆ ಹಾಗೂ ಪಕ್ಷವನ್ನು ಸಂಘಟಿಸಬೇಕಾಗಿದಲ್ಲದೇ, ದೇಶದ ಭದ್ರತೆಗಾಗಿ ಎಲ್ಲರೂ ದೀನ ದಯಾಳ್ ಉಪಾಧ್ಯಾಯ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳು ಅಗತ್ಯವಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಚಂದ್ರಕಾಂತ ಗೊಬ್ಬರಕರ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಳೆಯಲು ಕಾರಣರಾದವರು ದೀನ ದಯಾಳರು. ಇವರು ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರಲ್ಲೂ ರಾಷ್ಟ್ರಪ್ರೇಮ ಮೂಡಿಸಬೇಕು ಎಂಬ ಭಾವನೆ ಹೊಂದಿದ್ದರು ಎಂದು ಹೇಳಿದರು.
ಸಂಚಾಲಕರಾದ ಅನೀಲ ಬೋರಗಾಂವಕರ್, ಸುಭಾಷ ಜಾಪೂರ,ನಿಂಗಣ್ಣ ಹುಳಗೋಳಕರ್, ಮಹಾದೇವ ಗೊಬ್ಬೂರಕರ್, ಶ್ರೀಧರ ಜೋಷಿ, ಶಶಿಕಲಾ ಸಜ್ಜನ್, ಶಂಕರ ಭಗಾಡೆ, ರತ್ನಾ ಬಿರಾದಾರ, ಜಯಶ್ರೀ ಸೂಡಿ, ಕನಕಪ್ಪ ದಂಡಗುಲಕರ್, ಬೀಮರಾವ ಸಾಳುಂಕೆ,ಬಸವರಾಜ ಬಿರಾದಾರ, ಸಂಜಯ ಕೋರೆ,ಸಂಜಯ ವಿಟಕರ್,ಅಶೋಕ ಜಿಂಗಾಡೆ,,ಅನೀಲ ಹಿಬಾರೆ, ಭೀಮಯ್ಯ ಗುತ್ತೆದಾರ, ಯಲ್ಲಪ್ಪ ದಂಡಗುಲಕರ್,ರಾಜು ದಂಡಗುಲಕರ್,ಉಮೇಶ ಪೊಚ್ಚಟ್ಟಿ,ಮನೋಹರ ಮೇತ್ರೆ, ರಾಮು ಕುಸಾಳೆ,ವಿರೇಶ ಬಂದೆಳ್ಳಿ, ಸತೀಶ ರ್ಯಾಪನೂರ,ದತ್ತು ಘಂಟಿ, ಮೋಹನ ಘಂಟ್ಲಿ,ಜಗದೇವ ಸುಬೇದಾರ, ಸಂಜಯ ಸೂಡಿ ಇತರರು ಇದ್ದರು.
ಸದಾನಂದ ಕುಂಬಾರ ನಿರೂಪಿಸಿದರು, ಶರಣು ವಸ್ತ್ರದ್ ಸ್ವಾಗತಿಸಿದರು, ಅಮರ ಕೋರೆ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…