ಬಿಸಿ ಬಿಸಿ ಸುದ್ದಿ

ಪತ್ರಕರ್ತ ಗೋಪಾಲರಾವ್ ಕುಲಕರ್ಣಿ ಕುಟುಂಬಕ್ಕೆ ಕೆಜೆಯು ಸಾಂತ್ವಾನದ ನೆರವು

ಸುರಪುರ: ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾದ ಹುಣಸಗಿಯ ಪತ್ರಕರ್ತ ಗೋಪಾಲರಾವ್ ಅವರ ಹುಣಸಗಿ ತಾಲೂಕಿನ ವಜ್ಜ ಗ್ರಾಮದಲ್ಲಿನ ಕುಟುಂಬಕ್ಕೆ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಮುಖಂಡರು ಭೇಟಿ ನೀಡಿ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ್ ಮಾತನಾಡಿ,ಗೋಪಾಲರಾವ್ ಕುಲಕರ್ಣಿಯವರು ಒಬ್ಬ ಸಮಾಜಮುಖಿ ಚಿಂತನೇಯ ಪತ್ರಕರ್ತರಾಗಿದ್ದರು.ಅವರು ವರದಿಗಾರರಾಗಿ ಜೊತೆಗೆ ನಮ್ಮ ಕೆಜೆಯುನ ಹಿತೈಷಿಗಳಾಗಿ ಅನೇಕ ಬಾರಿ ಮಾರ್ಗದರ್ಶನ ಮಾಡಿದ್ದರು.ಅಂತವರನ್ನು ಕಳೆದುಕೊಂಡು ದೊಡ್ಡ ನಷ್ಟವುಂಟಾಗಿ ಎಂದು ಬೇಸರ ವ್ಯಕ್ತಪಡಿಸಿದರು.

ಅವರು ಅನಾರೋಗ್ಯಕ್ಕೀಡಾದರು ತಮ್ಮ ವೃತ್ತಿ ಧರ್ಮವನ್ನು ಮರೆತಿರಲಿಲ್ಲ,ಅವರು ಇಂದಿನ ಅನೇಕ ಜನ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದರು ಅವರ ನಿಧನ ತುಂಬಾ ನೋವು ಮೂಡಿಸಿದೆ.ಕೆಜೆಯುನ ಎಲ್ಲರು ಒಂದೇ ಕುಟುಂಬದವರಿದ್ದಂತೆ ಆದ್ದರಿಂದ ನಾವೆಲ್ಲರು ಸದಾಕಾಲ ಅವರ ಕುಟುಂಬ ವರ್ಗದ ಜೊತೆಗಿರುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಕೆಜೆಯು ವತಿಯಿಂದ ೧೦ ಸಾವಿರ ರೂಪಾಯಿಗಳ ಧನ ಸಹಾಯವನ್ನು ಮಾಡಿ ಸಾಂತ್ವಾನ ಹೇಳಲಾಯಿತು.

ಈ ಸಂದರ್ಭದಲ್ಲಿ ಕೆಜೆಯು ರಾಜ್ಯ ಸಮಿತಿ ಸದಸ್ಯರಾದ ಪವನ್ ಕುಲಕರ್ಣಿ ಗೋಪಾಲರಾವ್ ಅವರ ಸಹೋದರ ಭೀಮಶೇನರಾವ್ ಕುಲಕರ್ಣಿ,ಧೀರೇಂದ್ರ ಕುಲರ್ಣಿ ಕೆಜೆಯು ಸುರಪುರ ತಾಲೂಕು ಅಧ್ಯಕ್ಷ ರಾಜು ಕುಂಬಾರ ಉಪಾಧ್ಯಕ್ಷ ರವಿರಾಜ ಕಂದಳ್ಳಿ ಪ್ರಧಾನ ಕಾರ್ಯದರ್ಶಿ ಪರಶುರಾಮ ನಾಯಕ ಹುಣಸಗಿ ತಾಲೂಕು ಅಧ್ಯಕ್ಷ ಬಾಪುಗೌಡ ಮೇಟಿ ಬಸವರಾಜ ಕಟ್ಟಿಮನಿ ಮಹಾದೇವಪ್ಪ ಬೊಮ್ಮನಹಳ್ಳಿ ರಾಘವೇಂದ್ರ ಮಾಸ್ತರ್ ಮನಮೋಹನ್ ಪ್ರತಿಹಸ್ತ ಪುರುಷೋತ್ತಮ ದೇವತ್ಕಲ್ ಹಣಮಂತ ತಳವಾರ ಚೆನ್ನೂರ ಸೇರಿದಂತೆ ಗೋಪಾಲರಾವ್ ಅವರ ಕುಟುಂಬ ವರ್ಗ ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago