ಯಾದಗಿರಿ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಹೆಣ್ಣು ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ, ಮಾದಿಗ ಯುವಸೇನೆ ಜಿಲ್ಲಾ ಸಮಿತಿಯಿಂದ ಯಾದಗಿರಿ ಹುಣಸಗಿ ತಾಲ್ಲೂಕು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು.
ಈ ವೇಳೆಯಲ್ಇಲ ಜಿಲ್ಲಾಧ್ಯಕ್ಷ ರಾಗಿರುವ ಬಸವರಾಜ ಹಗರಟಗಿ ಮಾತನಾಡಿ, ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿ ಮನುಷ್ಯ ವಾಲ್ಮೀಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಅಂತ ಹೇಯ ಕೃತ್ಯವಾಗಿದ್ದು, ಉತ್ತರ ಪ್ರದೇಶ ಸರ್ಕಾರ ಅಪರಾಧಿಗಳ ರಕ್ಷಣೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಈ ಘಟನೆಯಲ್ಲಿ ಪೊಲೀಸರು ತೋರಿಸಿದ ಅವಸರವೇ ಕರ್ತವ್ಯ ಗಮನಿಸಿದರೆ ಪ್ರಾಮಾಣಿಕ ತನಿಖೆ ಅನುಮಾನವಾಗಿದೆ ದಲಿತ ಹೆಣ್ಣು ಮಕ್ಕಳಿಗೆ ದೇಶದ ಹಾಗೂ ರಾಜ್ಯದಲ್ಲಿ ಇರುವ ಆತಂಕ ಅಭದ್ರತೆಗಳು ಉತ್ತರಪ್ರದೇಶ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಈ ಪ್ರಕರಣ ಎತ್ತಿ ತೋರಿಸುತ್ತದೆ ದೇಶದಲ್ಲಿ ನಿರ್ಭಯಾ ಪ್ರಕರಣ ಇನ್ನೂ ನೆನಪಿನಲ್ಲಿರುವಾಗಲೇ ಮತ್ತೊಮ್ಮೆ ದೇಶದಲ್ಲಿ ದಲಿತ ಹಾಗೂ ಹೆಣ್ಣು ಮಕ್ಕಳ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ನಡೆದಿರುವುದು ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಗಿದೆ ಎಂದರು.
ಬಸವರಾಜ್ ಎಸ್ ಕಟ್ಟಿಮನಿ ಕಾಮನಟಗಿ ಮಾತನಾಡಿ, ಪ್ರಜಾಪ್ರಭುತ್ವ ದೇಶ ಎಂಬುದನ್ನೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮರೆತಂತಿದೆ ತನ್ನ ಸರ್ವಾಧಿಕಾರಿ ಧೋರಣೆಯಿಂದ ಈ ಪ್ರಕರಣವನ್ನು ಮುಚ್ಚಿ ಹಾಕಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದ್ದಾರೆ ಸಂತ್ರಸ್ತೆಯ ಶವವನ್ನು ಅವರ ಕುಟುಂಬಕ್ಕೆ ನೀಡದೆ ಅವಸರವಾಗಿ ಪೊಲೀಸರ ಮುಂದೆ ನಿಂತು ಸುಟ್ಟು ಹಾಕಿರುವುದು ಪೊಲೀಸರೇ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶ ಮಾಡಲು ಮುಂದಾಗಿದ್ದಾರೆ ಈ ಪ್ರಕರಣಕ್ಕೆ ಪಾರದರ್ಶಕ ತನಿಖೆ ಈಗಿನ ಅಗತ್ಯವಾಗಿದೆ ಎಂದು ಒತ್ತಾಯಿಸಿದರು.
ಪ್ರಭಾವಿಗಳ ಕೈವಾಡವಿದ್ದರೂ ಅಂತರವನ್ನು ಹಿಡಿದು ಕಠಿಣ ಶಿಕ್ಷೆಗೊಳಪಡಿಸುವ ಕೆಲಸ ಸರ್ಕಾರ ಮಾಡಬೇಕು ಪ್ರಕರಣವನ್ನು ಅತಿ ಸೂಕ್ಷ್ಮ ರೀತಿಯಲ್ಲಿ ನಡೆಸಿ ಅನೇಕ ಅನುಮಾನಗಳಿಗೆ ಕಾರಣವಾದ ಸಂತ್ರಸ್ತೆಗೆ ಗೌರಯುತ ಶವಸಂಸ್ಕಾರ ಕೂಡ ಮಾಡದಂತೆ ಮಾಡಿದ ಪೊಲೀಸರು ಸಾಕ್ಷ್ಯನಾಶ ಕೆಲಸಕ್ಕೆ ಕೈ ಹಾಕಿರುವ ಪೊಲೀಸರ ವಿರುದ್ಧ ಅಪರಾಧ ಪ್ರಕರಣವನ್ನು ದಾಖಲಿಸಬೇಕು ಈ ಪ್ರಕರಣವನ್ನು ಅತ್ಯಂತ ಪ್ರಾಮಾಣಿಕವಾಗಿ ತನಿಖೆ ನಡೆಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ತನಿಖೆಯಾಗಬೇಕು ಸಂತ್ರಸ್ತ ಕುಟುಂಬಕ್ಕೆ ಭದ್ರತೆ ಒದಗಿಸಬೇಕು.
ಇಂಥ ಘಟನೆಗಳು ಮರುಕಳಿಸದಂತೆ ಅಪರಾಧಿಗಳಿಗೆ ಹಾಗೂ ಅಪರಾಧವೆಸಗಲು ಸಂಚು ಹಾಕುತ್ತಿರುವವರಿಗೆ ಎಚ್ಚರಿಕೆ ಗಂಟೆಯಾಗಬೇಕು ಇಂಥ ಘಟನೆಗಳು ದೇಶದ ಘನತೆಗೆ ಕುಗ್ಗಿಸುತ್ತದೆ ಉತ್ತರಪ್ರದೇಶ ಸರ್ಕಾರ ಸರ್ವಾಧಿಕಾರಿ ಧೋರಣೆ ಅಧಿಕಾರ ದುರುಪಯೋಗ ಸಂವಿಧಾನ ಉಲ್ಲಂಘನೆ ಕಾನೂನು ದುರುಪಯೋಗ ದಂತಹ ಪ್ರಜಾಪ್ರಭುತ್ವ ವಿರೋಧಿಗಳು ನಿಲ್ಲಲಿ ಅಭಿವ್ಯಕ್ತ ಸ್ವಾತಂತ್ರ್ಯ ಮಾನವ ಹಕ್ಕುಗಳ ಸಂರಕ್ಷಣೆಯಾಗಲಿ ಸಂವಿಧಾನದ ಆಡಳಿತ ನಡೆಯಲಿ ಭಾರತ ದೇಶದಲ್ಲಿ ಅಪರಾಧಿಗಳಿಗೆ ಜಾಗವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನ ಆಗಲಿ ಎಂದು ಆಗ್ರಹಿಸಿದರು.
ಹುಸೇನ್ ಸಾಬ್ ಗಾದಿ ಮಾತನಾಡಿ ಇವತ್ತು ವಾಲ್ಮೀಕಿ ಜನಾಂಗದ ಮಹಿಳೆ ಮೇಲೆ ಅತ್ಯಾಚಾರವಾಗಿದೆ ನಾಳೆ ನಮ್ಮ ನಿಮ್ಮೆಲ್ಲರ ಸಮುದಾಯದ ಮೇಲೆ ಇಂಥ ಹೇಯ ಕೃತ್ಯ ನಡೆಯುವುದಿಲ್ಲ ಎಂಬುದು ಯಾವುದೇ ಅನುಮಾನವಿಲ್ಲ ಅಂತ ನೀಚ ಕೃತ್ಯ ಎಸಗಿದವರಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕೆಂದು ಹೇಳಿದರು. ರಸ್ತೆ ತಡೆದು ಪ್ರತಿಭಟನೆಯ ನಂತರ ಉಪ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಬೇಡಿಕೆ ಈಡೇರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ತಾಲೂಕು ಅಧ್ಯಕ್ಷರಾದ ಬಸವರಾಜ ಎಸ್ ಕಟ್ಟಿಮನಿ, ಭಿಮು ಚ್ಯನಿ, ಹುಸೇಸಾಬ ಗಾದಿ, ದುರ್ಗಪ್ಪ ಮಾದರ ಮಲ್ಲಿಕಾರ್ಜುನ, ಪ್ರಭು ದೊಡ್ಮನಿ, ಬಸವರಾಜ, ದೇವಪ್ಪ ಯಡಹಳ್ಳಿ, ಹುಲುಗಪ್ಪ ಯಡಹಳ್ಳಿ, ಹನುಮಪ್ಪ ಯಡಹಳ್ಳಿ, ಮುದುಕಪ್ಪ ಆನೆಕೆ, ಸೋಮಶೇಖರ್, ಮಾನಪ್ಪ ಕಟ್ಟಿಮನಿ, ಸೋಮಪ್ಪ ಗೊಜ್ಜಿಗೆ, ಸಿದ್ದಪ್ಪ ಕಲ್ಲೂರು, ಮಾನಪ್ಪ ಯಡಹಳ್ಳಿ, ನಾಗಪ್ಪ ಯಡಹಳ್ಳಿ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…