ಕಲಬುರಗಿ: ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವಾದರ್ಶಗಳು ಇಂದು ಇಡೀ ಜಗತ್ತಿಗೆ ಮಾದರಿಯಾಗಿವೆ ಎಂದು ಸಾಂಸ್ಕೃತಿಕ ಸಂಘಟಿಕ ವಿಜಯಕುಮಾರ ತೇಗಲತಿಪ್ಪಿ ಅವರು ಇಂದಿಲ್ಲಿ ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣ ಮುಂದೆ ಏರ್ಪಡಿಸಿದ ಮಹಾ ನಾಯಕ ಧಾರಾವಾಹಿಯ ಡಾ ಅಂಬೇಡ್ಕರರ ಫ್ಲೇಕ್ಸ್ ಹಾಗೂ ವಿಚಾರ ಗೋಷ್ಠಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಬೇಡ್ಕರ್ ಕೇವಲ ದಲಿತ ನಾಯಕರಾಗದೇ ಸರ್ವ ಜನಾಂಗದ ಮಹಾ ನಾಯಕರು. ಇಂದು ನಮ್ಮ ದೇಶದಲ್ಲಿ ಅವರ ಜಾತಿ ನೋಡುತ್ತಾರೆ. ಆದರೆ ವಿಶ್ವದಲ್ಲಿ ಜ್ಞಾನ ಶಿಖರದ ಬಗ್ಗೆ ನೋಡುತ್ತಾರೆ. ಆದರೆ ಭಾರತೀಯರ ನೋಡುವ ದೃಷ್ಠಿಕೋನ ಬದಲಾವಣೆಯಾಗಬೇಕಾಗಿದೆ ಎಂದರು.
ಕರ್ನಾಟಕ ಕಾರ್ಯ ನಿರತ ಪರ್ತಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಗುರುಬಸಪ್ಪ ಸಜ್ಜನಶೇಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಮಾಜ ಸುಧಾರಕರ ಜಾತಿ ನೋಡದೇ ಅವರ ಸಾಧನೆ ಮತ್ತು ಜೀವನ ಸಂದೇಶಗಳು ಮಾದರಿಯಾಗಿಟ್ಟು ಕೊಳ್ಳಬೇಕು. ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಬದುಕನ್ನು ಅರ್ಥ ಮಾಡಿ ಕೊಂಡರೆ ಭಾರತದ ಇತಿಹಾಸವನ್ನು ಅರಿಯಬಹುದು ಎಂದರು.
ಕಾರ್ಯಕ್ರಮ ಸಂಘಟಿಕ ಶಂಕರ ಪಟ್ಟಣಕರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕವಿ ಧರ್ಮಣ್ಣ ಧನ್ನಿ, ಎಕೆಆರ್ ದೇವಿ ಕಾಲೇಜಿನ ಕಾರ್ಯದರ್ಶಿ ವಿದ್ಯಾಸಾಗರ ದೇಶಮುಖ, ದಲಿತ ಮುಖಂಡರಾದ ಹಣಮಂತ ಬೋಧನಕರ, ಸುರೇಶ ಹಾದಿಮನಿ, ಪ್ರಭಾವ ಪಟ್ಟಣಕರ, ದೇವೇಂದ್ರ ಸಿನ್ನೂರಕರ, ನಿವೃತ್ ಶಿಕ್ಷಕ ನಾಗಪ್ಪ ಹಾಗರಗಿ, ಸಂಜೀವಕುಮಾರ ಪಟ್ಟಣಕರ, ಮಾರುತಿ ಕಾಂಬಳೆ, ಸಿದ್ರಾಮಪ್ಪ ಅಂಬಲಗಿ, ಜಗದೇವಿ ಪಟ್ಟಣಕರ, ರೇಷ್ಮಾ ಸುಲ್ತಾನಪೂರ, ಅಪ್ಪಾರಾಯ ಶಿಲ್ಡ ಸೇರಿದಂತೆ ಇತರರರಿದ್ದರು.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…