ಬಿಸಿ ಬಿಸಿ ಸುದ್ದಿ

ನಿಸ್ವಾರ್ಥ ಮನೋಭಾವದಿಂದ ಸಮಾಜ ಸೇವೆ ಮಾಡಿ: ಸಂಗಮೇಶ ಸರಡಗಿ

ಕಲಬುರಗಿ: ನಡೆಯೊದಾರಿಯಲ್ಲಿ ನಿಯತ್ತು ಇದ್ದರೆ ತಡೆಯೊ ತಾಕತ್ತು ಯಾರಿಗೂ ಇರುವುದಿಲ್ಲ.ಶುದ್ದ ಭಾವದಿಂದ ಕಾರ್ಯಮಾಡಿದರೆ ತನಗರಿವಿಲ್ಲದಂತೆ ಮನುಷ್ಯ ಬೆಳೆದು ನಿಲ್ಲುತ್ತಾನೆ ಎಂದು ಕೆ.ಎಚ್.ಬಿ ಗ್ರೀನ್ ಪಾರ್ಕನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವ ಸಲಹೆಗಾರ ಸಂಗಮೇಶ ಸರಡಗಿ ಹೇಳಿದರು.

ನಗರದ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಕಾರ್ಯಕ್ರಮ ಆಯೋಜಿಸಿ ಉಮಾಕಾಂತ ಟಿ ಅವರು ಕೆ.ಎಚ್.ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳಿಗೆಸನ್ಮಾನ ಸಮಾರಂಭದಲ್ಲಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡವರು ಜಾತಿ ಮತ ಬೇಧವನ್ನುಬದಿಗಿರಿಸಿ,ನಿಸ್ವಾರ್ಥ ಮನೋಭಾವದಿಂದ ಕೆಲಸ ನಿರ್ವಹಿಸಿ ಪ್ರಾಮಾಣಿಕ ಕಾರ್ಯಮಾಡುತ್ತಾ ಸಾಗಿದರೆ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ನೂತನ ಅದ್ಯಕ್ಷ ಸಂಜೀವಕುಮಾರ ಶೆಟ್ಟಿ ಮಾತನಾಡಿ ಬಡಾವಣೆಯ ಎಲ್ಲಾ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನುಒದಗಿಸುವ ನಿಟ್ಟಿನಲ್ಲಿ ನಮ್ಮ ಕ್ರಿಯಾಶೀಲ ಸಂಘ ಕೆಲಸ‌ ಮಾಡುತ್ತದೆ. ತಮ್ಮೆಲ್ಲರ ಸಹಕಾರದಿಂದ ನಾವೆಲ್ಲರೂ ಸೇರಿ ಹೆಸರಿಗೆ ತಕ್ಕ ಹಾಗೆಹಸಿರೆ ಉಸಿರಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಕಾನೂನು ಸಲಹೆಗಾರರು ಹಣಮಂತ್ರಾಯಎಸ್. ಅಟ್ಟೂರ ನ್ಯಾಯವಾದಿಗಳು ಮಾತನಾಡಿದರು, ಕಾರ್ಯಕ್ರಮದಲ್ಲಿ ಗೌರವಾದ್ಯಕ್ಷ ನಾಗೆಂದ್ರಪ್ಪ ಆರ್. ದಂಡೋತಿಕರ, ಉಪಾದ್ಯಕ್ಷ ಬಾಲಕೃಷ್ಣ ಕೆ.ಕುಲಕರ್ಣಿ, ಕಾರ್ಯದರ್ಶಿ ರಾಜೇಶ ಕೆ. ನಾಗಬುಜಂಗೆ, ಸಹ-ಕಾರ್ಯದರ್ಶಿ ಶ್ರೀನಿವಾಸ ಎಮ್.ಬುಜ್ಜಿ, ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ ಪಿ.ತಳವಾರ, ಮಂಜುನಾಥ ಎಸ್.ಬೆಳಮಗಿ, ರೇವಣಸಿದ್ದಪ್ಪಎಸ್.ರುದ್ರವಾಡಿ,ಶರಣಬಸಪ್ಪ ದೇಶಟ್ಟಿ , ಸಹ-ಸಂಘಟನಾಕಾರ್ಯದರ್ಶಿ ಸಂತೋಷ ಎ. ಹೂಗಾರ, ಖಜಾಂಚಿ ದಿಗಂಬರರಾವ.ವಿ.ಕುಲಕರ್ಣಿ, ಗೌರವ ಸಲಹೆಗಾರ ಕೆ.ಎಮ್.ಲೋಕಯ್ಯ , ಸಂಗಮೇಶ ಸರಡಗಿ, ರಮೇಶಕೋರಿಶೆಟ್ಟಿ,ಶಿವರಾಯಗೌಡ ಮುದ್ದಡಗಾ, ಮಾಧ್ಯಮಪ್ರತಿನಿದಿ ಬಸವರಾಜ ಹೆಳವರ ಯಾಳಗಿ ಹಾಗೂ ಎಲ್ಲಾ 26 ಬ್ಲಾಕನ ಪ್ರತಿನಿಧಿಗಳು ಹಾಗೂ ನಿತೇಶ ಟಿ, ನವೀನ ಟಿ, ವಿಶ್ವ ಯಕಾಪೂರ, ಬಸವರಾಜ ರಟಕಲ, ಪುಂಡಲೀಕಜಮಾದಾರ, ಸುಭಾಷ ಪಾಟೀಲ, ಚಂದ್ರಕಾಂತಕಟಕೆ, ವಿನಯ ಪಾಟೀಲ ಇನ್ನಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿಕಾಶಿನಾಥ ಗಾಯಕವಾಡ ಸ್ವಾಗತಿಸಿದರು, ವಿರೇಶ ಬೋಳಶೆಟ್ಟಿ ನರೊಣಕಾರ್ಯಕ್ರಮ ನಿರೂಪಿಸಿದರು, ರಮೇಶ ಕೋರಿಶೆಟ್ಟ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago