ಬಿಸಿ ಬಿಸಿ ಸುದ್ದಿ

ವಿ.ಜಿ.ಎಸ್.ಟಿ. ಸ್ಕೀಮಿಗೆ ಪಿ.ಡಿ.ಎ. ಕಾಲೇಜು ಆಯ್ಕೆ

ಕಲಬುರಗಿ: ಕರ್ನಾಟಕ ಸರಕಾರದ ಐಟಿ ಬಿಟಿ ಮತ್ತು ವಿಜ್ಞಾ ಮತ್ತು ತಂತ್ರಜ್ಞಾ ವಿಭಾಗದ ವಿಜನ್ ಗ್ರುಪ್ ಆನ್ ಸಾಯಿನ್ಸ್ ಆಂಡ್ ಟೆಕ್ನಾಲಜಿ (ವಿ.ಜಿ.ಎಸ್.ಟಿ.) ವತಿಯಿಂದ ಕೊಡಮಾಡುವ ೨೦೧೯-೨೦ ನೇ ಶೈಕ್ಷಣಿಕ ಸಾಲಿನ ಕೆ.ಫಿಸ್ಟ್ – ಎಲ್ ೧ ಗೆ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾ ಮತ್ತು ತಂತ್ರಜ್ಞಾ ವಿಭಾಗವು ಆಯ್ಕೆಗೊಂಡಿದ್ದು ಅವರು ಮಂಡಿಸಿದ “ನೆಕ್ಸ್ಟ ಜನರೇಶನ್ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮತ್ತು ಆಗುಮೆಂಟೆಡ್ ರಿಯಾಲಿಟಿ ಲ್ಯಾಬ” ಎಂಬ ಪ್ರೋಜೆಕ್ಟಗೆ ೧೫ ಲಕ್ಷ ರೂಗಳ ಅನುದಾನ ದೊರಕಿದೆ.

ನೆಕ್ಸ್ಟ ಜನರೇಶನ್ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮತ್ತು ಆಗುಮೆಂಟೆಡ್ ರಿಯಾಲಿಟಿ ಪ್ರಸ್ತುತ ಜಗತ್ತಿನ ನೂತನ ಆವಿಷ್ಕಾರವಾಗಿದ್ದು ಮುಂಬರುವ “ಸ್ಮಾರ್ಟ್ ಫೋನ್”, ೩-ಡಿ ಕಂಪ್ಯೂಟರ ಮತ್ತು ಲ್ಯಾಪಟಾಪಗಳಲ್ಲಿ ಈ ತಂತ್ರಜ್ಞಾ ಅಳವಡಿಸಲಾಗುವುದು. ಈ ತಂತ್ರಜ್ಞಾವನ್ನು ಪಿ.ಡಿ.ಎ. ತಾಂತ್ರಿಕ ಕಾಲೇಜಿನಲ್ಲಿ ಅಳವಡಿಸಿಕೊಳ್ಳಲು ಮಾಹಿತಿ ವಿಜ್ಞಾ ವಿಭಾಗವು ರೂಪರೇಶೆಗಳನ್ನು ತಯ್ಯಾರಿಸಿಕೊಂಡಿದ್ದು ಮುಂಬರವ ದಿನಗಳಲ್ಲಿ ಹಂತ ಹಂತವಾಗಿ ಅದನ್ನು ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ಹೊಂದಿದೆ. ನೆಕ್ಸ್ಟ ಜನರೇಶನ್ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮತ್ತು ಆಗುಮೆಂಟೆಡ್ ರಿಯಾಲಿಟಿ ಲ್ಯಾಬನ ಪ್ರಮುಖ ಸಂಚಾಲಕರಾಗಿ ಡಾ. ಭಾರತಿ ಹರಸೂರ ಮತ್ತು ಪ್ರಮುಖ ಸಹ-ಸಂಚಾಲಕರಾಗಿ ಪ್ರೊ. ಅಶೋಕ ಪಾಟೀಲ ಅವರು ತಮ್ಮ ಕಾರ್ಯವನ್ನು ನಿರ್ವಹಿಸಲಿದ್ದಾರೆ.

ವಿ.ಜಿ.ಎಸ್.ಟಿ. ಸ್ಕೀಮಿಗೆ ಪಿ.ಡಿ.ಎ. ಕಾಲೇಜು ಆಯ್ಕೆಯಾಗಿರುವುದು ತಮಗೆ ಸಂತಸ ತಂದಿದ್ದು ಕಾಲೇಜಿನಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ ಎಂದು ಹೇಳಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ ಬಿಲಗುಂದಿಯವರು ಕಾಲೇಜಿನ ಪ್ರಾಚಾರ್ಯ ಮತ್ತು ಮಾಹಿತಿ ವಿಜ್ಞಾ ವಿಭಾಗದ ಸದಸ್ಯರಿಗೆ ತಮ್ಮ ಅಭಿನಂದನೆ ಸಲ್ಲಿಸಿದರು. ಪಿ.ಡಿ.ಎ. ಕಾಲೇಜಿನ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಶಿವಾನಂದ ಎಸ್. ದೇವರಮನಿ, ಕಾರ್ಯದರ್ಶಿಗಳಾದ ನಿತಿನ ಬಿ. ಆವಳಿ, ಆಡಳಿತ ಮಂಡಳಿ ಸದಸ್ಯರಾದ ವಿಜಯಕುಮಾರ ಜೆ. ದೇಶಮುಖ, ಸಂಪತಕುಮಾರ ಡಿ. ಲೋಯಾ ಹಾಗೂ ಸತೀಶ್ಚಂದ್ರ ಸಿ. ಹಡಗಲಿಮಠ ಅವರು ತಮ್ಮ ಹರ್ಷ ವ್ಯಕ್ತಪಡಿಸಿದರು.

ಪಿ.ಡಿ.ಎ. ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಎಸ. ಹೆಬ್ಬಾಳ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ ವಿ.ಜಿ.ಎಸ್.ಟಿ.ಯ ಈ ಸ್ಕೀಮಿನಲ್ಲಿ ರಾಜ್ಯಾದ್ಯಂತ ೨೦ ಕಾಲೇಜುಗಳು ಆಯ್ಕೆಗೊಂಡಿದ್ದು ಕಲ್ಯಾಣ ಕರ್ನಾಟಕದಿಂದ ನಾಲ್ಕು ಕಾಲೇಜುಗಳಿಗೆ ಅನುದಾನ ದೊರಕಿದ್ದು, ಕಲಬುರರ್ಗಿ ನಗರದಿಂದ ಕೇವಲ ಪಿ.ಡಿ.ಎ. ಕಾಲೇಜು ಆಯ್ಕೆಗೊಂಡಿರುವುದು ವಿಶೇಷವಾಗಿದೆ ಎಂದರು.

ಅವರು ಮಾಹಿತಿ ವಿಜ್ಞಾ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಮತ್ತು ಈ ಪ್ರಾಜೆಕ್ಟನ ಪ್ರಮುಖ ಸಂಚಾಲಕರಾದ ಡಾ. ಭಾರತಿ ಹರಸೂರ ಮತ್ತು ಪ್ರಮುಖ ಸಹ-ಸಂಚಾಲಕರಾದ ಪ್ರೊ. ಅಶೋಕ ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸುತ್ತ ಈ ರೀತಿಯ ಪ್ರಾಜೆಕ್ಟಗಳು ರಾಜ್ಯದಲ್ಲಿ ವಿರಳವಾಗಿದ್ದು ಮುಂಬರುವ ದಿನಗಳಲ್ಲಿ ಸಂಶೋಧನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಶಿಕ್ಷಕರಿಗೆ ಈ ನೂತನ ಟೆಕ್ನಾಲಜಿಯನ್ನು ಅಭ್ಯಸಿಸಲು ಸಹಕಾರವಾಗುವುದು ಎಂದು ಹೇಳಿದರು.

ಕಾಲೇಜಿನ ಉಪ-ಪ್ರಾಚಾರ್ಯರಾದ ಡಾ.ಎಸ್.ಎಸ್. ಕಲಶೆಟ್ಟಿ, ಡೀನ್ ಅಕಾಡೆಮಿಕ್, ಡಾ. ಎಸ್. ಆರ್. ಪಾಟೀಲ, ಹೆಚ್ಚುವರಿ ಡೀನಗಳಾದ ಡಾ. ಎಸ್. ಆರ್. ಹೊಟ್ಟಿ, ಡಾ. ವಿಶ್ವನಾಥ ಬುರಕಪಳ್ಳಿಯವರು ವಿಭಾಗದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ವಿಭಾಗದ ಪ್ರೊ. ಉದಯ ಬಳಗಾರ, ಚಂದ್ರಶೇಖರ ಬೀರಾದಾರ, ನಿತಿನ ಕತ್ತಿಶೆಟ್ಟರ, ಗೌರಿ ಪಾಟೀಲ, ಶರಣಕುಮಾರ ಹುಲಿ, ರಶ್ಮೀ ತಳ್ಳಳ್ಳಿ, ಡಾ. ನಾಗೇಶ ಸಾಲಿಮಠ, ಗಂಗಾ ಧರಕ, ಗೀತಾ, ಮಲ್ಲಿಕಾರ್ಜುನ, ಅಂಬಾರಾಯ ಮತ್ತು ಕವಿತಾ ಅವರು ವಿಭಾಗಕ್ಕೆ ದೊರೆತಿರುವ ಅನುದಾನಕ್ಕೆ ತಮ್ಮ ಹರ್ಷ ವ್ಯಕ್ತಪಡಿಸಿದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

25 seconds ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

2 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

7 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

11 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

12 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

34 mins ago