ಕಲಬುರಗಿ: ತಳವಾರ, ಪರಿವಾರ ಸಮಾಜಕ್ಕೆ ನ್ಯಾಯಬದ್ಧವಾಗಿ ಎಸ್.ಟಿ ಸಿಗಬೇಕು, ಅದು ಕೊಡಿಸುವ ತನಕ ನಾನಂತೂ ನಿಮ್ಮ ಕೈಬಿಡುವುದಿಲ್ಲ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್ ಈಶ್ವರಪ್ಪ ಹೇಳಿದರು.
ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿಗಳ ಕಛೇರಿ ಎದರು ಹಮ್ಮಿಕೊಂಡಿರುವ 41ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ 25ನೇದಿನದ ಅಹೋರಾತ್ರಿ ಸರತಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು ನಾನು ಹಿಂದುಳಿದವರಿಗೆ ನ್ಯಾಯ ಕೊಡಿಸಲು ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ.
ಕೇಂದ್ರ ಸರ್ಕಾರ ನಿಮಗೆ ಕೊಟ್ಟಿರುವಂತಹ ಸೌಲಭ್ಯವನ್ನು ಯಾವುದೋ ತಾಂತ್ರಿಕ ಕಾರಣದಿಂದ ತಡೆಹಿಡಿಯಲಾಗಿದೆ ಹೊರತು ರದ್ದುಗೊಳಿಸಿಲ್ಲ. ನನಗೆ ಇದರ ಬಗ್ಗೆ ತಕ್ಕಮಟ್ಟಿಗೆ ಮಾಹಿತಿ ಇದೆ, ಸಂಪೂರ್ಣ ಮಾಹಿತಿ ಇಲ್ಲ. ನೀವು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಕೊಟ್ಟರೆ ಮೊದಲು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ನಿಮ್ಮ ಸಮಸ್ಯೆ ಬಗೆಹರಿಸಿ ನಿಮಗೆ ನ್ಯಾಯಯುವಾಗಿ ಸಿಗಬೇಕಾದ ಎಸ್.ಟಿ ಪ್ರಮಾಣಪತ್ರವನ್ನು ಕೊಡಿಸುತ್ತೇನೆ.
ನಾನು ಸುಳ್ಳು ಆಶ್ವಾಸನೆ ಕೊಡುವವನಲ್ಲ. ಈ ಜೀವ ಹೋಗುವ ಕಿಂತ ಮುಂಚೆ ನಿಮಗೆ ನ್ಯಾಯಯುವಾಗಿ ಸಿಗಬೇಕಾಗಿದ್ದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರವನ್ನು ಕೊಡಿಸುತ್ತೇನೆ.
ಆದಷ್ಟು ಬೇಗ ನಿಮಗೆ ನ್ಯಾಯ ದೋರಕಿಸಿ ಕೋಡುವ ಪ್ರಯತ್ನ ಮಾಡುತ್ತೇನೆ. ನಾವು ಯಾವತ್ತೂ ಹಿಂದೂಳಿದ ಸಮಾಜದವರ ಪರವಾಗಿದ್ದೇವೆ. ಅದಕ್ಕೆ ಬದ್ದವಾಗಿ ನಿಮ್ಮ ಜೋತೆ ಬೆಂಬಲವಾಗಿ ಕೊನೆವರೆಗೆ ನಿಲ್ಲುತ್ತೇವೆ ಎಂದು
ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೂಜ್ಯ ಶರಣ ಶ್ರೀ ಕೊತ್ಲಪ್ಪ ಮುತ್ಯಾ, ಪಶುಸಂಗೋಪನಾ ಹಾಗೂ ಬೀದರ ಮತ್ತು ಯಾದಗಿರಿ ಉಸ್ತುವಾರಿ ಸಚಿವರಾದ ಪ್ರಬು ಚವ್ಹಾಣ,
ವಿಧಾನಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ, ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮೂಡ,
ಶಿವರಾಜ ಪಾಟೀಲ ರದ್ದೇವಾಡಗಿ, ದೊಡಪ್ಪಗೌಡ ಪಾಟೀಲ ನರಿಬೋಳ, ಶಶೀಲ ಜಿ. ನಮೋಶಿ, ಧಮ೯ಣ್ಣ ದೋಡ್ಡಮನಿ. ಬಸವರಾಜ ಮದ್ದರಕಿ, ಶರಣಪ್ಪ ತಳವಾರ, ಅವ್ವಣ್ಣ ಮ್ಯಾಕೇರಿ, ಡಾ. ಸರ್ದಾರ ರಾಯಪ್ಪ, ರಾಜೇಂದ್ರ ರಾಜವಾಳ, ಸುನಿತಾ ಎಂ ತಳವಾರ, ಚಂದ್ರಶೇಖರ ಜಮಾದಾರ, ರೇವಣಸಿದ್ದಪ್ಪ ಗೌಡ ಕಮಾನಮನಿ, ಸಿದ್ದು ಬೂಸಾ, ಸಿದ್ದು ಸರಡಗಿ, ಶರಣು ಕೋಲಿ, ರವಿ ಸಣಮನಿ ಶಾಬಾದ, ಬೆಳ್ಯಪ್ಪ ತೊನಸನಹಳ್ಳಿ, ರಾಜಶೇಖರ ಹಂಚಿನಾಳ, ಶರಣು ಬಿದನೂರ ಸೇರಿದಂತೆ ಸಮಾಜದ ಮುಖಂಡ ರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…