ಚಿತ್ತಾಪುರ: ಪ್ರಸ್ತುತ ಸಂದರ್ಭದಲ್ಲಿ ವಾತಾವರಣ ಋಣಾತ್ಮಕವಾಗಿದ್ದು ಇಂತಹ ಸಂದರ್ಭದಲ್ಲಿಯೂ ಹೊಸ ಹೊಸ ಯೊಜನೆಗಳ ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ದೃಷ್ಠಿಯಿಂದ ಪ್ರಜ್ಞಾ ಸಂಸ್ಥೆಯು ಇದೀಗ ಯ್ಯೂಟ್ಯೂಬ್ ಚಾನಲ್ ಮೂಲಕ ಶೈಕ್ಷಣಿಕ ಸುಧಾರಣೆಗೆ ಮುಂದಾಗಿರುವುದು ಅತ್ಯಂತ ಹೆಮ್ಮೆಯ ವಿಷಯ ವಿಶ್ವನಾಥ ಮರತೂರ ಅವರ ನೇತೃತ್ವದಲ್ಲಿ ಶಿಕ್ಷಣ, ಸಾಂಸ್ಕೃತಿಕ, ಸಾಮಾಜಿಕ ಅಭಿವೃದ್ಧಿ ಪರವಾದ ವಿಚಾರಗಳನ್ನು ಜನರಿಗೆ ತಲುಪಿಸಲಿ ಎಂದು ಕಲಬುರಗಿ ಜಿಲ್ಲಾ ಪಂಚಾಯತ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ ಮರತೂರ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಂದು ಪ್ರಜ್ಞಾ ಸಂಸ್ಥೆಯ ಯ್ಯೂಟ್ಯೂಬ್ ಚಾನಲ್ ನನ್ನು ಬಿಡಿಗಡೆಗೊಳಿಸಿ ಮಾತನಾಡಿದರು.
ಹತ್ತನೇಯ ತರಗತಿಯ ಫಲಿತಾಂಶ ಹೆಚ್ಚಳಕ್ಕಾಗಿ ಶ್ರಮವಹಿಸಲಿ, ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಸುಧಾರಣೆಗಾಗಿ ಶ್ರಮಿಸಲಿ, ಈ ಯ್ಯೂಟ್ಯೂಬ್ ಚಾನಲ್ ಮೂಲಕ ಇನ್ನಷ್ಟು ಉತ್ತಮ ಕೆಲಸ ಮಾಡಲಿ. ಶಿಕ್ಷಣ ಉನ್ನತಿಗಾಗಿ ಅವರ ಶ್ರಮ ಸಾರ್ಥಕವಾಗಲಿ ಈ ಸಂಸ್ಥೆಗೆ ಶುಭವಾಗಲಿ ಎಂದು ಹಾರೈಸಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜ್ಞಾ ಸಂಸ್ಥೆಯ ಸಂಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಂ.ವಿಶ್ವನಾಥ ಮರತೂರ ಈಗಾಗಲೇ ಪ್ರಜ್ಞಾ ಸಂಸ್ಥೆಯ ಮೂಲಕ ಹಲವು ಸಾಮಾಜಿಕ ಶೈಕ್ಷಣಿಕ ವಿಶೇಷವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತನ್ನದೇ ಆದ ವಿಶಿಷ್ಠ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಕೌನ ಬನೇಗಾ ಜ್ಞಾನಪತಿಯಂತಹ ವಿಶಿಷ್ಠ ಕಾರ್ಯಕ್ರಮವನ್ನು ರಾಜ್ಯದ ಮನೆಮಾತಾಗಿಸಿ ಅನೇಕ ವಿದ್ಯಾರ್ಥಿಗಳಿಗೆ ಅವಕಾಶಮಾಡಿಕೊಡಲಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ಮಕ್ಕಳೆಲ್ಲರೂ ಆನ್ ಲೈನ್ ಗೆ ಶಿಫ್ಟ ಆಗಿರವುದರಿಂದ ಈ ಸಂದರ್ಭವನ್ನು ಬಳಕೆ ಮಾಡಿಕೊಂಡು ಯ್ಯೂಟ್ಯೂಬ್ ಚಾನಲ್ ಮೂಲಕ ಮಕ್ಕಳಿಗೆ ಕಲಿಸುವುದನ್ನು ಪ್ರಾರಂಭಿಸಿದೆ ಇದು ಒಂದು ಅಭಿಯಾನ ರೂಪದಲ್ಲಿ ಮುಂದುವರೆಯಲಿದ್ದು ನಾಡಿನ ಅನೇಕ ಜನ ಯುವಕರು ಕೈಜೋಡಿಸಲಿದ್ದು ಎಲ್ಲರ ಮೂಲಕ ಈ ಭಾಗದ ಹತ್ತನೇಯ ತರಗತಿಯ ಮಕ್ಕಳಿಗೆ ವಿಷಯವಾರು ಪಾಠಗಳನ್ನು ಹೇಳಿಕೊಡಲಾಗುವುದು. ಸಾಹತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಲೋಕದ ಧನಾತ್ಮಕ ಅಂಶಗಳನ್ನು ಬಿತ್ತರಿಸಲಾಗುವುದು ಎಂದರು.
ಸಂಸ್ಥೆಯ ಅಧ್ಯಕ್ಷರಾದ ಕಾಶಿನಾಥ ಪುಜಾರಿ ಮಾತನಾಡಿ ನಮ್ಮ ಸಂಸ್ಥೆಯು ಶೈಕ್ಷಣಿಕ ಅಭಿವೃದ್ಧಿ ಗುರಿಯಾಗಿಟ್ಟುಕೊಂಡು ವಿನೂತನ ಕಾರ್ಯಕ್ರಮಗಳ ಮೂಲಕ ಕೆಲಸ ಮಾಡುತ್ತಿದ್ದು ಸಾರ್ವಜನಿಕರ ಸಹಕಾರ ದೊರೆತಿದೆ. ಸರಕಾರಿ ಶಾಲೆಗಳ ಅಭಿವೃದ್ಧಿ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಇದೇ ನಿಟ್ಟಿನಲ್ಲಿ ನಮ್ಮೊಂದಿಗೆ ಇದೀಗ ಯ್ಯೂಟ್ಯೂಬ್ ಚಾನಲ್ ಮೂಲಕ ಹತ್ತನೇಯ ತರಗತಿಯ ಪಾಠಬೋದನೆ ಮಾಡುತ್ತಿದ್ದು ಇನ್ನಷ್ಟು ಮನಸ್ಸುಗಳು ಕೈಜೋಡಿಸಲಿವೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗುರುಪ್ರಸಾದ ಸಜ್ಜನ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…