ಬಿಸಿ ಬಿಸಿ ಸುದ್ದಿ

ಅಮರಣ್ಣ ಸಜ್ಜನ್ ಅವರ ಧರಣಿಗೆ ಬೆಂಬಲಿಸಿ ರಾಜ್ಯ ರೈತ ಸಂಘ ಭಾಗಿ

ಸುರಪುರ: ನಗರದ ರಂಗಂಪೇಟೆಯ ನಿವಾಸಿ ಅಮರಣ್ಣ ಚಂದ್ರಶೇಖರ ಸಜ್ಜನ್ ಅವರು ತಹಸೀಲ್ ಕಚೇರಿಯ ಸಿಬ್ಬಂದಿಗಳ ವಿರುದ್ಧ ಹಾಗು ತಮ್ಮ ಆಸ್ತಿಯ ದಾಖಲೆಗಳನ್ನು ದೃಢಿಕರಿಸಿ ಕೊಡುವಂತೆ ಆಗ್ರಹಿಸಿ ನಡೆದ ೯ನೇ ದಿನದ ಧರಣಿಗೆ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗು ಕಾರ್ಯಕರ್ತರು ಭಾಗವಹಿಸಿದರು.

ಧರಣಿಯಲ್ಲಿ ಭಾಗವಹಿಸಿದ ರೈತ ಸಂಘದ ರಾಜ್ಯ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ಮಹಾದೇವಮ್ಮ ಬೇವಿನಾಳಮಠ ಮಾತನಾಡಿ,ತಹಸೀಲ್ ಕಚೇರಿಯ ಸಿಬ್ಬಂದಿಯವರು ರೈತರನ್ನು ಕೇವಲವಾಗಿ ಕಾಣುವುದನ್ನು ನಿಲ್ಲಿಸಬೇಕು,ಕಳೆದ ಒಂದು ವಾರದಿಂದ ಅಮರಣ್ಣ ಸಜ್ಜನ್ ಅವರು ತಮ್ಮ ಆಸ್ತಿಯ ದಾಖಲೆಯನ್ನು ದೃಢಿಕರಿಸಿ ಕೊಡುವಂತೆ ಧರಣಿ ನಡೆಸಿದರು ಅವರ ಬೇಡಿಕೆಯನ್ನು ಈಡೇರಿಸದ ತಹಸೀಲ್ ಕಚೇರಿಯ ಸಿಬ್ಬಂದಿಗಳ ನಡೆ ಖಂಡಿನಿಯವಾಗಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿ, ರೈತರು ಈಗಾಗಲೆ ತುಂಬಾ ಹೈರಾಣಾಗಿದ್ದಾರೆ ಆದರೆ ಇವತ್ತು ತಹಸೀಲ್ದಾರವರು ಅಮರಣ್ಣನವರನ್ನು ನೋಯಿಸುವ ಮೂಲಕ ಸಾಬೀತು ಮಾಡಿದಂತಾಗಿದೆ.ಅವರ ಆಸ್ತಿಯ ದಾಖಲೆಗಳನ್ನು ಪಡೆಯಲು ವಾರಗಟ್ಟಲೆ ಧರಣಿ ಮಾಡಬೇಕಾದ ದುರ್ದೈವದ ಸಂಗತಿ ನಿಜಕ್ಕೂ ಬೇಸರ ಮೂಡಿಸುತ್ತದೆ,ಕೂಡಲೆ ಅವರ ದಾಖಲೆಗಳನ್ನು ನೀಡಬೇಕು ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಅಮರಣ್ಣ ಸಜ್ಜನ್ ಮಾತನಾಡಿ,ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರು ಹೇಳಿದರು ತಹಸೀಲ್ ಸಿಬ್ಬಂದಿ ದಾಖಲೆಗಳನ್ನು ನೀಡುತ್ತಿಲ್ಲ ಇದರಿಂದ ನಮ್ಮ ಆಡಳಿತ ವ್ಯವಸ್ಥೆ ಹೇಗಿದೆ ಎಂಬುದು ತಿಳಿಯುತ್ತದೆ.ನಕಲಿ ಮುಟೇಶನ್ ತಯಾರಿಸಿ ಕೊಟ್ಟವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ,ನಮ್ಮ ಆಸ್ತಿ ದಾಖಲೆಯನ್ನು ನಮಗೆ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿ,ದಾಖಲೆಗಳು ನೀಡುವವರೆಗು ಧರಣಿ ಮುಂದು ವರೆಸುವುದಾಗಿ ತಿಳಿಸಿದರು.

ಧರಣಿಯ ಕುರಿತು ತಹಸೀಲ್ದಾರ ನಿಂಗಣ್ಣ ಬಿರಾದಾರ್ ಮಾತನಾಡಿ,ಅವರು ಕೇಳಿದ ಬಹುತೇಕ ದಾಖಲೆಗಳನ್ನು ನೀಡಲಾಗಿದೆ,ಇನ್ನುಳಿದ ದಾಖಲೆಗಳು ನಮ್ಮಲ್ಲಿ ಲಭ್ಯವಿಲ್ಲದ ಕಾರಣ ಅವರಿಗೆ ಹೇಳಿದರು ಕೇಳುತ್ತಿಲ್ಲ.ಅವರ ಎಲ್ಲಾ ದಾಖಲೆಗಳ ಅಸಲಿ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.ನಂತರ ಧರಣಿ ಸ್ಥಳಕ್ಕೆ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಅವರು ಆಗಮಿಸಿ ನಾಳೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ದಾಖಲೆಗಳ ತರಿಸಿ ಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಿಐ ಎಸ್.ಎಮ್.ಪಾಟೀಲ್, ಧರಣಿಯಲ್ಲಿ ಮುಖಂಡರಾದ ಮಲ್ಲಣ್ಣ ಹುಬ್ಬಳ್ಳಿ ಹಣಮಂತ್ರಾಯ ಮಡಿವಾಳ ದೇವಿಂದ್ರಪ್ಪಗೌಡ ಪಾಟೀಲ್ ಮಹೇಶಗೌಡ ಸುಬೇದಾರ ತಿಪ್ಪಣ್ಣಾ ಜಂಪಾ ಭೀಮಣ್ಣ ತಿಪ್ಪನಟಿಗಿ ಶಿವಲಿಂಗಯ್ಯ ಬೇವಿನಾಳಮಠ ಗೋವಿಂದಪ್ಪ ಪತ್ತಾರ ರುದ್ರಯ್ಯಗೌಡ ಮೇಟಿ ಧರ್ಮಬಾಯಿ ಗೋಡ್ರಿಹಾಳ ಈರಮ್ಮ ಗೊಡ್ರಿಹಾಳ ತಾಯಮ್ಮ ಸಗರ ಸಾಹೇಬಗೌಡ ಮದಲಿಂಗನಾಳ ಸಂಗಣ್ಣ ಮುಡಬೂಳ ಗಿರೆಪ್ಪಗೌಡ ಕಟ್ಟಿಮನಿ ವೆಂಕಟೇಶ ಕುಪಗಲ್ ಸೇರಿದಂತೆ ಅಮರಣ್ಣ ಅವರ ಕುಟುಂಬಸ್ಥರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago