ಶಹಾಬಾದ:ತಾಲೂಕಿನಲ್ಲಿ ಮಂಗಳವಾರ ರಾತ್ರಿಯಿಂದ ಬೆಳಿಗ್ಗೆಯವರೆಗೆ ಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ ಬುಧವಾರ ಬಹುತೇಕ ಹಳ್ಳ ಕೊಳ್ಳಗಳು ಮತ್ತು ನದಿಗಳು ತುಂಬಿ ಹರಿದ ಪರಿಣಾಮ ಅಪಾರ ಪ್ರಮಾಣದ ನಷ್ಟವಾಗಿದೆ.
ರಾತ್ರಿಯೆಲ್ಲ ಗಾಳಿ ಸಹಿತ ಗುಡುಗು ಮಿಂಚಿನಿಂದ ಕೂಡಿದ ಧಾರಾಕಾರ ಮಳೆಗೆ ನಗರದಲ್ಲಿ ಗಿಡಮರಗಳು ನೆಲಕ್ಕುರುಳಿವೆ. ಇದರಿಂದ ವಿದ್ಯುತ್ ತಂತಿಗಳು ಕಡಿದು ಬಿದ್ದಿವೆ. ಗ್ರಾಮೀಣ ಪ್ರದೇಶದಲ್ಲಿ ಮನೆಗಳು ಬಿದ್ದಿವೆ. ಮುತ್ತಗಾ , ಶಂಕರವಾಡಿ ಹಾಗೂ ಗೋಳಾ(ಕೆ) ಗ್ರಾಮದ ಕಾಗಿಣಾ ನದಿಗೆ ಕಟ್ಟಲಾದ ಮೂರು ಬ್ರಿಡ್ಜ್ ಕಮ್ ಬ್ಯಾರೇಜ್ ಸಂಪೂರ್ಣ ತುಂಬಿಕೊಂಡು ಸೇತುವೆ ಮೇಲಿಂದ ನೀರು ದುಮಿಕ್ಕಿ ಹರಿಯುತ್ತಿದೆ.ಅಲ್ಲದೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಂಕರವಾಡಿ ಬ್ರಿಡ್ಜ್ ಸಂಪೂರ್ಣ ಮುಳುಗಿ ಸಂಚಾರ ವ್ಯವಸ್ಥೆ ಕಡಿತಗೊಂಡಿರುವುದರಿಂದ ಹೆದ್ದಾರಿಯ ಮೇಲೆ ಎರಡು ಕಡೆ ನೂರಾರು ವಾಹನಗಳು ನಿಂತಿರುವುದು ಕಂಡುಬಂದಿತು.
ನಗರದ ಅಜನಿ ಹಳ್ಳದ ಎರಡು ಸೇತುವೆ ಮುಳುಗಿ ಹೋಗಿದೆ. ಬೀಮಶಪ್ಪ ನಗರದ ಜೇವರ್ಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸೇತುವೆ ಮುಳುಗಿದ್ದರಿಂದ ನಗರದಿಂದ ಹೊರ ಹೋಗಲು ಹಾಗೂ ಒಳಬರಲು ಆಗದೇ ಸಾರ್ವಜನಿಕರು ಪರದಾಡುವಂತಾಯಿತು.ಜೇವಗರ್ಿಗೆ ಮಾರ್ಗ ಸಂಪೂರ್ಣ ಕಡಿತವಾಗಿ ಸುಮಾರು ನಾಲ್ಕು ಗಂಟೆಗಳ ನಂತರ ನೀರು ಇಳಿಮುಖವಾದ ನಂತರ ವಾಹನ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.ಆದರೆ ಶಂಕರವಾಡಿ ಕಾಗಿಣಾ ಸೇತುವೆ ಮೇಲೆ ನೀರು ಇಳಿಮುಖವಾಗದ ಕಾರಣ ರಸ್ತೆಯ ಮೇಲೆ ವಾಹನಗಳು ನಿಂತಿರುವುದು ಕಂಡು ಬಂದವು. ಪೊಲೀಸ್ ಇಲಾಖೆಯವರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ನದಿ, ಹಳ್ಳದ ಸಮೀಪದಲ್ಲಿ ಹೋಗದಂತೆ ಪೊಲೀಸರ ನಿಯೋಜನೆ ಮಾಡಿದ್ದರು.
ಬೆಳೆಗಳು ಹಾನಿ:ಬೆಣ್ಣೆತೊರಾ ಜಲಾಶಯದಲ್ಲಿ ಒಳಹರಿವು ಹೆಚ್ಚಿದ್ದರಿಂದ ಸುಮಾರು 75 ಸಾವಿರ ಕ್ಯೂಸೆಕ್ಸ ನೀರು ಹೊರ ಬಿಡಲಾಗಿದೆ.ನಿರಂತರವಾಗಿ ಸುರಿಯುತ್ತಿರುವ ಮಳೆಯೊಂದಿಗೆ ಜಲಾಶಯದಿಂದ ಹೊರ ಬಿಟ್ಟ ನೀರು ತಾಲೂಕಿನ ಮುತ್ತಗಾ, ಭಂಕೂರ, ಶಂಕರವಾಡಿ, ಗೋಳಾ(ಕೆ),ಮಾಲಗತ್ತಿ ಸೇರಿದಂತೆ ಇತರ ಗ್ರಾಮಗಳ ನೂರಾರು ಹೊಲಗಳಿಗೆ ನುಗ್ಗಿ ಸಾವಿರಾರು ಹೆಕ್ಟೇರ್ ಬೆಳೆ ಕೊಚ್ಚಿ ಹೋಗಿ ರೈತರ ಬದುಕನ್ನು ಸಂಕಷ್ಟಕ್ಕೆ ನುಗ್ಗಿದೆ. ಗ್ರಾಮಗಳ ಹೊಲಗಳಿಗೆ ನುಗ್ಗಿದ ನೀರು ಬಾಳೆ, ಕಬ್ಬು, ತೊಗರಿ, ಹತ್ತಿ ಬೆಳೆಯಲ್ಲಿ ಆವರಿಸಿಕೊಂಡಿದೆ. ಇದರಿಂದ ಪ್ರತಿವರ್ಷ ಅನಾವೃಷ್ಟಿಯಿಂದ ಹಾನಿಗೀಡಾಗುತ್ತಿದ್ದ ರೈತನಿನೆ ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾನೆ.
ಮನೆಗಳಿಗೆ ನುಗಿದ ನೀರು: ನಗರದ ವಾರ್ಡ ನಂ.27, ಶಿಬಿರಕಟ್ಟಾ ಪ್ರದೇಶದಲ್ಲಿ, ಶರಣ ನಗರ, ಮಡ್ಡಿ ಪ್ರದೇಶ, ರಾಮಾ ಮೊಹಲ್ಲಾ, ಹಳಶಹಾಬಾದ ಮುಂತಾದ ಪ್ರದೇಶಗಳಲ್ಲಿ ಹಳ್ಳದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬಂದು ಹಳ್ಳದ ಸುಮತ್ತಮುತ್ತಲಿನ ಪ್ರದೇಶಗಳ ಮನೆಗೆ ನುಗ್ಗಿ ಅಪಾರ ಹಾನಿಯುಂಟು ಮಾಡಿದೆ.ಇಂದಿರಾ ನಗರದ ಮಡ್ಡಿಯಲ್ಲಿ ಸುಮಾರು 30 ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಿಂದ ನೀರು ತೆಗೆಯುದೇ ಕೆಲಸವಾಗಿತ್ತು. ವಿದ್ಯುತ್ ಕಡಿತವಾಗಿದ್ದರಿಂದ ರಾತ್ರಿ ಹೇಗೆ ಕಳೆಯುವುದು ಎಂಬ ಚಿಂತೆ ಜನರಲ್ಲಿ ಕಾಡುತ್ತಿದೆ.
ನೀರಿನಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಿದ ಅಧಿಕಾರಿಗಳು : ಹಳ್ಳದಲ್ಲಿ ಏಕಾಏಕಿ ಬೆಳಿಗ್ಗೆ ನೀರು ಏರಿಕೆಯಾಗಿ ಹಳೆಶಹಾಬಾದನ ವಿಶ್ವರಾಧ್ಯ ಮಂದಿರ ಸುತ್ತಲೂ ಆವರಿಕೊಂಡಿದೆ.ಇದರಿಂದ ಮಂದಿರದಲ್ಲಿರುವ ಸುಮಾರು 6 ಜನರು ಮಂದಿರ ಶಿಖರದ ಮೇಲೆ ಏರಿದ್ದಾರೆ. ನಂತರ ಕರೆ ಮಾಡಿ ತಿಳಿಸಿದಕ್ಕೆ, ತಕ್ಷಣವೇ ತಹಸೀಲ್ದಾರ ಸುರೇಶ ವರ್ಮಾ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಪಿಐ ಅಮರೇಶ.ಬಿ, ಅಗ್ನಿಶಾಮಕ ದಳದ ಅಧಿಕಾರಿಗಳು ಧಾವಿಸಿ ನೀರಿನಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಿದ್ದಾರೆ.ಅಲ್ಲದೇ ಸಾಯಂಕಾಲ ಜೆಪಿ ನಗರದ ಹೊರವಲಯದಲ್ಲಿರುವ ಕಾಗಿಣಾ ನದಿಯ ಸಮೀಪದ ಹೊಲದ ಮನೆಯಲ್ಲಿ 5 ಜನರು ಸಿಲುಕಿದವರನ್ನು ಹಾಗೂ ಭಂಕೂರ -ಮುತ್ತಾಗಾ ಗ್ರಾಮದ ಮಧ್ಯದಲ್ಲಿ ಸಿಲುಕಿದ ಒಬ್ಬರನ್ನು ರಕ್ಷಣೆ ಮಾಡಲಾಗಿದೆ.
ರೈಲ್ವೆ ಗೇಟ್ ಅಪ್ಪರ ಮಡ್ಡಿಯ ಅಂಬೇಡ್ಕರ ಭವನದಲ್ಲಿ ಗಂಜಿ ಕೇಂದ್ರ ಸ್ಥಾಪಿಸಲಾಗಿದ್ದು, 150 ಜನ ಇಲ್ಲಿ ಇದ್ದಾರ. ಮಡ್ಡಿ-2 ರಲ್ಲಿ ಹಾಸ್ಟೇಲ್ನಲ್ಲಿ 65 ಜನರಿಗೆ ವಸತಿ, ಹಳೆ ಶಹಾಬಾದ್ನ ಶಾದಿ ಮಹಲ್ನಲ್ಲಿ 125 ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.
ಪರಿಹಾರಕ್ಕೆ ಒತ್ತಾಯ: ಮಳೆ ಹಾಗೂ ಜಲಾಶಯದಿಂದ ಬಿಟ್ಟ ನೀರಿನಿಂದ ನದಿ ಉಕ್ಕಿ ಹರಿದು, ನೂರಾರು ಹೊಲಗಳಲ್ಲಿ ನೀರು ತುಂಬಿಕೊಂಡಿದೆ.ಇದರಿಂದ ಬೆಳೆ ಹಾನಿಯಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತಂಕದ ಸ್ಥಿತಿಯಲ್ಲಿದ್ದಾರೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮೀಕ್ಷೆ ನಡೆಸಿ ಹಾನಿಗೀಡಾದ ರೈತನಿಗೆ ಪರಿಹಾರ ಒದಗಿಸಿ, ರೈತರಿಗೆ ನೆರವು ನೀಡುವ ಕೆಲಸ ಮಾಡಬೇಕೆಂದು ಪ್ರಾಂತ ರೈತ ಸಂಘದ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ, ರೈತ ಸಂಘದ ತಾಲೂಕಾಧ್ಯಕ್ಷ ಬಸವರಾಜ ಕೋರಿ ಹಾಗೂ ಕಾಂಗ್ರೆಸ್ ಮುಖಂಡ ರಾಜೇಶ ಯನಗುಂಟಿಕರ್, ಬಿಜೆಪಿ ಮುಖಂಡ ಗಿರಿರಾಜ ಪವಾರ ಒತ್ತಾಯಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…