ಕಲಬುರಗಿ: ಭೀಮಾ ನದಿ ಪ್ರವಾಹದಿಂದ ತ್ತತರಿಸುವ ಸಂತ್ರಸ್ತರಿಗೆ ಆಶ್ರಯ ನೀಡಲು ತೆರೆದಿರುವ ಕಾಳಜಿ ಕೇಂದ್ರದಲ್ಲಿ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಮತ್ತು ರಾತ್ರಿ ಊಟದ ಜೊತೆಗೆ ಹಣ್ಣು, ಹಾಲು ನೀಡುವ ಮೂಲಕ ಜಿಲ್ಲಾಡಳಿತ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ.
ರವಿವಾರ ಪತ್ರಕರ್ತರ ತಂಡ ಭೀಮಾ ನದಿಗೆ ಹೆಚ್ಚಿನ ನೀರು ಹರಿಸಿದ ಪರಿಣಾಮ ಪ್ರವಾಹ ಪೀಡಿತ ಪ್ರದೇಶವಾಗಿ ಮಾರ್ಪಟ್ಟಿರುವ ಅಫಜಲಪೂರ ತಾಲೂಕಿನ ಸೊನ್ನ, ಶಿರವಾಳ ಗ್ರಾಮಕ್ಕೆ ಭೇಟಿ ನೀಡಿದಾಗ ಈ ದೃಶ್ಯ ಕಂಡುಬಂತು.
ಭೀಮಾ ನದಿಯ ಹಿನ್ನೀರಿನಿಂದ ಅಫಜಲಪೂರ ತಾಲೂಕಿನ ಶಿರವಾಳ-ಭಂಕಲಗಾ ಮಧ್ಯೆ ರಸ್ತೆ ಮೇಲೆ ಮೂರಡಿ ನೀರು ಬಂದ ಪರಿಣಾಮ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸ್ಥಳೀಯರು ಗ್ರಾಮಗಳ ನಡುವಿನ ಪ್ರಯಾಣಕ್ಕೆ ಟ್ರ್ಯಾಕ್ಟರ್ ಮೊರೆ ಹೋಗಿದ್ದಾರೆ.
ಶಿರವಾಳ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮನೆಗಳು ಹಿನ್ನೀರಿನಿಂದ ಬಾಧಿತವಾಗಿದ್ದು, ಸುಮಾರು 70 ಜನರನ್ನು ಗ್ರಾಮದ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಊಟೋಪಚಾರ ಮಾಡಲಾಗುತ್ತಿದೆ. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದೆ. ಮೂರು ಹೊತ್ತು ಬಾಳೆ ಹಣ್ಣು, ಮಕ್ಕಳಿಗೆ ಬಿಸ್ಕಿಟ್ ನೀಡಲಾಗುತ್ತಿದೆ ಎಂದು ಗೌರ(ಬಿ) ಗ್ರಾಮ ಪಂಚಾಯತಿಯ ಪಿ.ಡಿ.ಓ ಶಂಕರ ಧಾಮಣ್ಣ ತಿಳಿಸಿದರು.
ಅಫಜಲಪೂರ್ ಕಾಳಜಿ ಕೇಂದ್ರದಲ್ಲಿ ನೂರಾರು ಸಂಖ್ಯೆಯಲ್ಲಿ ನಿರಾಶ್ರಿತರು: ಸೊನ್ನ, ಅಳ್ಳಗಿ(ಬಿ), ಇಂಚಗೇರಾ, ಕೆಲ್ಲೂರ, ಬನ್ನಟ್ಟಿ ಹಾಗೂ ಶಿರೂರ ಗ್ರಾಮಗಳಿಂದ ರಕ್ಷಣೆ ಮಾಡಿ ಕರೆತರಲಾಗಿರುವ ಸಂತ್ರಸ್ತರಿಗೆ ಅಫಜಲಪೂರ ಪಟ್ಟಣದ ಹೊರವಲಯದ ಪದವಿ ಕಾಲೇಜಿನಲ್ಲಿ ಇರಿಸಲಾಗಿದ್ದು, ಅಳ್ಳಗಿ (ಬಿ) ಮತ್ತು ಸೊನ್ನ ಗ್ರಾಮದ 261 ಜನರಿದ್ದರೆ, ಇಂಚಗೇರಾ, ಕೆಲ್ಲೂರ, ಬನ್ನಟ್ಟಿ ಹಾಗೂ ಶಿರೂರ ಗ್ರಾಮಗಳ 500ಕ್ಕೂ ಹೆಚ್ಚು ಸಚಿತ್ರಸ್ತರಿಗೆ ಇಲ್ಲಿ ಆಶ್ರಯ ನೀಡಲಾಗಿದೆ.
ಅಫಜಲಪೂರ ಕಾಳಜಿ ಕೇಂದ್ರಕ್ಕೆ ರವಿವಾರ ಭೇಟಿ ನೀಡಿದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಕಾರಿ ಅಬ್ದುಲ್ ನಬಿ ಮಾತನಾಡಿ ಭೀಮಾ ಪ್ರವಾಹದಿಂದ ನಿರಾಶ್ರಿತಗೊಂಡ 8603 ಜನರಿಗೆ ರಕ್ಷಣೆ ಮಾಡಿದ್ದು, ತಾಲೂಕಿನ ವಿವಿಧೆಡೆ ಸ್ಥಾಪಿಸಲಾದ 11 ಕಾಳಜಿ ಕೇಂದ್ರಗಳಲ್ಲಿ ಇವರಿಗೆ ಆಶ್ರಯ ನೀಡಿ ಬೆಳಿಗ್ಗೆ ಉಪಹಾರ, ಹಣ್ಣು, ಚಹಾ ಮಧ್ಯಾಹ್ನ ಮತ್ತು ರಾತ್ರಿ ಚಪಾಟಿ, ಪಲ್ಯಾ, ಅನ್ನ, ಸಾರು ಊಟದ ಜೊತೆಗೆ ಹಣ್ಣು, ಹಾಲು ನೀಡಲಾಗುತ್ತಿದೆ. ಇದಲ್ಲದೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಪೂರೈಸಲಾಗುತ್ತಿದೆ ಎಂದರು.
ಅಫಜಲಪೂರ್-ಸಿಂದಗಿ ರಸ್ತೆ ಕಟ್: ಸೊನ್ನ ಬ್ಯಾರೇಜಿನಿಂದ 8 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಕೆಳ ಹಚಿತದಲ್ಲಿ ಬರುವ ದೇವಣಗಾಂವ ಬ್ರಿಡ್ಜ್ ತುಂಬಿ ಹರಿಯುತ್ತಿದ್ದು, ಮುಂಜಾಗ್ರತವಾಗಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ರವಿವಾರ 600 ಜನರ ರಕ್ಷಣೆ: ಭೀಮಾ ನದಿ ಪ್ರವಾಹದ ಹಿನ್ನೀರಿನಿಂದ ಸುತ್ತುವರಿದಿರುವ ಅಫಜಲಪೂರ ತಾಲೂಕಿನ ಉಡಚಣದಲ್ಲಿ ಗ್ರಾಮಸ್ಥರ ರಕ್ಷಣೆಗೆ ರವಿವಾರ ಧುಮುಕಿರುವ ಸೇನಾ ಪಡೆ 44 ಸದಸ್ಯರ ಎಸ್.ಡಿ.ಆರ್.ಎಫ್. ತಂಡ ಹಾಗೂ ಅಗ್ನಿಶಾಮಲ ದಳದ ತಂಡದೊಂದಿಗೆÉ ಕಾರ್ಯಾಚರಣೆಗೆ ಇಳಿದು ಸುಮಾರು 600 ಜನರನ್ನು ರಕ್ಷಿಸಿ ಕಾಳಜಿ ಕಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಗ್ರಾಮದಲ್ಲಿ 9 ರಿಂದ 10 ಸಾವಿರ ಜನಸಂಖ್ಯೆ ಇದ್ದು, ರವಿವಾರದ ವರೆಗೆ 6 ರಿಂದ 7 ಸಾವಿರ ಜನರನ್ನು ರಕ್ಷಿಸಲಾಗಿದೆ. ಸಾಯಂಕಾಲದ ಹೊತ್ತಿಗೆ ನೀರು ಇಳಿಕೆ ಕಂಡಿದ್ದರಿಂದ ಗ್ರಾಮದ ಎತ್ತರ ಪ್ರದೇಶದಲ್ಲಿದ್ದ ಜನರು ಅಲ್ಲಿಯೆ ಉಳಿದುಕೊಂಡಿದ್ದಾರೆ. ಅವರನ್ನು ಮನವೊಲಿಸಿ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಗ್ರಾಮದಲ್ಲಿ ಮೊಕ್ಕಾಂ ಹೂಡಿರುವ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ತಿಳಿಸಿದ್ದಾರೆ.
ಪೇಟ್ ಫಿರೋಜಾಬಾದಿನಲ್ಲಿ ಸೇನಾ ಪಡೆ: ಸೇನಾ ತುಕಡಿಯ ಒಂದು ತಂಡ ರವಿವಾರ ಸಾಯಂಕಾಲ ಕಲಬುರಗಿ ತಾಲೂಕಿನ ಪೇಟ್ ಫಿರೋಜಾಬಾದ ಗ್ರಾಮದಲ್ಲಿ ಸಂತ್ರಸ್ತರ ಕಾರ್ಯಾಚರಣೆಗೆ ಇಳಿದಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…