ಬಿಸಿ ಬಿಸಿ ಸುದ್ದಿ

‘ಕೊರೊನಾ’ ದಿಂದ ಅಡಗಿದ ‘ಹೋರಾಟದ ಧ್ವನಿ’

  • -ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ಹಿರಿಯ ಕಮ್ಯುನಿಸ್ಟ್ ನಾಯಕ, ಹೋರಾಟಗಾರ, ಕಾಮ್ರೇಡ್ ಮಾರುತಿ ಮಾನ್ಪಡೆ (೬೫) ಅವರು ಇಂದು (ಮಂಗಳವಾರ) ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಬರಸಿಡಿಲಿನಂತೆ ಎರಗಿ ಬಂದಿತು. ನೋಡಲಿಕ್ಕೆ ಗಟ್ಟಿ ಮುಟ್ಟಾಗಿ ಕಾಣಿಸುತ್ತಿದ್ದ ಮಾನ್ಪಡೆ ಕೊರೊನಾ ಗೆದ್ದು ಬರುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಅವರ ಸಾವಿನ ಸುದ್ದಿ ಕೇಳಿ ಕೊರೊನಾದ ರೌದ್ರಾವತಾರ ಎಂಥದು ಎಂದು ತಿಳಿದು ನಿಜಕ್ಕೂ ಭಯವಾಯಿತು.

ಕಳೆದ ಸುಮಾರು ೩೦-೩೫ ದಶಕಗಳಿಂದ ರಾಜ್ಯದ ಯಾವ ಮೂಲೆಯಲ್ಲಿಯೇ ಅನ್ಯಾಯ, ಅತ್ಯಾಚಾರ, ಮೋಸ ನಡೆದಿದ್ದರೂ ಇವುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಾರುತಿ ಮಾನ್ಪಡೆ ಕಲ್ಯಾಣ ಕರ್ನಾಟಕದ ಹೋರಾಟದ ಧ್ವನಿಯಾಗಿದ್ದರು. ರೈತ, ಕೃಷಿ, ಕೂಲಿ, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳುತ್ತಿದ್ದ ಇವರು ಒಬ್ಬ ಜನಪರ ಹೋರಾಟಗಾರರಾಗಿದ್ದರು.

ಈ ಕಾರಣಕ್ಕಾಗಿ ಆಡಳಿತಪಕ್ಷಗಳ ಅವಕೃಪೆಗೆ ಒಳಗಾಗಿದ್ದರು ಮಾತ್ರವಲ್ಲ ಪೊಲೀಸರ ಲಾಠಿ ರುಚಿ ಕೂಡ ಉಂಡಿದ್ದರು. ಮೊನ್ನೆ ಮೊನ್ನೆ ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ೮೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ ಕೃಷಿಗೋಷ್ಠಿಯಲ್ಲಿ ಸರ್ಕಾರ ಹಾಗೂ ಸಾಹಿತಿಗಳ ಇಬ್ಬಂಗಿತನ, ಭಟ್ಟಂಗಿತನವನ್ನು ಯಾವ ಮುಲಾಜಿಲ್ಲದೆ ಖಂಡಿಸಿದ್ದರು. ಈ ಕಾರಣದಿಂದಾಗಿ ಅವರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು.

ಹೀಗೆ ಜನಪರ, ಜೀವಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಇವರು ತಾವು ನಂಬಿದ ತತ್ವ, ಸಿದ್ಧಾಂತಕ್ಕೆ ಸದಾ ಅಂಟಿಕೊಂಡಿರುತ್ತಿದ್ದರು. ಆ ತತ್ವ, ಸಿದ್ಧಾಂತಗಳಿಗೆ ಸ್ವಲ್ಪ ಕುಂದುಂಟಾದರೂ ಸಾಕು, ಕೆಂಡಾಮಂಡಲಾವಾಗುತ್ತಿದ್ದರು. ಅವರು ಎಷ್ಟೇ ದೊಡ್ಡವರಿರಲಿ, ಅವರು ಯಾರೇ ಆಗಿರಲಿ ಅವರ ವಿರುದ್ಧ ಸೆಟೆದು ನಿಲ್ಲುತ್ತಿದ್ದರು.

ಇವರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ನೋಡಲಿಕ್ಕೆ ಕಟ್ಟುಮಸ್ತಾಗಿದ್ದ ಅವರು ಕೊರೊನಾವನ್ನು ಖಂಡಿತ ಗೆದ್ದು ಬರುತ್ತಾರೆ ಎಂದು ಬಹುತೇಕರು ಭಾವಿಸಿದ್ದರು. ಆದರೆ ಅತೀ ಸೂಕ್ಷ್ಮವಾದ ಈ ವೈರಾಣು ಅವರನ್ನು ಎಡಮುರಿಗಟ್ಟಿ ಸಾವಿನಂಚಿಗೆ ದೂಡಿರುವುದು ಮತ್ತೆ ಮತ್ತೆ ಅದರ ಭಯಾನಕತೆಯನ್ನು ನೆನಪಿಸುವಂತಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago