ಬಿಸಿ ಬಿಸಿ ಸುದ್ದಿ

ಕದಲ್ ಬದಲ್ ಕವಡೆಕಾಯಿ: ಅವರ್ ಬಿಟ್ ಇವರ್ಯಾರು?

  • ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ಅಂದಂತೆ ಇದೇ ೨೮ರಂದು ಈಶಾನ್ಯವಲಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ನಡೆಯಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಬಯಸಿದ ಬಿಜೆಪಿಯಿಂದ ಶಶೀಲ್ ಜಿ. ನಮೋಶಿ, ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರ, ಜೆಡಿಎಸ್ ನಿಂದ ತಿಮ್ಮಯ್ಯ ಪುರ್ಲೆ, ಪಕ್ಷೇತರ ಅಭ್ಯರ್ಥಿಯಾಗಿ ಡಾ. ಚಂದ್ರಶೇಖರ ಈ ನಾಲ್ವರು ಅಭ್ಯರ್ಥಿಗಳಲ್ಲಿ ಅವರ್ ಬಿಟ್ಟು ಇವರ್ಯಾರು ಅನ್ನುವಂತಾಗಿದೆ.

ಸ್ಪರ್ಧೆಗಿಳಿದ ಎಲ್ಲ ಅಭ್ಯರ್ಥಿಗಳು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದು, ಪರಿಹರಿಸುವುದು ಸೇರಿದಂತೆ ಅನೇಕ ರೀತಿಯಲ್ಲಿ ನೆರವಾಗುವ ಭರವಸೆ ನೀಡುತ್ತ ಹಗಲು ರಾತ್ರಿಯೆನ್ನದೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಆದರೆ ಅಭ್ಯರ್ಥಿಗಳ ದುರ್ದೈವ ಎನ್ನುವಂತೆ ಕೊರೊನಾ ಮಹಾಮಾರಿ ಎಲ್ಲಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರದ ನೂತನ ‘ವಿದ್ಯಾಗಮ’ ಪಾಠ ಯೋಜನೆಯನ್ನು ಕೈಬಿಟ್ಟು ಶಿಕ್ಷಕರಿಗೆ ಅಕ್ಟೋಬರ್ ೩೦ರವರೆಗೆ ರಜೆ ನೀಡಲಾಗಿದೆ. ಇದರಿಂದಾಗಿ ಶಿಕ್ಷಕರನ್ನು ತಲುಪುವಲ್ಲಿ ಅಭ್ಯರ್ಥಿಗಳು ಎಡತಾಕುತ್ತಿದ್ದಾರೆ.

ಕಾಲೇಜುಗಳೇನೋ ಶುರುವಾಗಿವೆ. ಆದರೆ ಬಯೋಮೆಟ್ರಿಕ್ ಇಲ್ಲದ್ದರಿಂದ ಉಪನ್ಯಾಸಕರು ಸಹ ಕಾಲೇಜುಗಳಲ್ಲಿ ಅಭ್ಯರ್ಥಿಗಳಿಗೆ ಸಕಾಲದಲ್ಲಿ ಭೇಟಿಗೆ ಸಿಗುತ್ತಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆ ಕದಲ್ ಬದಲ್ ಕವಡೆಕಾಯಿ ಅವರ್ ಬಿಟ್ಟು ಇವರ್ಯಾರು ಎನ್ನುವಂತಾಗಿದೆ.

ಕಳೆದ ಬಾರಿಯ ಚುನಾವಣೆಯಲ್ಲಿಶಾಲಾ-ಕಾಲೇಜು ಆರಂಭವಾಗಿದ್ದಾಗಲೇ ಶೇ. ೬೦ರಿಂದ ೬೫ರಷ್ಟು ಮತದಾನವಾಗಿತ್ತು. ಈ ಬಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ ಶೇ. ೪೦-೪೫ರಷ್ಟು ಮತದಾನವಾಗಲಿದೆ ಎಂದು ಅಂದಾಜಿಸಲಾಗಿದೆ.

ಬಿಜೆಪಿ ಅಭ್ಯರ್ಥಿ ನಮೋಸಿ ಪರ ಪಕ್ಷದ ರಾಜ್ಯ ಪ್ರಮುಖರು, ಮಂತ್ರಿ ಮಹೋದಯರು, ಎಂಎಲ್ಎ, ಎಂಎಲ್ ಸಿ ಹಾಗೂ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಮತಯಾಚಿಸಿ ಶತಾಯಗತಾಯ ಗೆಲ್ಲಿಸಲು ಪಣತೊಟ್ಟಂತೆ ಓಡಾಡುತ್ತಿದ್ದಾರೆ.

ಕಾಂಗ್ರೆಸ್ ನ ಶರಣಪ್ಪ ಮಟ್ಟೂರ್ ಪರ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಇನ್ನುಳಿದವರು ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ.

ಅದರಂತೆ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಪರ ಜೆಡಿಎಸ್ ನ ಹಿರಿಯ ವರಿಷ್ಠ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಪುರ್ಲೆ ಗೆಲುವಿಗೆ ಅಹರ್ನಿಷಿ ಶ್ರಮಿಸುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿ ಡಾ. ಚಂದ್ರಶೇಖರ ಅವರು ಸಹ ತಮ್ಮ ಕೈಲಾದ ಮಟ್ಟಿಗೆ ಫೀಲ್ಡಿಗಿಳಿದು ಓಡಾಡುತ್ತಿದ್ದಾರೆ. ಇವರು ಗೆಲ್ಲದಿದ್ದರೂ ಪರವಾಗಿಲ್ಲ ಒಬ್ಬರ ಸೋಲಿಗಂತೂ ಖಂಡಿತ ಕಾರಣರಾಗಲಿದ್ದಾರೆ.

ಇದು ಪ್ರಾಶಸ್ತ್ಯ ಮತದ ಚುನಾವಣೆಯಾಗಿರುವುದರಿಂದ ಎರಡನೆ ಪ್ರಾಶಸ್ತ್ಯ ಮತ ಪಡೆದ ಅಭ್ಯರ್ಥಿಯು ೩ನೇ ಅಭ್ಯರ್ಥಿಯ ೨ನೇ ಪ್ರಾಶಸ್ತ್ಯ ಮತಗಳು ಮೊದಲ ಮತ್ತು ಎರಡನೆ ಸ್ಥಾನ ಇದ್ದವರಿಗೆ ವರ್ಗಾವಣೆ ಆಗಲಿವೆ. ಈ ಸಂದರ್ಭದಲ್ಲಿ ನಾಲ್ಕು ಮತ್ತು ಐದನೇ ಅಭ್ಯರ್ಥಿಗಳು ಲೆಕ್ಕಕ್ಕೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ.

ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಹೆಚ್ಚು ಮತ ಪಡಡದವರು ರೇಸ್ ನಲ್ಲಿ ಇರುವುದಕ್ಕೆ ಉಪಯುಕ್ತವಾಗಲಿದೆ ಎಂದು ಕೂಡ ಹೇಳಲಾಗುತ್ತಿದೆ.

ಸುಮಾರು ಮೂರು ವರ್ಷ ಸೇವೆ ಸಲ್ಲಿಸಿದ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಕ/ ಉಪನ್ಯಾಸಕರು ಮತದಾನ ಮಾಡಬಹುದಾಗಿದ್ದು ಈಗ ಸುಮಾರು ೨೯ ಸಾವಿರಕ್ಕೂ ಅಧಿಕ ಮತದಾರರಿದ್ದು, ಅವರ ಒಮ್ಮತದ ನಿರ್ಣಯದ ಮೇಲೆ ಈ ಅಭ್ಯರ್ಥಿಗಳ ಭವಿಷ್ಯ ನಿಂತಿದೆ.

ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ಜಿಲ್ಲೆಗಳ ಸುಮಾರು ೫೩ ತಾಲ್ಲೂಕುಗಳ ವ್ಯಾಪ್ತಿ ಈಶಾನ್ಯ ವಲಯ ಶಿಕ್ಷಕರ ಮತಕ್ಷೇತ್ರ ಹೊಂದಿದೆ. ಅಂದಾಜು ೪೨೦ ಮತಗಟ್ಟೆಗಳಲ್ಲಿ ಮತದಾನ ಮಾಡಬಹುದಾಗಿದೆ.

ಚುನಾವಣೆಗೆ ಬರೋಬ್ಬರಿ ಏಳುದಿನ ಮಾತ್ರ ಬಾಕಿಯಿದ್ದು, ಈಗಲೇ ಯಾರು ಗೆಲ್ಲುತ್ತಾರೆ ಎಂದು ಹೇಳಲು ಬರುವುದಿಲ್ಲ. ಹೀಗಾಗಿ ಕದಲ್ ಬದಲ್ ಕವಡೆಕಾಯಿ ಅವರ್ ಬಿಟ್ ಇವರ್ಯಾರು ಎನ್ನುವಂತಾಗಿದೆ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

11 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

22 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

22 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

1 day ago