ಬಿಸಿ ಬಿಸಿ ಸುದ್ದಿ

ಕ್ಷಯರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ

ಕಲಬುರಗಿ: ಕ್ಷಯರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ ಕಾರ್ಯಕ್ರಮದ ನಿಮಿತ್ತ ಇಂದು ರೋಗಿಗಳಿಗೆ ಪೌಷ್ಟಿಕ ಆಹಾರ ಪೌಡರ್ ನೀಡಲಾಯಿತು.

ನಗರದ ಸೆಂಟ್ ಜಾನ್ ಆಸ್ಪತ್ರೆಯ ಸಭಾಂಗಣದಲ್ಲಿ.ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಕಛೇರಿ , ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಹಾಗೂ ಸಾಕ್ಷಮ್ ಪರ್ವ ಕಾರ್ಯಕ್ರಮ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಮತ್ತು ಲಯನ್ಸ್ ಕ್ಲಬ್ ನೃಪತುಂಗ ಇವರ ಸಂಯುಕ್ತಶ್ರಾಯದಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕಾಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸತೀಶ್ ಮಾತನಾಡಿ ಅವರು, ಕ್ಷಯರೋಗದ ಬಗ್ಗೆ ಭಯ ಪಡುವ ಅಗತ್ಯ ವಿಲ್ಲ. ನಿರಂತರ ಔಷಧಿ ಸೇವಿಸುವುದರಿಂದ ರೋಗ ಪೂರ್ಣ ಗುಣಮುಖ ವಾಗುತ್ತದೆ ಎಂದರು.

ಮಧ್ಯದಲ್ಲಿ ಔಷಧ ಸೇರಿಸುವುದನ್ನು ರೋಗಿಯು ಬಿಟ್ಟರೆ ರೋಗ ಮತ್ತಷ್ಟು ಉಲ್ಬಣನವಾಗುತ್ತದೆ ( ಡ್ರಗ್ ರೆಜಿಸ್ಟೆಂಟ್ ಟಿಬಿ) ಸಾಧ್ಯತೆ ಇರುತ್ತದೆ. ಆದ್ದರಿಂದ  ನಿರಂತರ ಸೇವಿಸಬೇಕು. ಕ್ಷಯರೋಗ ಸಂಬಧಿಸಿದ ಚಿಕಿತ್ಸೆ ಮತ್ತು ಔಷಧಗಳನ್ನು ಎಲ್ಲಾ ಆಸ್ಪತ್ರೆಗಳಲ್ಲಿ  ಉಚಿತವಾಗಿ ನೀಡಲಾಗುತ್ತದೆ. ಹಾಗೆ ಇಂತಹ ಲಯನ್ಸ್ ಕ್ಲಬ್ ನಂತ ಸಂಸ್ಥೆ ಅವರು ಸಮಾಜಿಕ ಕಳಕಳಿ ಬಡಕುಟುಂಬದ ಜನರಿಗೆ ಆಹಾರದ ಕೊರತೆ ಹೊಗಲಾಡಿಸಲು ಸಂಸ್ಥೆಗಳು ಮುಂದೆ ಬರುವುದು ಶ್ಲಾಘನೀಯ ಎಂದರು.

ಲಯನ್ಸ್ ಕ್ಲಬ್ನೃಪತುಂಗ ಅಧ್ಯಕ್ಷರಾದ ಲಯನ್ ಅರುಣದೇವಿ ಅವಂಟಿ ಮಾತನಾಡುತ್ತಾ.  ಅವರು ಮಾತನಾಡಿ ಜನರು ತಪ್ಪದೆ ಮಾಸ್ಕ್ ಧರಿಸಬೇಕು ದೈಹಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಆಗಾಗಸಾಬೂನಿನಿಂದ , ಕೈ ತೊಳೆದಕೊಂಡಲ್ಲಿ ಮಾತ್ರ ಕೊರೊನಾ ದಿಂದ ದೂರವಿಡಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ ಡಾ ವಿವೇಕಾನಂದ ರೆಡ್ಡಿ ಅವರು ಮಾತನಾಡುತ್ತಾ ಕ್ಷಯರೋಗ ಮುಕ್ತ ವಾಗಿಸಲು ಭಾರತ ಸರ್ಕಾರದ ಘೋಷಣೆ ಪ್ರತಿ ಒಂದು ಮನೆಯಲ್ಲಿ ಕ್ಷಯರೋಗಿ ತಪ್ಪದೆ ಡಾಟ್ಸ್ ಸೆಂಟರ್ಗೆ ಬಂದು ಉಚಿತ ಚಿಕಿತ್ಸೆ ಇದೆ ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗಿ ಬಹು ಬೇಗ ಗುಣಮುಖನಾಗಲು ಸಾಧ್ಯ ಎಂದು  ಇದೆ ಸಂದರ್ಭದಲ್ಲಿ ಹೇಳಿದ್ದರು. ಈಗಾಗಲೇ ಎನ್ ಜಿ ಓ ಗಳು ಕೂಡ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದರೆ. ಕಫದ ಮಾದರಿ ಸಂಗ್ರಹ ಮಾಡುತ್ತಿದ್ದರೆ. ಪ್ರತಿ ಸ್ಲಾಂ ಏರಿಯಾ ಗುರುತಿಸಿದ  ಮನೆಯನ್ನೂ ಬಿಡದೆ ಮಾದರಿ ಸಂಗ್ರಹಿಸುತ್ತಿದ್ದರೆ, ಹಾಗೆ ಪ್ರತಿಯೊಬ್ಬರೂ ಕೈ ತೊಳೆಯುವುದರಿಂದ ನಿಮ್ಮನ್ನು ನೀವು ರಕ್ಷಸಿಕೊಳ್ಳಿ ಕೋವಿಡ್19 ನಿಂದ ಸುರಕ್ಷಿತವಾಗಿರಿ. ಕ್ಷಯರೋಗಿಗಳಿಗೆ ತಿಂಗಳಿಗೆ ನಿಕ್ಷಯಪೋಷಣೆ ಯೋಜನೆಯಡಿ 500 ರೂ.ಗಳ ಸಹಾಯಧನ ನೇರ ಕ್ಷಯರೋಗಿ ಖಾತೆಗೆ ಹಣ  ಜಮಾ ಮಾಡಲಾಗುವುದು. ಸ್ವಲ್ಪ ಪ್ರಮಾಣ ಕ್ಷಯರೋಗ ಕಡಿಮೆ ಅಗುತ್ತಿದೆ ಎಂದು ಹೇಳಿದರು.

ಡಾ ಮಲ್ಲೆರಾವ್ ಮಲ್ಲೆ ಆಡಳಿತಧಿಕಾರಿ ವೈದ್ಯರು ಸೆಂಟ್ ಜಾನ್ ಆಸ್ಪತ್ರೆ .ವೇದಿಕೆ ಮೇಲೆ ಮಾತಾನಾಡಿದರು. ಲಾಯನ್ಸ ಕ್ಲಬ್ ಕಲಬುರಗಿ ನೃಪತುಂಗದಸದಸ್ಯ ಲಯನ್ ಸುಗಣ್ಣ  ಅವಂಟಿ, ರಾಮಕೃಷ್ಣ, ವಲಯ ಕಾರ್ಯಕ್ರಮಾಧಿಕಾರಿ ಅಬ್ದುಲ್ಶಫಿ ಅಹ್ಮದ್, ಸಕ್ಷಮ್ ಪರ್ವಕಾರ್ಯಕ್ರಮ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ( ಟಿ,ಐ,ಎಸ್,ಎಸ್ ).ಡಾ ರತ್ನವೀರ ,  ಡಿಪಿಸಿ ಅಬ್ದುಲ್ ಜಬ್ಬರ್, ಡಿಪಿಎಸ್ ಸುರೇಶ್ ದೊಡ್ಡಮನಿ, ಹಿರಿಯಾ ಆರೋಗ್ಯ ಮೇಲ್ವಿಚಾರಕ ಸಂತೋಷ ಕಾಳಗಿ , ಮಂಜುನಾಥ ಕಂಬಳಿಮಠ ಜಿಲ್ಲಾ ಡಿ ಆರ್ ಟಿಬಿ ಸಮಾಲೋಚಕಸಕ್ಷಮ್ಪರ್ವಕಾರ್ಯಕ್ರಮಟಾಟಾಇನ್ಸ್ಟಿಟ್ಯೂಟ್ಆಫ್ಸೋಷಿಯಲ್ಸೈನ್ಸ್(ಟಿ,ಐ,ಎಸ್,ಎಸ್).ಪಿ ಪಿ‌ಎಂ ಸಂಯೋಜಕ ಶಶಿಧರ ಕಮಲಪೂರ. ಎಸ್ ಟಿ ಎಸ್ ಡಾ. ಶರಣಬಸಪ್ಪ ಸಜ್ಜನ ಶೆಟ್ಟಿ, ಶರಣ ಸಿಂಗೆ, .ಬಸವರಾಜ ಅವಂಟಿ ಟಿಬಿ ಎಚ್ವಿ. ಸರೋಜ, ಮಧುರಿ , ರಾಜಕುಮಾರ, ಸಂತೋಷಕುಮಾರ್ ಎರ್ ಕೆ. ಧರ್ಮ ರಕ್ಷಕ್.  ಕ್ಷಯರೋಗಿಗಳು ಮತ್ತು ಇತರೆಹಾಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರುಉಪಸ್ಥಿತರಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

5 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

5 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

7 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

7 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

8 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

8 hours ago