ಬಿಸಿ ಬಿಸಿ ಸುದ್ದಿ

ಭಾರತದ ಸ್ವಾತಂತ್ರ್ಯಕ್ಕಾಗಿ ಗಲ್ಲಿಗೇರಿದ ಕವಿ ಅಶ್ಫಾಖ್ ಉಲ್ಲಾಖಾನ್ ಜನುಮದಿನವಿಂದು

(ಜೆ ಕಲೀಂ ಭಾಷಾ ಅವರ ಪುಸ್ತಕದ ಭೀಮಾಶಂಕರ್ ಪಾಣೆಗಾಂವು ಕೆಲವು ಸಾಲುಗಳು)

ವಿಭಜನಪೂರ್ವ ಭಾರತವು ಬ್ರಿಟಿಷರ ವಿರುದ್ಧ ಹೋರಾಡುವಾಗ ಅದರಲ್ಲಿ ಹಿಂದೂಗಳೂ ಮುಸಲ್ಮಾನರೂ ಒಟ್ಟಾಗಿಯೇ ಹೋರಾಡಿದ್ದರು ಎಂಬುದನ್ನು ಈಚಿನ ದಿನಗಳಲ್ಲಿ ಮರೆಗೆ ತಳ್ಳಲಾಗುತ್ತಿದೆ. ಹಾಗಾಗಿ ದೇಶಕ್ಕಾಗಿ ಗಲ್ಲುಗಂಬಕ್ಕೇರಿದ ಅಶ್ಫಾಖ್ ಉಲ್ಲಾಖಾನ್ ಬಗ್ಗೆ ಹೆಚ್ಚಿನವರಿಗೆ ತಿಳಿಯುತ್ತಿಲ್ಲ.

ಅಶ್ಫಾಖ್ ಉಲ್ಲಾಖಾನ್ 22 ಅಕ್ಟೋಬರ್ 1900ರಲ್ಲಿ ಉತ್ತರ ಪ್ರದೇಶದ ಶಾಹಜಹಾಂಪುರದಲ್ಲಿ ಜನಿಸಿದ. ಆತ ಹಸ್ರತ್ ವಾರ್ಸಿ ಎಂಬ ಹೆಸರಿನಿಂದ ಕವಿತೆಗಳನ್ನು ಬರೆಯುತ್ತಿದ್ದ. ದೇಶಭಕ್ತಿಯೇ ಅವನ ಕಾವ್ಯದ ಸ್ಫೂರ್ತಿ. ಕಾಕೋರಿ ಚಳುವಳಿಯಲ್ಲಿ ಪಾಲ್ಗೊಂಡ ಅಶ್ಫಖ್‍ಗೆ 1927ರ ಅಕ್ಟೋಬರ್ ತಿಂಗಳಿನಲ್ಲಿ ಗಲ್ಲು ಶಿಕ್ಷೆ ಪ್ರಕಟವಾಗಿ, 19 ಡಿಸೆಂಬರ್ 1927ರಂದು ಗಲ್ಲಿಗೇರಿದಾಗ ಆತನಿಗೆ ಕೇವಲ 27 ವರ್ಷ. ‘ಪ್ರೀತಿ ಯಾವ ಮನುಷ್ಯನ ಹೃದಯದಲ್ಲಿರುತ್ತೋ, ಆತನೇ ದೇಶಕ್ಕಾಗಿ, ದೇಶವಾಸಿಗಳಿಗಾಗಿ, ಎಲ್ಲರಿಗಾಗಿ ಎಲ್ಲರ ಹಿತಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ. ಮಾನವ ಪ್ರೇಮವೇ ದೇಶ ಪ್ರೇಮವಾಗಬೇಕು’ ಎಂದು ಅವನು ಜೈಲಿನಿಂದ ಬರೆದ ಪತ್ರವೊಂದರಲ್ಲಿ ಹೇಳಿದ್ದಾನೆ.

ಗಲ್ಲು ಶಿಕ್ಷೆ ಪ್ರಕಟವಾದ ಆನಂತರ ಅಶ್ಪಾಕ್ ತನ್ನ ತಾಯಿಗೆ ಬರೆದ ಪತ್ರದ ಕೆಲವು ಸಾಲುಗಳು-
‘ತಮಗೆ ತಮ್ಮ ಮಗ ‘ವೀರಮರಣ’ ಹೊಂದುತ್ತಿದ್ದಾನೆಂದು ತಾವು ಹೆಮ್ಮೆ ಪಡಬೇಕು. ಅಕಸ್ಮಾತ್ ತಮಗೆ ಸಾವನ್ನು ಎದುರಿಸುವ ಸಮಯ ಬಂದರೆ ತಾವೂ ಸಹ ಓರ್ವ ವೀರ ಮಾತೆ ಎಂದು ಸಾಬೀತು ಪಡಿಸಬೇಕಾಗುತ್ತದೆ. ತಮ್ಮ ನರ-ನಾಡಿಗಳಲ್ಲಿ ಪವಿತ್ರವಾದ ಆಫಘನ್ ರಕ್ತ ಹರಿಯುತ್ತಿಲ್ಲವೇ? ತಾವು ನನ್ನ ಮಾತೆಯಲ್ಲವೇ? ತಾವು ಧೈರ್ಯಶಾಲಿ ಪಠಾಣ್ ವಂಶಸ್ಥರಲ್ಲವೇ? ತಾವು ನನ್ನ ಮಾತೆಯಾಗಿದ್ದು ನನ್ನಲ್ಲಿ ತಮ್ಮ ಮೊಲೆ ಹಾಲಿನ ಪ್ರಭಾವವಿದೆ.

ತಾವು ನಮ್ಮ ಬಲಿದಾನಗಳಿಂದ ಬೇಸರಿಸುವ ಅಗತ್ಯವಿಲ್ಲ, ಏಕೆಂದರೆ ಇದು ನಮ್ಮ ದೇಶಕ್ಕಾಗಿ ನಾವು ಮಾಡಿದ ಕರ್ತವ್ಯವಾಗಿದೆ. ಭಾರತೀಯ ಸಹೋದರರಲ್ಲಿ ನಾವು ಪ್ರೀತಿ, ವಿಶ್ವಾಸವಿಡುವವರು. ನಿಮಗೆ ಉತ್ಸಾಹ ತುಂಬುವವರು. ದೇಶ ಬಾಂಧವರೆ ನಾನು ಆ ಪವಿತ್ರ ಅಲ್ಲಾಹನ ಪ್ರಮಾಣ ಮಾಡಿ ಹೇಳುವೆ. ನಾವು ದೇಶಕ್ಕಾಗಿ ಬಲಿದಾನ ನೀಡಿದೆವು. ಹಿಂದೂಸ್ಥಾನದ ಬಹು ಜನರು ಶೋಷಿತರಾಗುತ್ತಿದ್ದಾರೆ. ಇಲ್ಲಿನ ಬಡವರು, ಶೋಷಿತರು ಅನೇಕ ಪ್ರಾಂತ್ಯಗಳಲ್ಲಿ ಅಪಮಾನಿತರಾಗಿದ್ದಾರೆ. ಇವರಿಗೆಲ್ಲೂ ನೆರವೂ ಇಲ್ಲ, ಆಶ್ರಯವೂ ಇಲ್ಲವಾಗಿದೆ. ಮುಖ್ಯ ವಿಷಯವೇನೆಂದರೆ ನಮ್ಮ ದೇಶವೂ ನಮ್ಮದಲ್ಲವೇನೋ ಎನಿಸಿದೆ’

ಹಿಂದೂ ಮುಸ್ಲಿಂ ಸಂಬಂಧಗಳು ಹದಗೆಡುತ್ತಿರುವ ಇಂದಿನ ಸಂದರ್ಭದಲ್ಲಿ ಅಶ್ಫಾಖ್ ಉಲ್ಲಾಖಾನ್ ಅಂಥವರ ಬಲಿದಾನದ ಬಗ್ಗೆ ಓದುವುದು, ತಿಳಿದುಕೊಳ್ಳುವುದು ಬಹಳ ಅಗತ್ಯ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago