ಬಿಸಿ ಬಿಸಿ ಸುದ್ದಿ

ಜ್ಯೋತಿ ನಾಯಕ್ ರಚಿಸಿದ ಬೆಳಕಹನಿ ಕೃತಿ ಲೋಕಾರ್ಪಣೆ

ಶಹಾಪುರ : ಪ್ರತಿಯೊಬ್ಬ ಮನುಷ್ಯನಿಗೆ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ನೀಡುವುದೆ ಸಾಹಿತ್ಯ,ಅಲ್ಲದೆ ಸಾಹಿತ್ಯ ಅಭಿರುಚಿ ಮೈಗೂಡಿಸಿಕೊಂಡು ಬದುಕುವುದೇ ನಿಜವಾದ ಜೀವನ ಎಂದು ಖ್ಯಾತ ಕಥೆಗಾರ,ಹಾಗೂ ಹಿರಿಯ ಸಾಹಿತಿಗಳಾದ ಸಿದ್ಧರಾಮ ಹೊನ್ಕಲ್ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಜಾ ಪ್ರಕಾಶನ ಕೊಟ್ಟೂರು ಜಿ.ಬಳ್ಳಾರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಜ್ಯೋತಿ ನಾಯಕ್ ರಚಿಸಿದ ಬೆಳಕಹನಿ ಕೃತಿ ಲೋಕಾರ್ಪಣೆ ಹಾಗೂ ದಸರಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪದಲ್ಲಿ ಪದಗಳು ಪೊಣಿಸುವುದು ಅಷ್ಟು ಸುಲಭದ ಮಾತಲ್ಲ,ಆದರೆ ಪ್ರತಿಭೆಯ ಜೊತೆಗೆ ಆಸಕ್ತಿ ಸತತ ಪ್ರಯತ್ನ ಮೇಳೈಸಿದಾಗ ಹೊರ ಹೊಮ್ಮುವ ಕಲೆ,ಸಾಹಿತ್ಯ, ಸಮಾಜವನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ ತಂತಾನಾಗಿಯೇ ಪ್ರಕಾಶಿಸಲ್ಪಡುತ್ತದೆ ಎನ್ನುವುದಕ್ಕೆ ಇಂದಿನ ಸಮಾರಂಭವೇ ಸಾಕ್ಷಿ ಎಂದು ಯಾದಗಿರಿಯ ಅಬಕಾರಿ ಇಲಾಖೆಯ ಡಿವೈಎಸ್ಪಿ ಶ್ರೀರಾಮ್ ರಾಠೋಡ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬದುಕು ಮತ್ತು ಬರಹ ಒಂದೇ ನೆಲೆಗಟ್ಟಿನಲ್ಲಿದ್ದಾಗ ಮಾತ್ರ ಅವರ ಸಾಹಿತ್ಯಕ್ಕೆ ಮತ್ತಷ್ಟು ಗಟ್ಟಿತನ ಬರುವುದಲ್ಲದೆ ಮುಂದಿನ ಸಾಹಿತ್ಯದ ಕೃಷಿಗೆ ಹುರುಪು ಹುಮ್ಮಸ್ಸು ನೀಡಬಲ್ಲುದು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಬೆಳಕಹನಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ನಂತರ ಜರುಗಿದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಗಾಳೆಪ್ಪ ಪೂಜಾರಿ ಕಾವ್ಯ ಕಟ್ಟುವುದು ಒಂದು ಕಲೆಯಾಗಿದ್ದು ಕಾವ್ಯ ಅರ್ಥ ಅರ್ಥಪೂರ್ಣ ಆಗಿರುವುದರ ಜೊತೆಗೆ ಶಬ್ದ ಪ್ರಾಸಗಳ ಜೊತೆ ಕವಿ ಸನ್ಮಿತ್ರರು ಸರಸ ಆಡಿದರೆ ಕಾವ್ಯಕ್ಕೆ ಮತ್ತಷ್ಟು ಪುಷ್ಟಿ ಕೊಡುತ್ತದೆ ಎಂದು ಸಲಹೆ ನೀಡಿದರು ಇಂದಿನ ಬಹುತೇಕ ಕವಿಗಳು ರಚಿಸಿರುವ ಕವನಗಳ ಸಾರಾಂಶ ಇಂದಿನ ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಈ ಸಮಾರಂಭದ ವೇದಿಕೆಯ ಮೇಲೆ ಕಲ್ಬುರ್ಗಿ ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ,ರೇಖು ಚವ್ಹಾಣ, ಸುರೇಶ ಕಂಬಳಿ,ಬೆಳಕಹನಿ ಕೃತಿ ಲೇಖಕ ಜ್ಯೋತಿ ನಾಯಕ್, ಹಾಗೂ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನವೂ ಕೂಡ ಏರ್ಪಡಿಸಲಾಗಿತ್ತು ನಂತರ ಜರುಗಿದ ದಸರಾ ಕವಿಗೋಷ್ಠಿಯಲ್ಲಿ ನೀಲಮ್ಮ ಮಲ್ಲೆ,ಈರಯ್ಯ ಕೊಳ್ಳಿಮಠ, ಶಂಕರ್ ಹುಲ್ಕಲ್, ಮಡಿವಾಳಪ್ಪ ಪಾಟೀಲ,ಕವಿತಾ ಪಾಟೀಲ,ಮಹಾಲಕ್ಷ್ಮೀ ಹಿರೇಮಠ,ಸುರೇಶ ಶಿರೋಳಮಠ,ಭಾಗ್ಯ ದೊರೆ, ಮೀನಾಕ್ಷಿ ಹೊಸಮನಿ,ಸುವರ್ಣ ರಾಟೋಡ್,ಲಕ್ಷ್ಮಿ ಪಟ್ಟಣಶೆಟ್ಟಿ, ಬಸವರಾಜ ಭೂತಿ,ರಾಕೇಶ್ ಪತ್ತಾರ್,ತಮ್ಮ ಸ್ವರಚಿತ ಕವನ ವಾಚಿಸಿದರು ಮಹಮದ್ ಮುಕ್ರಂ ಪ್ರಾರ್ಥಿಸಿದರೆ ಚಂದ್ರಕಲಾ ಗೂಗಲ್ ಸ್ವಾಗತಿಸಿದರು ಬಸವರಾಜ ಸಿನ್ನೂರ ನಿರೂಪಿಸಿದರು ಸುರೇಖಾ ಕುಂಬಾರ ವಂದಿಸಿದರು ನಂತರ ನೃತ್ಯ ನಟರಾಜ ನೃತ್ಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

4 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

4 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

6 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

6 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

6 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

6 hours ago