ಬಿಸಿ ಬಿಸಿ ಸುದ್ದಿ

ಐತಿಹಾಸಿಕ ದಸರಾ ಹಬ್ಬ: ವೇಣುಗೋಪಾಲಸ್ವಾಮಿ ಪಲ್ಲಕ್ಕಿ ಮೆರವಣಿಗೆ

ಸುರಪುರ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುರಪುರ ನಗರದಲ್ಲಿ ದಸರಾ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು, ವಿಜಯದಶಮಿಯಂದು ಸಂಸ್ಥಾನದ ಆರಾಧ್ಯ ದೈವ ವೇಣುಗೋಪಾಲ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ವಿಜೃಂಭಣೆಯಾಗಿ ಜರುಗಿತು.

ಈ ಸಂಸ್ಥಾನದ ವಂಶಸ್ಥರು ಇಂದಿಗೂ ಅನೇಕ ಹಬ್ಬ-ಉತ್ಸವಗಳನ್ನು ಹಾಗೂ ಸಂಪ್ರದಾಯಗಳಂತಹ ಆಚರಣೆಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದು ಎಲ್ಲಾ ಸಮುದಾಯಕ್ಕೆ ಸೇರಿದ ಜನಸಾಮಾನ್ಯರೊಂದಿಗೆ ಬೆರೆತು ಸಂಸ್ಥಾನದ ವೈಭವವನ್ನು ಸಾರುವ ಹಬ್ಬ ಹಾಗೂ ಉತ್ಸವಗಳಲ್ಲಿ ಭಾಗಿಗಳಾಗುತ್ತಾ ಬಂದಿರುವುದು ಇಲ್ಲಿ ಆಚರಿಸುತ್ತಿರುವ ಆಚರಣೆಗಳ ಜೀವಂತಿಕೆಗೆ ಸಾಕ್ಷಿಯಾಗಿದೆ, ನಮ್ಮ ರಾಜ್ಯದಲ್ಲಿ ವಿಜಯನಗರ ಸಂಸ್ಥಾನದ ಪತನಗೊಂಡ ನಂತರ ಅವರು ಆಚರಿಸುತ್ತಿದ್ದ ವಿಜಯದಶಮಿ ಹಾಗೂ ಮಹಾನವಮಿಯನ್ನೊಳಗೊಂಡ ದಸರಾ ಹಬ್ಬವನ್ನು ಮೈಸೂರು ಅರಸರು ಆಚರಿಸುತ್ತಾ ಬರುತ್ತಿದ್ದಾರೆ ಎಂದು ಹೇಳುತ್ತಾರೆ.

ಕ್ರಿ.ಶ ೧೩೩೬ರಲ್ಲಿ ಸ್ಥಾಪನೆಗೊಂಡ ವಿಜಯನಗರ ಸಂಸ್ಥಾನದ ಸಾಮ್ರಾಜ್ಯದ ವೈಭವದ ಉನ್ನತಿಗೆ ಕಾರಣರಾದ ಅನೇಕ ಮನೆತನಗಳ ಪೂರ್ವಜರಲ್ಲಿ ಸುರಪುರ ಸಂಸ್ಥಾನಿಕರ ಪಾತ್ರವೂ ಇದೆ ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ ಕೃಷ್ಣದೇವರಾಯನ ದಂಡಯಾತ್ರೆ ಹಾಗೂ ಮುದಗಲ್ ಯುದ್ಧದಲ್ಲಿ ವಿಜಯನಗರವನ್ನು ಬೆಂಬಲಿಸಿದ ಬೇಡ ಪಾಳೆಯಗಾರರು ಸುರಪುರದ ಪೂರ್ವಜರೇ ಆಗಿದ್ದರು ಎಂದು ಅನೇಕ ಇತಿಹಾಸಕಾರರು ತಮ್ಮ ಸಂಶೋಧನೆ ಮೂಲಕ ಆಧಾರ ನೀಡಿದ್ದು ಹೀಗಾಗಿ ವಿಜಯನಗರ ಸಂಸ್ಥಾನ ಕಾಲದಲ್ಲಿ ಆಚರಿಸುತ್ತಾ ಬರುತ್ತಿದ್ದ ದಸರಾ ಹಬ್ಬದ ದಿನಗಳಾದ ಮಹಾನವಮಿ ಹಾಗೂ ವಿಜಯದಶಮಿಯನ್ನು ಸುರಪುರ ನಗರದಲ್ಲಿ ಇಂದಿಗೂ ಸುರಪುರ ಸಂಸ್ಥಾನಿಕರ ನೇತೃತ್ವದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಒಂಭತ್ತು ದಿನಗಳವರೆಗೆ ವಾಹನೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು, ಅಲ್ಲದೆ ಅರಮನೆಯಲ್ಲಿ (ದರಬಾರ) ಕೂಡಾ ಒಂಭತ್ತು ದಿನಗಳವರೆಗೆ ಪೂಜೆ ನೆರವೇರಿದವು, ಆಯುಧ ಪೂಜೆ ನಿಮಿತ್ತವಾಗಿ ಇಲ್ಲಿನ ದರಬಾರನಲ್ಲಿ ರಾಜ ವಂಶಸ್ಥರಿಂದ ಶಸ್ತ್ರಾಸ್ತ್ರಗಳಿಗೆ ಪೂಜೆ ಕಾರ್ಯಗಳನ್ನು ಕೈಗೊಳ್ಳಲಾಯಿತು, ವಿಜಯದಶಮಿಯ ದಿನವಾದ ರವಿವಾರದಂದು ಗರುಢವಾಹನರೂಢನಾಗಿ ಶ್ರೀ ವೇಣುಗೋಪಾಲಸ್ವಾಮಿ ದೇವರ ಪಲ್ಲಕ್ಕಿ ಮೆರವಣಿಗೆ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು, ಪಲ್ಲಕ್ಕಿ ಮೆರವಣಿಗೆ ದರಬಾರ ಮುಂದುಗಡೆ ಆಗಮಿಸಿದಾಗ ವೇಣುಗೋಪಾಲಸ್ವಾಮಿ ದೇವರಿಗೆ ರಾಜ ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕ ಹಾಗೂ ಪರಿವಾರದವರು ಭಕ್ತಿಯಿಂದ ಪೂಜೆ ಸಲ್ಲಿಸಿದರು.

ದರಬಾರದ ಹತ್ತಿರ ರಾಜ ವಂಶಸ್ಥರಿಂದ ಪೂಜೆ ನೆರವೇರಿದ ನಂತರ ದೇವರ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ನಗರದ ಪ್ರಭು ಕಾಲೇಜು ಮೈದಾನದ (ಖಾನಿಕೆರೆ) ಹಿಂದುಗಡೆ ಇರುವ ಸ್ಥಳದಲ್ಲಿ ಬನ್ನಿ ಮುಡಿಯುವ ಪೂಜಾ ಕೈಂಕರ್ಯಗಳು ಜರುಗಿದವು, ದೇವಸ್ಥಾನದ ಪ್ರಧಾನ ಅರ್ಚಕ ಆಂಜನೇಯಾಚಾರ್ಯಲು ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ನಡೆದವು, ಮೆರವಣಿಗೆಯಲ್ಲಿ ಸಾಗುತ್ತಾ ವಾದ್ಯಮೇಳ, ಭಜನೆ ಹಾಗೂ ಗೋವಿಂದ ಗೋವಿಂದ ಎಂಬ ವೆಂಕಟರಮಣನ ನಾಮಾವಳಿಗಳ ಘೋಷಣೆಗಳು ಹಾಗೂ ಛತ್ರ ಚಾಮರಗಳೊಂದಿಗೆ ಶ್ರೀ ವೇಣುಗೋಪಾಲಸ್ವಾಮಿ ದೇವರ ಪಲ್ಲಕ್ಕಿ ದೇವಸ್ಥಾನದ ಮೆಟ್ಟಿಲುಗಳನ್ನು ಇಳಿದು ಬರುವ ಹಾಗೂ ರಸ್ತೆಗಳಲ್ಲಿ ಸಾಗುವ ದೃಶ್ಯ ವೈಭವ ಅತ್ಯಂತ ರಮಣೀಯವಾಗಿತ್ತು.

ಬನ್ನಿ ಮುಡಿಯುವ ಕಾರ್ಯ ಮುಗಿಸಿ ವಾಪಾಸು ದೇವಸ್ಥಾನಕ್ಕೆ ದೇವರು ಬರುವ ಸಮಯದಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ನಿಂತುಕೊಂಡಿದ್ದ ಭಕ್ತಾದಿಗಳು ದೇವರಿಗೆ ಕಾಯಿ, ಕರ್ಪೂರ, ಮಂಗಳಾರುತಿ ಹಾಗೂ ಬನ್ನಿ ಅರ್ಪಿಸಿ ಕೃತಾರ್ಥರಾದರು, ದೇವರಿಗೆ ಬನ್ನಿ ಅರ್ಪಿಸಿದ ನಂತರ ಜನರು ಒಬ್ಬರಿಗೊಬ್ಬರು ಬನ್ನಿ ವಿನಿಯಮ ಮಾಡಿಕೊಂಡರು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಸ್ಥಾನದ ಪರಿವಾರದವರೆಲ್ಲರೂ ಪಾಲ್ಗೊಂಡಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

1 hour ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

12 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

12 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

14 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

14 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

14 hours ago