ಬಿಸಿ ಬಿಸಿ ಸುದ್ದಿ

ಫೊರ್ಟೀಸ್‌ ಆಸ್ಪತ್ರೆಯಲ್ಲಿ ಬೈಪ್ಲೇನ್ ‌ಕ್ಯಾತ್ ಲ್ಯಾಬ್‌ ಉದ್ಘಾಟನೆ

ಬೆಂಗಳೂರು: ಬನ್ನೇರುಘಟ್ಟರಸ್ತೆಯ ಫೊರ್ಟೀಸ್‌ಆಸ್ಪತ್ರೆಯು ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಅತ್ಯಾಧುನಿಕವಾದ ಬೈಪ್ಲೇನ್‌ಕ್ಯಾತ್ ಲ್ಯಾಬ್‌ಅನ್ನು ಆರಂಭಿಸಿದೆ. ಕರ್ನಾಟಕದಲ್ಲಿಆರಂಭವಾದ ಮೊಟ್ಟ ಮೊದಲ ಕ್ಯಾತ್ ಲ್ಯಾಬ್‌ಇದಾಗಿದೆ.

ಈ ಹೊಸ ಕ್ಯಾತ್ ಲ್ಯಾಬ್ ನ್ಯೂರೋವಾಸ್ಕ್ಯುಲರ್ ಅಸ್ವಸ್ಥತೆಗಳಿಗೆ ಅತ್ಯಾಧುನಿಕವಾದಆರೈಕೆ ಮತ್ತು ಸುರಕ್ಷತೆಯನ್ನು ನೀಡಲಿದೆ. ಈ ಕ್ಯಾತ್ ಲ್ಯಾಬ್‌ಅನ್ನುಬೆಂಗಳೂರು ದಕ್ಷಿಣ ಲೋಕಸಭಾಕ್ಷೇತ್ರದ ಸಂಸದ ತೇಜಸ್ವಿ ಸೂರ್ಯಅವರುಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿಆರೋಗ್ಯ ಮತ್ತುಕುಟುಂಬ ಕಲ್ಯಾಣಇಲಾಖೆಯಆಯುಕ್ತ ಪಂಕಜ್ ಪಾಂಡೆ, ಆರೋಗ್ಯಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ಅಖ್ತರ್ ಮತ್ತು ಬೊಮ್ಮನಹಳ್ಳಿ ವಿಧಾನಸಭಾಕ್ಷೇತ್ರದ ಶಾಸಕ ಸತೀಶ್‌ರೆಡ್ಡಿಅವರು ಬೆಂಗಳೂರಿನ ಫೊರ್ಟೀಸ್‌ಆಸ್ಪತ್ರೆಯ ವಲಯ ನಿರ್ದೇಶಕಡಾ.ಮನೀಶ್ ಮಟ್ಟೂ, ಬನ್ನೇರುಘಟ್ಟ ಫೊರ್ಟೀಸ್‌ಆಸ್ಪತ್ರೆಯ ನ್ಯೂರೋಸರ್ಜರಿಯ ಡಿವಿ-ನಿರ್ದೇಶಕಡಾ.ರಾಜ್‌ಕುಮಾರ್‌ಅವರುಇದ್ದರು.
ಹೈ ಎಂಡ್ ವರ್ಷನ್‌ನ ಫಿಲಿಪ್ಸ್‌ಅಝುರಿಯಾನ್‌ಬೈಪ್ಲೇನ್ ೭ಬಿ ೨೦/೧೫ ಕ್ಯಾತ್ ಲ್ಯಾಬ್‌ಎಲ್ಲಾರೀತಿಯ ನ್ಯೂರೋವಾಸ್ಕ್ಯುಲರ್ ಅಸ್ವಸ್ಥತೆಗಳಿಗೆ ಚಿಕಿತ್ಸೆಯನ್ನು ನೀಡುವ ಏಕೈಕ ಕೇಂದ್ರವಾಗಿದೆ.

ಇದರಲ್ಲಿನತಂತ್ರಜ್ಞಾನವುವಿಶೇಷವಾಗಿ ಅಕ್ಯೂಟ್ ಸ್ಟ್ರೋಕ್ ಮತ್ತುಅನ್ಯೂರಿಸ್ಮಾಲ್‌ರಪ್ಚರ್‌ಅನ್ನುಯಾವುದೇಓಪನ್ ಸರ್ಜರಿಗಳಿಲ್ಲದೇ ನ್ಯೂರೋಇಂಟರ್‌ವೆನ್ಷನಲ್ ವಿಧಾನಗಳನ್ನು ಬಳಸಿ ತುರ್ತು ಚಿಕಿತ್ಸೆಗಳನ್ನು ನೀಡಲು ಸಹಕಾರಿಯಾಗುತ್ತದೆ.

ಬೆಂಗಳೂರು ದಕ್ಷಿಣ ಲೋಕಸಭಾಕ್ಷೇತ್ರದ ಸಂಸದ ತೇಜಸ್ವಿ ಸೂರ್ಯಅವರು ಮಾತನಾಡಿ, “ಕೋವಿಡ್-೧೯ ಸಾಂಕ್ರಾಮಿಕಇದ್ದಾಗ್ಯೂ ಫೊರ್ಟೀಸ್‌ಅಸ್ಪತ್ರೆಯುರೋಗಿಗಳ ಆರೈಕೆಗೆ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಲುದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಜೆಪಿ ನಗರ, ಜಯನಗರ ಮತ್ತು ಬನ್ನೇರುಘಟ್ಟದಂತಹದಕ್ಷಿಣ ಬೆಂಗಳೂರು ಭಾಗದ ಹಿರಿಯ ನಾಗರಿಕರು ಮತ್ತುಅಗತ್ಯಇರುವವರಿಗೆ ಸೂಕ್ತ ವೈದ್ಯಕೀಯಪಾರ್ಶ್ವವಾಯುಚಿಕಿತ್ಸೆಯನ್ನುದೊರೆಯುವಂತೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಬೆಂಗಳೂರಿನ ಫೊರ್ಟೀಸ್‌ಆಸ್ಪತ್ರೆಯು ವಿಶೇಷವಾಗಿ ಕೋವಿಡ್ ಸಮಯದಲ್ಲಿ ರೋಗಿಗಳಿಗೆ ಸಕಾಲದಲ್ಲಿತುರ್ತು ಮತ್ತುಇನ್ನಿತರೆ ವೈದ್ಯಕೀಯ ಚಿಕಿತ್ಸೆಗಳನ್ನು ನೀಡುವ ಮೂಲಕ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನ ಫೊರ್ಟೀಸ್‌ಆಸ್ಪತ್ರೆಯ ವಲಯ ನಿರ್ದೇಶಕಡಾ.ಮನೀಶ್ ಮಟ್ಟೂಅವರು ಮಾತನಾಡಿ, “ಇತ್ತೀಚಿನಆವೃತ್ತಿಯ ಬೈಪ್ಲೇನ್‌ಕ್ಯಾತ್ ಲ್ಯಾಬ್ ವ್ಯವಸ್ಥೆಯನ್ನು ಹೊಂದಿರುವಕರ್ನಾಟಕದ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಪಾರ್ಶ್ವವಾಯು ಪೀಡಿತರಿಗೆ ಹೆಚ್ಚು ಸಮರ್ಥವಾಗಿಚಿಕಿತ್ಸೆಯನ್ನು ನೀಡುವ ನಮ್ಮ ಹೊಸ ಸೌಲಭ್ಯಇದಾಗಿದೆ. ಸುಧಾರಿತತಂತ್ರಜ್ಞಾನದ ಅಳವಡಿಕೆಯೊಂದಿಗೆ ನಾವು ಓಪನ್ ಸರ್ಜರಿಗಳ ಬದಲಿಗೆ ಕನಿಷ್ಠ ಪ್ರಮಾಣದ ಇನ್‌ವೇಸಿವ್ ವಿಧಾನಗಳನ್ನು ಬಳಸಿಕೊಂಡು ರೋಗಿಗಳಿಗೆ ಪ್ರಯೋಜನಗಳನ್ನು ಮಾಡಿಕೊಡಲಿದ್ದೇವೆ ಮತ್ತುಅವರು ಬೇಗನೇ ಗುಣಮುಖರಾಗುವಂತೆ ಮಾಡುವಉದ್ದೇಶವನ್ನುಹೊಂದಿದ್ದೇವೆ.

ಈ ಬೈಪ್ಲೇನ್‌ಕ್ಯಾತ್ ಲ್ಯಾಬ್‌ಒಂದುಕಟ್ಟಿಂಗ್‌ಎಡ್ಜ್‌ತಂತ್ರಜ್ಞಾನವಾಗಿದ್ದು, ಇದು ನಮ್ಮ ರೋಗಿಗಳಿಗೆ ಸುರಕ್ಷಿತಚಿಕಿತ್ಸಾ ವಿಧಾನಗಳಿಗೆ ನೆರವಾಗಲಿದೆ. ನಮ್ಮ ನುರಿತ ನ್ಯೂರೋ ಸರ್ಜನ್‌ಗಳು, ನ್ಯೂರೋಲಾಜಿಸ್ಟ್‌ಗಳು, ನ್ಯೂರೋಇಂಟರ್‌ವೆನ್ಷನಲ್‌ರೇಡಿಯಾಲಾಜಿಸ್ ಮತ್ತುತಂತ್ರಜ್ಞರು ಹಾಗೂ ನರ್ಸ್‌ಗಳು ದಿನದ ೨೪ ಗಂಟೆಯೂ ಲಭ್ಯವಿದ್ದಾರೆ. ಇವರುತುರ್ತು ನ್ಯೂರೋಇಂಟರ್‌ವೆನ್ಷನಲ್ ವಿಧಾನಗಳನ್ನು ಕೈಗೊಳ್ಳಲಿದ್ದಾರೆ.

ಈ ಮೂಲಕ ನ್ಯೂರೋವಾಸ್ಕ್ಯುಲರ್ ಅಸ್ವಸ್ಥೆಗಳಿಗೆ ಚಿಕಿತ್ಸೆ ನೀಡುವಒಂದುತಾಣವಾಗಿದೆ” ಎಂದುಅಭಿಪ್ರಾಯಪಟ್ಟರು.
ಬನ್ನೇರುಘಟ್ಟ ಫೊರ್ಟೀಸ್‌ಆಸ್ಪತ್ರೆಯ ನ್ಯೂರೋಸರ್ಜರಿಯ ಡಿವಿ-ನಿರ್ದೇಶಕಡಾ.ರಾಜ್‌ಕುಮಾರ್‌ಅವರು ಮಾತನಾಡಿ, “ಭಾರತದಲ್ಲಿ ಪಾರ್ಶ್ವವಾಯು ಸಾವಿಗೆ ಮತ್ತುಅಂಗವೈಕಲ್ಯತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇಂತಹ ಪ್ರಕರಣಗಳಿಗೆ ತುರ್ತಾಗಿಚಿಕಿತ್ಸೆ ನೀಡುವಅಗತ್ಯವಿದೆ. ಪಾರ್ಶ್ವವಾಯುವಿಗೆತುತ್ತಾದ ನಿಗದಿತಗೋಲ್ಡನ್‌ಅವರ್‌ನಲ್ಲಿರೋಗಿಗೆತಕ್ಷಣಚಿಕಿತ್ಸೆಕೊಡಿಸುವುದುಅತ್ಯಂತ ಪ್ರಮುಖವಾಗಿದೆ. ಇ

ದರಿಂದ ಮಿದುಳಿಗೆ ಆಗಬಹುದಾದ ಹಾನಿಯನ್ನುತಪ್ಪಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ನಾವು ಬೈಪ್ಲೇನ್‌ಕ್ಯಾತ್ ಲ್ಯಾಬ್‌ತಂತ್ರಜ್ಞಾನವನ್ನು ನಮ್ಮಘಟಕದಲ್ಲಿಆರಂಭಿಸುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಇದುಎರಡು ವಿಭಿನ್ನವಾದ ಪ್ಲೇನ್‌ಗಳಲ್ಲಿ ಏಕಕಾಲಕ್ಕೆ ಮಿದುಳಿನ ರಕ್ತನಾಳಗಳ ಮೇಲೆ ನಿಗಾ ಇಡಲಿದೆ. ಇದರಿಂದ ಸ್ಪಷ್ಟವಾಗಿರೋಗವನ್ನುಅಂದಾಜು ಮಾಡಬಹುದು ಮತ್ತು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿ ಸಂಕೀರ್ಣವಾದ ನ್ಯೂರೋಇಂಟರ್‌ವೆನ್ಷನಲ್ ವಿಧಾನಗಳಲ್ಲಿ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗುತ್ತದೆ. ಇದು ಹೈಎಂಡ್ ಮಶಿನ್ ಆಗಿದ್ದು, ಸಿಟಿ ಸ್ಕ್ಯಾನ್ ಮತ್ತುತುರ್ತು ಸಂದರ್ಭಗಳಲ್ಲಿ ಅತ್ಯಂತ ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಲಿದೆ. ಈ ಮೂಲಕ ಇದು ಪಾರ್ಶ್ವವಾಯುರೋಗಕ್ಕೆ ನಿಖರವಾದಚಿಕಿತ್ಸೆಯನ್ನು ನೀಡಲು ನೆರವಾಗುತ್ತದೆ. ಅಕ್ಯೂಟ್ ಸ್ಟ್ರೋಕ್ ಮತ್ತುಅನ್ಯೂರಿಸ್ಮಾಲ್‌ರಪ್ಚರ್‌ನಂತಹತುರ್ತು ನ್ಯೂರೋಇಂಟರ್‌ವೆನ್ಷನಲ್ ಪ್ರಕರಣಗಳಿಗೆ ಇದರ ಮೂಲಕ ಚಿಕಿತ್ಸೆ ನೀಡಬಹುದಾಗಿದ್ದು, ರೋಗಿಯು ಶೀಘ್ರ ಗುಣಮುಖರಾಗಿ ಮನೆಗೆ ತೆರಳಬಹುದಾಗಿದೆ” ಎಂದರು.

ಬನ್ನೇರುಘಟ್ಟರಸ್ತೆಯ ಫೊರ್ಟೀಸ್‌ಆಸ್ಪತ್ರೆಯಇಂಟರ್‌ವೆನ್ಷನಲ್‌ಕಾರ್ಡಿಯೋಲಾಜಿಯ ನಿರ್ದೇಶಕಡಾ.ರಾಜ್‌ಪಾಲ್ ಸಿಂಗ್ ಅವರು ಮಾತನಾಡಿ, “ಭಾರತದಲ್ಲಿಕಾರ್ಡಿಯಾಕ್ ಪ್ರಕರಣಗಳು ಸಾವಿಗೆ ಪ್ರಮುಖವಾದ ಕಾರಣಗಳಲ್ಲಿ ಒಂದಾಗಿವೆ. ಫೊರ್ಟೀಸ್‌ನಲ್ಲಿ ನಾವು ಅತ್ಯುತ್ತಮವಾದತುರ್ತುಚಿಕಿತ್ಸೆ ಮತ್ತುಆರೈಕೆಯೊಂದಿಗೆರೋಗಿಯನ್ನು ಉಳಿಸಿಕೊಳ್ಳುವ ಸಾಧ್ಯತೆಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ. ಇತ್ತೀಚಿನಎಕ್ಸ್-ರೇಇಮೇಜಿಂಗ್‌ತಂತ್ರಜ್ಞಾನವಾಗಿರುವ ಬೈಪ್ಲೇನ್‌ಕ್ಯಾತ್ ಲ್ಯಾಬ್ ನೆರವಿನಿಂದ ನಾವು ಕಡಿಮೆ ಇನ್‌ವೇಸಿವ್ ಡಯಾಗ್ನಾಸ್ಟಿಕ್‌ನೊಂದಿಗೆ ವಿಸ್ತಾರವಾದರೀತಿಯಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತದೆ ಮತ್ತು ಇಂಟರ್‌ವೆನ್ಷನಲ್‌ಕಾರ್ಡಿಯೋವಾಸ್ಕ್ಯುಲರ್ ವಿಧಾನಗಳನ್ನು ನಡೆಸಲಾಗುತ್ತದೆ. ಇಶೆಮಿಕ್ ಹೃದ್ರೋಗ ಮತ್ತು ಸ್ಟ್ರೋಕ್ ವಿಧಾನಗಳನ್ನು ಕಡಿಮೆಅವಧಿಯಲ್ಲಿಕೈಗೊಂಡುಅತ್ಯುತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಬನ್ನೇರುಘಟ್ಟರಸ್ತೆಯ ಫೊರ್ಟೀಸ್‌ಆಸ್ಪತ್ರೆಯಇಂಟರ್‌ವೆನ್ಷನಲ್‌ರೇಡಿಯೋಲಾಜಿಸ್ಟ್‌ಡಾ.ಗುರುಚರಣ್ ಶೆಟ್ಟಿಅವರು ಮಾತನಾಡಿ, “ಹೊಸ ಫಿಲಿಪ್ಸ್‌ಅಝೂರಿಯಾನ್ ಬೈಪ್ಲೇನ್‌ಕ್ಯಾತ್ ಲ್ಯಾಬ್‌ಒಂದುಅತ್ಯಂತ ಸುಧಾರಿತಡಿಜಿಟಲ್ ಸಬ್‌ಟ್ರಾಕ್ಷನ್‌ಆಂಜಿಯೋಗ್ರಾಫಿ ಮಶಿನ್ ಆಗಿದೆ. ದೇಶದಲ್ಲಿಇಂತಹ ಯಂತ್ರಗಳನ್ನು ಅಳವಡಿಸಿರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಈ ಯಂತ್ರವುರೋಗ ಪತ್ತೆಯಲ್ಲಿ ವಿಸ್ತಾರವಾದ ಸಾಧ್ಯತೆಗಳನ್ನು ಹೊಂದಿದೆ.

ಎಂಡೋವಾಸ್ಕ್ಯುಲರ್, ನ್ಯೂರೋಇಂಟರ್‌ವೆನ್ಷನಲ್, ಗ್ಯಾಸ್ಟ್ರೋಇಂಟೆಸ್ಟಿನಲ್ ಹಾಗೂ ಪೆರಿಫರೆಲ್ ವಾಸ್ಕ್ಯುಲರ್ ಇಂಟರ್‌ವೆನ್ಷನ್‌ಗಳ ಬಗ್ಗೆ ಮೌಲ್ಯಯುತಗೊಳಿಸಲಿದೆ. ಇದು ಸಿ-ಆರ್ಮ್‌ಗಳನ್ನು ಎರಡು ಪ್ಲೇನ್‌ಗಳಿಂದ ಏಕಕಾಲಕ್ಕೆ ನೋಡುವ ಸಾಮರ್ಥ್ಯವನ್ನು ಹೊಂದಿದೆ. ಇದುಉತ್ತಮರೆಸಲೂಶನ್‌ನೊಂದಿಗೆ ಅನೇಕ ಸಂಕೀರ್ಣವಾದ ನರ ಮತ್ತುದೇಹದ ಮಧ್ಯಸ್ಥಿಕೆಯ ಕಾರ್ಯವಿಧಾನಗಳ ಸುರಕ್ಷತೆ ಮತ್ತು ನಿಖರತೆಯನ್ನು ಹೆಚ್ಚಿಸುತ್ತದೆ. ಇಷ್ಟೇ ಅಲ್ಲದೇ, ಕ್ಯಾತ್ ಲ್ಯಾಬ್‌ನೊಳಗೆ ಆಂಜಿಯೋಗ್ರಾಂ ಮತ್ತು ಸಿಟಿ ಸ್ಕ್ಯಾನ್‌ಅನ್ನು ವೇಗವಾಗಿ ಪಡೆದುಕೊಳ್ಳಲು ಸಮರ್ಥವಾಗಿದೆ. ಈ ಮೂಲಕ ಸಂಕೀರ್ಣವಾದ ನರ ಮತ್ತುದೇಹದ ಮಧ್ಯಸ್ಥಿಕೆಗಳ ಕಾರ್ಯವಿಧಾನಗಳ ಕಾರ್ಯಕ್ಷಮತೆಯನ್ನುತುಲನಾತ್ಮಕವಾಗಿ ಸುಲಭರೀತಿಯಲ್ಲಿಅನುಮತಿಸುತ್ತದೆ” ಎಂದು ವಿವರಿಸಿದರು.

ಪ್ರತಿ ೨೦ ಸೆಕೆಂಡುಗಳಿಗೆ ಒಬ್ಬ ಭಾರತೀಯರು ಬ್ರೇನ್ ಸ್ಟ್ರೋಕ್‌ಗೆತುತ್ತಾಗುತ್ತಿದ್ದಾರೆಅಥವಾ ಪ್ರತಿ ನಿಮಿಷಕ್ಕೆ ಮೂವರುತುತ್ತಾಗುತ್ತಿದ್ದಾರೆ. ಬದಲಾಗುತ್ತಿರುವಜೀವನಶೈಲಿ ಪರಿಣಾಮ ಈ ಪ್ರಕರಣಗಳು ಹೆಚ್ಚಾಗುತ್ತಿರುವುದುಆತಂಕದ ವಿಚಾರವಾಗಿದೆ.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

40 mins ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

12 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

23 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

23 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago