ಶಹಾಬಾದ:ನಗರದಲ್ಲಿ ಕನ್ನಡ ಕಟ್ಟುವ ಕೆಲಸಕ್ಕೆ , ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಲು ಒಂದು ಸುಂದರವಾದ ರಂಗ ಮಂದಿರ ನಿರ್ಮಾಣ ಮಾಡಿ, ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜತೆಗೆ ಕನ್ನಡ ಬೆಳೆಸುವ ಕೆಲಸಕ್ಕೆ ಮುಂದಾಗೋಣ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.
ಅವರು ರವಿವಾರ ತಾಲೂಕಾಢಳಿತ, ನಗರಸಭೆ ಹಾಗೂ ಕನ್ನಡಪರ ಸಂಘಟನೆಗಳ ವತಿಯಿಂದ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆ, ಸಮಾರಂಭಗಳು ಮಾಡಲು ಸರಕಾರದಿಂದ ಯಾವುದೇ ರೀತಿಯ ಭವನಗಳು ಇಲ್ಲದ ಕಾರಣ, ಕನ್ನಡ ಪರ ಸಂಘಟನೆಗಳು ಖಾಸಗಿ ಸಭಾಂಗಣದಲ್ಲಿ ಅಧಿಕ ವೆಚ್ಚ ಪಾವತಿಸುವ ಅನಿವಾರ್ಯತೆ ಉಂಟಾಗಿದೆ.ಅದಕ್ಕಾಗಿ ರಂಗ ಮಂದಿರ ನಿರ್ಮಾಣ ವಾಗಬೇಕೆಂದು ಈಗಾಗಲೇ ಸಾಕಷ್ಟು ಜನರಿಂದ ಮನವಿ ಪತ್ರ ಬಂದಿವೆ.ಸದ್ಯದಲ್ಲೇ ನಗರದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿರುವ ರಂಗ ಮಂದಿರವನ್ನು ಉನ್ನತೀಕರಿಸಿ, ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು.ಇದರಿಂದ ಇಲ್ಲಿನ ಸಾಹಿತಿಗಳಿಗೆ, ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ.ಆ ನಿಟ್ಟಿನಲ್ಲಿ ಶಾಸಕರೊಂದಿಗೆ ಮಾತನಾಡಿ ಆದಷ್ಟು ಬೇಗನೆ ರಂಗ ಮಂದಿರದಲ್ಲಿ ಚಟುವಟಿಕೆ ನಡೆಯುವಂತೆ ಮಾಡಲಾಗುವುದು.ಅಲ್ಲದೇ ಕನ್ನಡ ಉಳಿಸುವ, ಬೆಳೆಸುವ ಕೆಲಸಕ್ಕೆ ಮುಂದಾಗೋಣ ಎಂದರು.
ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ,ಕಸಾಪ ತಾಲೂಕಾಧ್ಯಕ್ಷ ಮೃತ್ಯುಂಜಯ್ ಹಿರೇಮಠ,ಕಲಬುರಗಿ ಗ್ರಾಮೀಣ ಕಸಾಪ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿದರು. ಉದ್ಯಮಿ ಅಣವೀರ ಇಂಗಿನಶೆಟ್ಟಿ, ತಾಪಂ ಅಧ್ಯಕ್ಷೆ ಸಂಗೀತಾ ಕಾರೊಳ್ಳಿ, ತಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮಿ,ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಡಿವಾಯ್ಎಸ್ಪಿ ವೆಂಕನಗೌಡ ಪಾಟೀಲ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಭಾವಿ, ಎಸಬಿಐ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ ಇತರರು ಇದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುರೇಖಾ ಜಗನ್ನಾಥ ಡೆಂಗಿ ಅವರನ್ನು ಸನ್ಮಾನಿಸಲಾಯಿತು.ರಮೇಶ ಭಟ್ ನಿರೂಪಿಸಿದರು, ರಾಜು ಕೋಬಾಳ ಹಾಗೂ ಯಶೋಧಾ ಮಸ್ಕಿ ಪ್ರಾರ್ಥಿಸಿದರು, ಲೋಹಿತ್ ಕಟ್ಟಿ ಸ್ವಾಗತಿಸಿದರು, ರವಿಕುಮಾರ ಅಲ್ಲಂಶೆಟ್ಟಿ ವಂದಿಸಿದರು.
ಎಪಿಎಂಸಿ ಸದಸ್ಯ ವಿಶ್ವರಾಧ್ಯ ಬೀರಾಳ,ಪಿಐ ಅಮರೇಶ,ಕನಕಪ್ಪ ದಂಡಗುಲಕರ್, ಶರಣಗೌಡ ಪಾಟೀಲ ಗೋಳಾ(ಕೆ), ದೇವೆಂದ್ರ ಕಾರೊಳ್ಳಿ, ಪೂಜಾರಿ ಮೇತ್ರೆ, ಬಸವರಾಜ ಮಯೂರ,ಮಲ್ಕಣ್ಣ ಮುದ್ದಾ, ಪ್ರವೀಣ ರಾಜನ್,ನಗರಸಭೆಯ ಕಂದಾಯ ಅಧಿಕಾರಿ ಸುನೀಲಕುಮಾರ, ಾರೋಗ್ಯ ನಿರೀಕ್ಷಕ ಶಿವರಾಜಕುಮಾರ ಸೇರಿದಂತೆ ಅನೇಕರು ಇದ್ದರು.
ಶಿಷ್ಟಾಚಾರದ ಪಾಲನೆ ಮಾಡಿ
ತಾಲೂಕಾಢಳಿತ ವತಿಯಿಂದ ರವಿವಾರ ಆಯೋಜಿಸಲಾದ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಶಿಷ್ಟಾಚಾರದ ಪಾಲನೆಯನ್ನು ತಹಸೀಲ್ದಾರರು ಮಾಡದೇ ರಾಜಕೀಯ ಮುಖಂಡರಿಗೆ ಹಾಗೂ ಎಸ್ಬಿಐ ಬ್ಯಾಂಕ್ ವ್ಯವಸ್ಥಾಪಕರಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿದರು. ಅಲ್ಲದೇ ಚುನಾಯಿತ ಎಪಿಎಂಸಿ ಸದಸ್ಯ ವಿಶ್ವರಾಧ್ಯ ಬೀರಾಳ ಅವರನ್ನು ಕೆಳಗಡೆ ಕೂಡಿಸಲಾಗಿತ್ತು.ಕಸಾಪ ನಗರಾಧ್ಯಕ್ಷರಿಗೆ ವೇದಿಕೆ ಆಹ್ವಾನ ಮಾಡಲಿಲ್ಲ. ರಾಜಕೀಯ ಮುಖಂಡರಿಗೆ ಆಹ್ವಾನ ನೀಡಿದವರು, ಇನ್ನುಳಿದ ವಿವಿಧ ಪಕ್ಷದ ರಾಜಕೀಯ ಮುಖಂಡರಿಗೂ ಕರೆಯಬೇಕಾಗಿತ್ತು.ಆದರೆ ಹಾಗೇ ಮಾಡಲಿಲ್ಲ.ಅಲ್ಲದೇ ಶಿಷ್ಟಾಚಾರದ ಪಾಲನೆಯೂ ಮಾಡಲಿಲ್ಲ. ಇನ್ನು ಮುಂದೆ ಶಿಷ್ಟಾಚಾರದ ಪಾಲನೆಯಾಗಬೇಕು.ಇಲ್ಲದಿದ್ದರೇ ಕಾರ್ಯಕ್ರಮದ ವೇದಿಕೆ ಮುಂದೆ ಪ್ರತಿಭಟಿಸಲಾಗುವುದು- ಮರಲಿಂಗ ಕಮರಡಗಿ ಅಧ್ಯಕ್ಷರು ಹಿಂದುಳಿದ ವರ್ಗದ ಬ್ಲಾಕ್ ಕಾಂಗ್ರೆಸ್ ಶಹಾಬಾದ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…