ಕಲಬುರಗಿ: ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಲಯ ವತಿಯಿಂದ ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವಿದ್ಯಾಲಯದ ಅಧ್ಯಕ್ಷೆ ಸುಷ್ಮಾವತಿ ಹೊನ್ನಗೆಜ್ಜೆ ಅವರು ಮಾತನಾಡಿ ಪವಿತ್ರವಾದ ಕನ್ನಡ ನಾಡಿನಲ್ಲಿ ಅನೇಕ ಜನರು ಅತ್ಯಂತ ದೊಡ್ಡ ಮಟ್ಟಕ್ಕೆ ಸಾಧನೆಯನ್ನು ಮಾಡಿದ್ದಾರೆ ಹಾಗೆ ನಾಡಿನ ಶಾಲಾ ಮತ್ತು ಕಾಲೇಜುಗಳಲ್ಲಿ ನಾವು ಶಿಕ್ಷಕರು ಮಕ್ಕಳಿಗೆ ಹಿಂದಿನ ಸಂಸ್ಕೃತಿಯ ಬಗ್ಗೆ ತಿಳಿಹೇಳುವ ಪ್ರಯತ್ನ ಮಾಡಬೇಕೆಂದು ಹೇಳಿದರು.
ಸಿಬ್ಬಂದಿಯಾದ ಶಾಂತಲಾ ನಂದರಗಿ ಅವರು ಮತನಾಡುತ್ತಾ ನಾಡಿನ ಧ್ವಜ ಕೆಂಪು ಹಾಗೂ ಹಳದಿ ಬಣ್ಣದ ದ್ವಿವರ್ಣದ್ದಾಗಿದ್ದು ಇದು ಸಾಂಪ್ರದಾಯಿಕ ಸಂಸ್ಕೃತಿಯ ಸಂಕೇತವಾದ ಹಳದಿ ಸಮಾಜದ ಆರೋಗ್ಯ ಹಾಗೂ ಕೆಂಪು ಹಣೆಬೊಟ್ಟಿನ ಸಂಕೇತದಂತೆ ಅಭಿವೃದ್ದಿ ಸಂಕೇತವಾಗಿದೆ. ಇದಕ್ಕೆ ತನ್ನದೆ ಆದ ಇತಿಹಾಸವಿದೆ. ನಮ್ಮ ಕನ್ನಡ ಬಾವುಟಕ್ಕೆ ಅಧಿಕೃತವಾದ ಸ್ಥಾನಮಾನ ಹೊಂದಿರದ್ದರು ಕ್ರಿ.ಶ ೧೯೬೫ರಲ್ಲಿ ಶ್ರೀ ಎಂ. ರಾಮಮೂರ್ತಿಯವರು ರಾಜಕೀಯ ಕನ್ನಡ ಪಕ್ಷಕಾ ಗಿ ಬಳಸಲು ಹುಟ್ಟು ಹಾಕಿದರೂ ಹೆಚ್ಚು ಕಾಲು ಉಳಿಯಲಿಲ್ಲ. ನಮ್ಮ ಭಾಷೆಯನ್ನು ೪೫ಲಕ್ಷ ಕನ್ನಡಿಗರು ಎಂದು ಹೇಳತಾ ಇದರ ಮೂಲ ದ್ರಾವಿಡ. ಇದರ ಮೊಟ್ಟ ಮೊದಲ ಶಾಸನ ಹಲ್ಮಡಿ . ಇದು ಸುಮಾರು ೨೫೦೦ ವರ್ಷಗಳಷ್ಟು ಹಳೆಯದ್ದಾಗಿದ್ದು, ಇದು ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಮತ್ತು ತರ್ಕಬದ್ದವಾಗಿದೆ. ಈ ಭಾಷೆಗೆ ವಿದೇಶಿಯೊಬ್ಬನಿಂದ ಶಬ್ದಕೋಶ ರಚನೆಯಾಯಿತು. ಅಂತೆಯೇ ಈ ಭಾಷೆಗೆ ಶ್ರೀ ವಿನೋಭಾ ಭಾವೆಯವರು ವಿಶ್ವ ಲಿಪಿಗಳ ರಾಣಿ ಎಂದು ಕರೆದಿದ್ದಾರೆ.
ಕ್ರಿ.ಶ ೪೫೦ ರಲ್ಲಿ ರಚಿತವಾದ ಕನ್ನಡ ಭಾಷೆಯಲ್ಲಿ ರಗಳೆ, ಛಂದಸ್ಸು, ಷಟ್ಪದಿಗಳ ಸಾಹಿತ್ಯವನ್ನು ಬೇರಾವು ಭಾಷೆಯಲ್ಲಿ ಕಾಣಲಾಗದು. ಹಾಗೆಯೇ ಕುವೆಂಪುರವರು ಪಡೆದಿರುವಷ್ಟು ಗೌರವ ಸಾಹಿತ್ಯ ಪ್ರಶಸ್ತಿಗಳನ್ನು ಬೇರೆ ಯಾವ ಭಾರತೀಯ ಸಾಹಿತಿಯು ಬಹುಶಃ ಪಡೆದಿರಲಿಕ್ಕಿಲ್ಲ. ಇಷ್ಟು ಹಿನ್ನಲೆಯನ್ನು ಒಳಗೊಂಡ ನಮ್ಮ ಕಸ್ತೂರಿ ಕನ್ನಡ, ಚಿನ್ನದ ನಾಡಿ ಧ್ವಜವನ್ನು ಕರ್ನಾಟಕದ ಎಲ್ಲಡೆ ಸ್ಥಿರವಾಗಿ ಬಳಸಲಾಗುತ್ತಿಲ್ಲ ಎಂಬುದೇ ವಿಶಾದನೀಯ. ವಿವಿದತೆಯಲ್ಲಿ ಏಕತೆ ಇದೆ ಎಂಬ ಭಾರತದ ಒಕ್ಕೂಟದ ಮೂಲಮಂತ್ರದಂತೆ ಅಅವುಗಳಿಗೆ ಮಾನ್ಯತೆ ನೀಡಿ ಗೌರವಿಸಬೇಕು. ನಾವು ಕನ್ನಡಿಗರು ತಾಯಿ ಭುವನೇಶ್ವರಿಯನ್ನು ನೆನೆಯುತ್ತ ಕನ್ನಡ ಭಾಷೆಗೆ ಬೆಲೆ ಕೊಡಬೇಕು.
ಬೆಂಗಳೂರಿನಂಥ ರಾಜಧಾನಿಯಲ್ಲಿ ಎನ್ನಡ, ಎಕ್ಕಡ ಎನ್ನುವುದೇ ಕೇಳಿದರೆ, ಉ.ಕರ್ನಾಟಕದಲ್ಲಿ ಶಂಬರ ದೋನಸೆ, ಆಯಿ ಕೇಳಿ ಬಂದು ಕನ್ನಡ ಮಂಗಮಾಯವಾಗಿದೆ. ಪರರ ತಾಯಿಯನ್ನು ದ್ವೇಷಿಸಿ ಅಂತಲ್ಲ ನಿನ್ನ ತಾಯಿಯನ್ನು ಮರೆತು ಪರರ ತಾಯಿಗೆ ಬೆಲೆ ಕೊಟ್ಟರೆ? ನಮ್ಮ ತಾಯಿಗೆ ಅಪಮಾನ ಮಾಡಿದಂತಲ್ಲವೇ? ಇನ್ನಾದರೂ ಕೇವಲ ಆಚರಣೆಯ ದಿನ ಮಾತ್ರ ಕನ್ನಡ ಕನ್ನಡ ಎಂದು ಹೇಳುವುದಲ್ಲ, ಕನ್ನಡ ಭಾಷೆಗೆ, ನೆಲೆಗೆ ಜಾತಿ ಭೇದವಿಲ್ಲದೆ ಪ್ರತಿಯೊಬ್ಬ ಕನ್ನಡಿಗನು ಇದಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಎಲ್ಲರಲ್ಲೂ ನನ್ನ ಪ್ರಾರ್ಥನೆ ಎಂದು ಹೇಳಿದರು.
ವಿದ್ಯಾರ್ಥಿ ಕು. ಸಂಗಮನಾಥನು ವಂದನಾರ್ಪಣೆ ಮಾಡಿದನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುಷ್ಮಾವತಿ ಹೊನ್ನಗೆಜ್ಜೆ, ಪ್ರಾಂಶುಪಾಲರಾದ ಶರಣಪ್ಪ ಬಿ ಹೊನ್ನಗೆಜ್ಜೆ , ಸಿಬಂದಿವರ್ಗದವರಾದ ಶಾಂತಲಾ, ರಾಜೇಶ್ವರಿ ಕಿರಣಗಿ, ರಾಜಕುಮಾರ ಬಿ, ಸುಧಾ ಶೆಟ್ಟಿ, ಶೆಟ್ಟೆಪ್ಪ ಪೂಜಾರಿ, ಸುಜಾತಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಕು. ಭವಾನಿ ಕು. ರೂಪಾ ನಾಡಗೀತೆಯನ್ನು ಹಾಡಿ ಸಭೆಗೆ ಶೋಭೆ ತಂದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…