ಬಿಸಿ ಬಿಸಿ ಸುದ್ದಿ

ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಪಡೆ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಕೋಲಾರ: ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಪಡೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಸಿ ರಮೇಶ್ ರವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಪಡೆಯ ಕೋಲಾರ. ಚಿಕ್ಕಬಳ್ಳಾಪುರ. ಹಾಗೂ ಗೌರಿಬಿದನೂರು ಘಟಕದ ವತಿಯಿಂದ ಗೌರಿಬಿದನೂರು ತಾಲೂಕಿನಲ್ಲಿ ಮುದುಗೆರೆ ಹಾಗೂ ನಾಮಗೊಂಡ್ಲು ಗ್ರಾಮದಲ್ಲಿ ಕನ್ನಡದ ಬಾವುಟ ಹಾರಿಸುವ ಮೂಲಕ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಪಡೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಸಿ ರಮೇಶ್ ರವರು ಕನ್ನಡದ ಬಾವುಟವನ್ನು ಧ್ವಜಾರೋಹಣ ನೆರವೇರಿಸಿ ಕನ್ನಡದ ಮನಸ್ಸಿನ ಸಹೃದಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತ ನಮ್ಮ ಚೆಲುವ ಕನ್ನಡ ನಾಡು ನುಡಿಯ ಹೆಮ್ಮೆಯ ಹಬ್ಬ ಕನ್ನಡ ರಾಜ್ಯೋತ್ಸವ “ಮಾತೃಭಾಷೆಯ ಜ್ಞಾನ ಇಲ್ಲದವರು ಬದುಕಿ ಉಳಿದಾರೆಯೇ? ನುಡಿಯಿಲ್ಲದ ನಾಡು ಕುರುಡು, ನುಡಿಯೇ ನಾಡಿನ ನಾಡಿ*” ಇಂತಹ ಕಸ್ತೂರಿ ಕನ್ನಡವು ಮಾತನಾಡುವುದನ್ನೇ ಬರೆಯುವ, ಬರೆಯುವುದನ್ನೇ ಓದುವ ಭಾಷೆ ಎಂದರೆ ಕನ್ನಡ ಮಾತ್ರವೇ ಕನ್ನಡ ಭಾರತೀಯ ಸಾಹಿತ್ಯದ ಭಾಷೆಯಲ್ಲಿ ಒಂದಾಗಿ ಸಮೃದ್ಧತೆ, ಪ್ರಬುದ್ಧತೆ ಮತ್ತು ವೈವಿಧ್ಯತೆಗಳಿಂದ ಬಹು ಉನ್ನತವಾದ ಸ್ಥಾನವನ್ನು ಹೊಂದಿದೆ.

ಕರ್ನಾಟಕ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬೀಡು. ಕನ್ನಡನಾಡು ಸರ್ವ ಜನಾಂಗದ ಶಾಂತಿಯ ತೋಟ. ಪರಂಪರೆಯನ್ನು ಗೌರವಿಸುವ, ಆಧುನಿಕತೆಯನ್ನು ಸ್ವೀಕರಿಸುವ ಹೆಮ್ಮೆಯ ನಾಡು. ಕವಿಗಳು ಹೇಳುತ್ತಾರೆ ” ಭೂಮಿ, ಬಾನು ಇರುವ ತನಕ ನಗುತಿರಲಿ ಕನ್ನಡ, ಕನ್ನಡ ಸವಿಗನ್ನಡ ಕರಿಮಣ್ಣಿನ ಕಣಕಣದಲ್ಲೂ ಉಸಿರಾಡಿದೆ ಹಸಿರಿನ ಕನ್ನಡ ಶುಭಗನ್ನಡ ” ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಎಂದು ಹೇಳುತ್ತಾ ನಾಲ್ಕು ಮಾತುಗಳನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಸಿ ರಮೇಶ್. ರಾಜ್ಯ ಉಪಾಧ್ಯಕ್ಷರಾದ ಮುನಿರಾಜ್. ರಾಜ್ಯ ವಕೀಲರ ಘಟಕದ ರಾಜ್ಯ ಅಧ್ಯಕ್ಷರಾದ ಜಗದೀಶ್. ರಾಜ್ಯ ಕೋಳಿ ಸಾಕಾಣಿಕ ರಾಜ್ಯಾಧ್ಯಕ್ಷರಾದ ರಘು. ರಾಜ್ಯ ಕಾರ್ಮಿಕರ ಘಟಕದ ಉಪಾಧ್ಯಕ್ಷರಾದ ಮಂಜುನಾಥ್. ರಾಜ್ಯ ರೈತ ಘಟಕದ ಉಪಾಧ್ಯಕ್ಷರಾದ ಮಂಜುನಾಥ್. ಮಹದೇವಪುರ ಕ್ಷೇತ್ರದ ಛಾಯ ಗ್ರಾಹಕರ ಘಟಕದ ಅಧ್ಯಕ್ಷರಾದ ವೇಣು. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಸುಬ್ರಮಣಿ. ಕೋಲಾರ ಜಿಲ್ಲೆಯ ರಾಜ್ಯ ರೈತ ಘಟಕದ ಕಾರ್ಯದರ್ಶಿ ಭಾರ್ಗವ. ಮನೋಜ್. ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಪಡೆಯ ಕೋಲಾರ. ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ತಾಲೂಕಿನ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago