ಕಲಬುರಗಿ: ಸೇಡಂ ತಾಲೂಕಿನ ಯಾನಾಗುಂದಿಯ ಮಾಣಿಕ್ಯಗಿರಿಯಲ್ಲಿ ನೆಲೆಸಿರುವ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯದಲ್ಲಿ ಸಮಸ್ಯೆ ಇದೆ, ಅಮ್ಮನವರು ದುರ್ಬಲರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಕಲಬುರಗಿಯ ಹೈಕೋರ್ಟ್ ಬೆಂಚ್ ಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಬಿ. ನಿಡಗುಂದ ಮಾತಾ ಮಾಣಿಕೇಶ್ವರಿ ಅಮ್ಮನವರನ್ನು ಟ್ರಸ್ಟಿಗಳು ಕಾನೂನು ಬಾಹಿರವಾಗಿ ಇರಿಸಿದ್ದಾರೆ. ಅಮ್ಮನವರನ್ನು ಟ್ರಸ್ಟಿಗಳಿಂದ ಬಿಡುಗಡೆಗೊಳಿಸಿ ಸ್ವತಂತ್ರಗೊಳಿಸಬೇಕು. ಅಮ್ಮನವರು ಮಹಿಳೆಯಾದ್ದರಿಂದ ಅಮ್ಮನವರ ಕುಟುಂಬದ ಯಾರಾದರೂ ಓರ್ವ ಮಹಿಳೆ ಅಥವಾ ಹಳೆಯ ಭಕ್ತೆಯನ್ನು ಅಮ್ಮನವರು ಗುಣಮುಖರಾಗುವವರೆಗೆ ಆರೈಕೆಗೆ ನೇಮಿಸಬೇಕು. ಅಮ್ಮನವರ ದರ್ಶನ ಭಾಗ್ಯ ನಿರಂತರ ಭಕ್ತರಿಗೆ ದೊರೆಯಬೇಕು ಎಂದು ಕೋರಿ ಕಲಬುರಗಿ ಹೈಕೋರ್ಟ ಪೀಠದಲ್ಲಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಆಲಿಸಿದ ಕಲಬುರಗಿ ಹೈಕೋರ್ಟ್ ದ್ವಿಸದಸ್ಯ ಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಶ್ರೀ ಸದ್ಗುರು ರೂಪ ರಹಿತ ಅಹಿಂಸಾ ಯೋಗೇಶ್ವರಿ ವೀರ ಧರ್ಮಜ ಮಾತಾ ಟ್ರಸ್ಟ್ ನ ಸದಸ್ಯರಿಗೆ ನೋಟೀಸ್ ಜಾರಿ ಮಾಡಿತ್ತು. ನಂತರ ಮೇ.೨೭ಕ್ಕೆ ವಿಚಾರಣೆ ನಡೆದಿದ್ದು, ವಿಚಾರಣೆಯಲ್ಲಿ ಜೂ.೬ ರ ಒಳಗಾಗಿ ಜಿಲ್ಲಾಧಿಕಾರಿ, ಎಸ್ಪಿ ಮತ್ತು ನುರಿತ ಸಿವಿಲ್ ಸರ್ಜನ್ ರ ತಂಡ ರಚಿಸಿ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯ ಸ್ಥಿತಿಗತಿ, ಅವರ ಸುರಕ್ಷತೆ, ಅವರಿಗೆ ನೀಡಿದ ಸೌಲಭ್ಯಗಳ ಬಗ್ಗೆ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿತ್ತು.
ಅದರಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಎಸ್ಪಿ ಎಡಾ ಮಾರ್ಟಿನ ಮಾರ್ಬನ್ಯಾಂಗ್, ತಾಲೂಕು ವೈದ್ಯಾಧಿಕಾರಿ, ತಹಸೀಲ್ದಾರ, ನುರಿತ ಮಹಿಳಾ ವೈದ್ಯರ ತಂಡ ಮೇ.೩೧ ರಂದು ಮಾತಾ ಮಾಣಿಕೇಶ್ವರಿ ನೆಲೆಸಿರುವ ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟಕ್ಕೆ ತೆರಳಿ ೨ ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಅಲ್ಲಿನ ಸ್ಥಿತಿಗತಿ, ಅಮ್ಮನವರ ಆರೋಗ್ಯ, ಅಮ್ಮನವರಿಗೆ ನೀಡಿದ ಸೌಲಭ್ಯಗಳ ಕುರಿತು ವರದಿ ತಯ್ಯಾರಿಸಿ, ಹೈಕೋರ್ಟ ಪೀಠಕ್ಕೆ ಸಲ್ಲಿಸಿತ್ತು. ಅದರಂತೆ ಜೂ.೬ ರಂದು ವರದಿ ಪಡೆದ ಹೈಕೋರ್ಟ ಮುಂದಿನ ವಿಚಾರಣೆಯನ್ನು ಜೂ.೧೧ಕ್ಕೆ ಮುಂದೂಡಿದೆ.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಸಲ್ಲಿಸಿದ ವರದಿ:
ಜಿಲ್ಲಾ ಆರೋಗ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಅಮ್ಮನವರ ಆರೋಗ್ಯದ ಕುರಿತು ಸಲ್ಲಿಸಿದ ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ. ಮಹಿಳಾ ವೈದ್ಯರ ತಂಡ ಅಮ್ಮನವರ ದೈಹಿಕ ಸ್ಥಿತಿಗತಿ ಕುರಿತು ಪರಿಶೀಲಿಸಲು ಹೋದಾಗ ಅಲ್ಲೆ ಇದ್ದ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ ಅಮ್ಮನವರನ್ನು ಮುಟ್ಟಬಾರದು ಎಂದು ಅಡ್ಡಿಪಡಿಸಿದ್ದರು. ಆದರೆ, ಅಮ್ಮನವರು ವೈದ್ಯರ ಪ್ರಶ್ನೆಗೆ ತಡವಾಗಿ ಉತ್ತರಿಸಿದ್ದಾರೆ. ಅಮ್ಮನವರ ಬಲ ತೊಡೆಯ ಮೇಲೆ ಮಾಯ್ದ ಗಾಯದ ಗುರುತು ಇದೆ. ಅಮ್ಮನವರ ಎಡೆಗಾಲು ತುಂಬಾ ನೋವಿನಿಂದ ಕೂಡಿದೆ. ಅಮ್ಮನವರು ಹಾಸಿಗೆ ಹಿಡಿದಿದ್ದಾರೆ. ಅಮ್ಮನವರು ಒಂದಿಂಚೂ ಸಹ ಕದಲಲು ಸಾಧ್ಯವಿಲ್ಲ. ಅಮ್ಮನವರು ದೈಹಿಕವಾಗಿ ದುರ್ಬಲರಾಗಿದ್ದಾರೆ. ಈ ಮೂಲಕ ಅಮ್ಮನವರ ಆರೋಗ್ಯ ಸಂಪೂರ್ಣ ಹದಗೆಟ್ಟಿರುವುದು ತಿಳಿಯಬಹುದು. ಅಲ್ಲದೆ ಟ್ರಸ್ಟ್ನವರು ಅಮ್ಮನವರ ದೈಹಿಕ ಆರೋಗ್ಯ ತಪಾಸಣೆಗೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿದ್ದರು.
ಅಮ್ಮನವರಿಗೆ ಬೆಡಸೋಸ್ ಡಿಸೀಸ್ (ಬೆನ್ನಿನ ಭಾಗದಲ್ಲಿ ಹಾಸಿಗೆ ಮೂಲ ರೋಗ) ಇದೆ. ಇದು ಅಪಾಯಕಾರಿಯಾಗಿದ್ದು, ಈ ಕುರಿತು ಟ್ರಸ್ಟ್ ನವರು ಮಾಹಿತಿ ನೀಡುತ್ತಿಲ್ಲ. ಅಮ್ಮನವರಿಗೆ ಬೆಡಸೋಸ್ ಚಿಕಿತ್ಸೆಯನ್ನೂ ಹೈದ್ರಾಬಾದನ ವೈದ್ಯರು ಬಂದು ನೀಡಿದ್ದಾರೆ. ಆದರೆ ಇಲ್ಲಿ ಗಮನಿಸುವ ವಿಷಯ ಎಂದರೆ ಹೈದ್ರಾಬಾದನ ವೈದ್ಯರು ಬಂದು ಅಮ್ಮನವರಿಗೆ ಚಿಕಿತ್ಸೆ ನೀಡಬಹುದು ಆದರೆ ಸರ್ಕಾರಿ ವೈದ್ಯರು (ಕೋರ್ಟ ಆದೇಶದ ಮೇರೆಗೆ) ಬಂದಾಗ ಟ್ರಸ್ಟ ನವರು ವಿರೋಧಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಹೈದ್ರಾಬಾದ ವೈದ್ಯರು ಚಿಕಿತ್ಸೆ ನೀಡಿದ ದಾಖಲೆ ಶೀಘ್ರವೆ ಬಿಡುಗಡೆಗೊಳಿಸುತ್ತೇವೆ ಎಂದಿದ್ದಾರೆ.
ಶಿವಕುಮಾರ ನಿಡಗುಂದಾ ಕೋರ್ಟ ಮೆಟ್ಟಿಲೇರಿದ ಮೇಲೆ ಅಮ್ಮನವರ ಆರೋಗ್ಯ ನೋಡಿಕೊಳ್ಳಲು ಮಹಿಳೆಯನ್ನು ಟ್ರಸ್ಟ್ ನೇಮಿಸಿತ್ತು, ಇದಕ್ಕೂ ಮುಂಚೆ (ಅಂದರೆ ಹಲವು ವರ್ಷಗಳಿಂದ) ಪುರುಷನಾದ ಶಿವಯ್ಯಸ್ವಾಮಿಯೇ ನೋಡಿಕೊಳ್ಳುತ್ತಿದ್ದ. ) ಈಗ ಅಮ್ಮನವರ ದರ್ಶನವೂ ಭಕ್ತರಿಗೆ ಕಲ್ಪಿಸಲಾಗಿದೆ ಎಂದು ಟ್ರಸ್ಟನವರು ಹೇಳುತ್ತಿದ್ದಾರೆ ಆದರೆ ಯಾವುದೇ ಸಾರ್ವಜನಿಕ ಪ್ರಕಟಣೆಯಿಲ್ಲ.
ಕೋರ್ಟನಲ್ಲಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಸೂಚಿಸಿದಂತೆ ಈಗಲೂ ಸಹ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ ಅಮ್ಮನವರಿಗೆ ಹೊರಗಿನ ಆಗು ಹೋಗುಗಳ ಕುರಿತು ಖಚಿತ ಮಾಹಿತಿ ನೀಡದೆ, ಸುಳ್ಳು ಪೊಳ್ಳು ಹೇಳಿ ಅಮ್ಮನವರನ್ನು ದಾರಿ ತಪ್ಪಿಸುವ ಹುನ್ನಾರಕ್ಕೆ ಕೈ ಹಾಕಿದ್ದಾನೆ. ಮತ್ತೆ ಅಮ್ಮನವರಿಂದ ತನ್ನ ಪರವಾಗಿ ಹೇಳಿಸುವ ಕುತಂತ್ರ ನಡೆಸಿದ್ದಾನೆ.
ಈ ಬಾರಿಯೂ ಸಹ ಕೋರ್ಟ ನಮ್ಮ ಪರವಾಗಿ ತೀರ್ಪು ನೀಡಿದ್ದು, ಟ್ರಸ್ಟ್ ನವರ ಹುನ್ನಾರ ಹೊರ ಬೀಳುವ ಸಾಧ್ಯತೆ ಇದೆ. ಜೂ.11 ರಂದು ನಡೆಯುವ ವಿಚಾರಣೆಯಲ್ಲಿ ಅನೇಕ ಸತ್ಯ ವಿಷಯಗಳನ್ನು ಮುಂದಿಡಲಿದ್ದೇವೆಎಂದಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…