ಬಿಸಿ ಬಿಸಿ ಸುದ್ದಿ

ಬ್ಲಾಕ್ ಚೇನ್ ಟೆಕ್ನಾಲಜಿ ಕುರಿತು ಐದು ದಿನಗಳ ಉಪನ್ಯಾಸ

ಕಲಬುರಗಿ: ಪ್ರಸ್ತುತ ದಿನಗಳಲ್ಲಿ ಬ್ಲಾಕ್ ಚೈನ್ ಟೆಕ್ನಾಲಜಿಯನ್ನು ಬಳಸಿಕೊಂಡು ಪ್ರತಿಯೊಬ್ಬರು ಬ್ಯಾಂಕಿನ ಸೇವೆ ಉಪಯೋಗಿಸದೆಯೇ ತಮ್ಮ ಹಣವನ್ನು ಇನ್ನೊಬ್ಬರಿಗೆ ವರ್ಗಾಯಿಸಿಕೊಳ್ಳುವುದು ಹಾಗೂ ಜಮೆ ಮಾಡಿಕೊಳ್ಳುವಂತಹ ಕಾರ್ಯಗಳನ್ನು ಸುಲಲಿತವಾಗಿ ಇಂಟರನೆಟ್ ಮೂಲಕ ಮಾಡಬಹುದಾಗಿದೆ. ಸದ್ಯ ಬ್ಲಾಕ್ ಚೆನ್ ಟೆಕ್ನಾಲಜಿ ತನ್ನ ಕಾರ್ಯ ಪ್ರಾರಂಭಿಸಿದ್ದು ಬಹುತೇಕ ಕ್ಷೇತ್ರದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಲಾಗುತ್ತಿದೆ. ಇಂದಿನ ಶೈಕ್ಷಣಿಕ ಅಭ್ಯಾಸ ಕ್ರಮದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಕೊಂಡು ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ಕಾರ್ಯನಿರ್ವಹಿಸುವ ಗುಣಮಟ್ಟ ಕೊಡಬೇಕಾಗಿದೆ ಎಂದು ವಿಶ್ವ ಸಣ್ಣ ಮತ್ತು ಮಾದ್ಯಮ ಶೇಣಿ ಕೈಗಾರಿಕೆ ನವದೇಹಲಿಯ ಪ್ರಮುಖ ಕಾರ್ಯದರ್ಶಿಗಳಾದ ಡಾ, ಸಂಜೀವ ಲಹೇಕ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ಇಲ್ಲಿನ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ನಡೆಯುವ ಎಐಸಿಟಿ ಅಟಲ್ ಪಠ್ಯ ಮತ್ತು ಕಲಿಕಾ ಅಕಾಡೆಮಿ ಪ್ರಾಯೋಜಿಸಿದ ಐದು ದಿನಗಳ ಆನ್ ಲೈನ್ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಎಐಸಿಟಿ ಅಟಲ್ ಪಠ್ಯ ಮತ್ತು ಕಲಿಕಾ ಅಕಾಡೆಮಿಯು ದೇಶಾದ್ಯಂತ ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕರಿಗೆ ಉನ್ನತ ಮಟ್ಟದ ಹಾಗೂ ಪ್ರಸ್ತುತ ಜಗತ್ತಿನ ತಂತ್ರಜ್ಞಾನದ ತಿಳುವಳಿಕೆಯನ್ನು ನೀಡುವ ಗುರಿಯನ್ನಿಟ್ಟುಕೊಂಡು ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ, ಇದರಡಿಯಲಿ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಅನುಮತಿ ದೊರೆತ್ತಿದ್ದು ಇಂಜಿನಿಯರಿಂಗ್ ಕಾಲೇಜಿನ ಶಿಕ್ಷರಿಗಾಗಿ ಬ್ಲಾಕ ಚೈನ್ ಟೆಕ್ನಾಲಜಿಯ ಬಗ್ಗೆ ಐದು ದಿನಗಳ ಉಪನ್ಯಾಸ ಮಾಲಿಕೆಗೆ ಚಾಲನೆ ನೀಡಲಾಯಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿ ಅವರು ಮಾತನಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ತಮ್ಮ ಸಂಸ್ಥೆ ಶ್ರಮಹಿಸುವುದು ಹಾಗೂ ಅದಕ್ಕೆ ಬೇಕಾಗುವ ಎಲ್ಲಾ ರೀತಿಯ ಅನೂಕೂಲತೆಗಳನ್ನು ಕಲ್ಪಿಸಲಾಗುವದು ಎಂದು ಹೇಳಿದರು.

ಈ ಉಪನ್ಯಾಸ ಮಾಲಿಕೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು ೧೨೦ ಶಿಕ್ಷಕರು ಭಾಗವಹಿಸಿದ್ದು ಉನ್ನತ ವಿಶ್ವವಿದ್ಯಾಲಯ, ಐಐಟಿ ಮತ್ತು ಎನ್‌ಐಟಿಯ ೧೩ ಸಂಪನ್ಮೂಲ ವ್ಯಕ್ತಿಗಳು ಬ್ಲಾಕ ಚೈನ್ ಟೆಕ್ನಾಲಜಿ ಕುರಿತು ಉಪನ್ಯಾಸ ನೀಡುವರು.

ಕಾರ್ಯಕ್ರಮದ ಅತಿಥಿ ಹಾಗೂ ಎಐಸಿಟಿ ಚೇರಮನ್ ಮತ್ತು ಅಟಲ ಸಿಬ್ಬಂಧಿ ಹಾಗೂ ಭಾಗವಹಿಸಿದ ಶಿಕ್ಷರಿಗೆ ಸ್ವಾಗತಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಬ್ಬಾಳ ಅವರು ಮಾತನಾಡುತ್ತ ಪಿ.ಡಿ.ಎ. ಕಾಲೇಜಿನ ಇನ್ನೂ ಹಲವಾರು ವಿಭಾಗಗಳಿಗೆ ಇದೇ ರೀತಿಯ ಉಪನ್ಯಾಸ ಮಾಲಿಕೆಗೆ ಅನುಮತಿ ದೊರೆತಿದೆ ಎಂದು ಹೇಳಿದ ಅವರು ಅಟಲ್ ರ‍್ಯಾಂಕಿಂಗ್ ನಲ್ಲಿ ಕಾಲೇಜು ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿರುವುದನ್ನು ಸ್ಮರಿಸಿಕೊಂಡರು. ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಸಕ್ರೀಯವಾಗಿ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಪ್ರಸ್ತುತ ಜಗತ್ತಿನ ತಂತ್ರಜ್ಞಾನ ನೀಡುತ್ತಿದೆ ಎಂದು ಹೇಳಿದರು.

ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಮತ್ತು ಉಪನ್ಯಾನ ಮಾಲಿಕೆಯ ಸಂಯೋಜಕಿಯಾದ ಡಾ. ಭಾರತಿ ಹರಸೂರ ಅವರು ಮಾತನಾಡುತ್ತ ಎಐಸಿಟಿ ಅಟಲ್ ಪಠ್ಯ ಮತ್ತು ಕಲಿಕಾ ಅಕಾಡೆಮಿಯ ಗುರಿಯನ್ನು ತಿಳಿಸುತ್ತಾ ಮುಂಬರುವ ದಿನಗಳಲ್ಲಿ ಇನ್ನೂ ಸಾಕಷ್ಟು ಕಾರ್ಯಕ್ರಮವನ್ನು ನಡೆಯಿಸುವುದಾಗಿ ಹೇಳಿದರು. ಕಾರ್ಯಕ್ರಮದ ಸಂಚಾಲಕರಾದ ಶ್ರೀ ಅಶೋಕ ಪಾಟೀಲ, ಬ್ಲಾಕ್ ಚೈನ ಟೆಕ್ನಾಲಜಿಯ ಕುರಿತು ಸಮಗ್ರ ಮಾಹಿತಿ ನೀಡಿದರು. ಮತ್ತೋರ್ವ ಸಂಚಾಲಕರಾದ ಡಾ. ನಾಗೇಶ ಸಾಲಿಮಠ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ವಿಭಾಗದ ಪ್ರೊ. ರಶ್ಮೀ ತಳ್ಳಳ್ಳಿ ಮತ್ತು ಎಸ್. ಸುಮಾ ಅವರು ನಿರೂಪಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್.ಹೆಬ್ಬಾಳ ಅವರು ಈ ವಿಚಾರ ಸಂಕಿರಣದ ಜನರಲ್ ಚೇರ್ ಅಗಿದ್ದು, ಡಾ.ಭಾರತಿ ಹರಸೂರು, ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರು ಇವರು ಸಂಯೋಜಕರಾಗಿ ಹಾಗೂ ಅದೇ ವಿಭಾಗದ ಶ್ರೀ. ಅಶೋಕ ಪಾಟೀಲ ಹಾಗೂ ಡಾ. ನಾಗೇಶ ಸಾಲಿಮಠ ಅವರು ಕಾರ್ಯಾಗಾರದ ಸಂಚಾಲಕರಾಗಿ ತಮ್ಮ ಕಾರ್ಯ ನಿರ್ವಹಿಸಿದರು.

ಉಪ-ಪ್ರಾಚಾರ್ಯರಾದ ಡಾ. ಎಸ್. ಎಸ್. ಕಲಶೇಟ್ಟಿ, ಡೀನ ಅಕಾಡೆಮಿಕ ಡಾ. ಎಸ್. ಆರ್. ಪಾಟೀಲ, ಟೆಕ್ವಿಪ್ ಸಂಚಾಲಯಕರಾದ ಪ್ರೊ. ಶರಣ ಪಡಶೆಟ್ಟಿ, ಹೆಚ್ಚುವರಿ ಡೀನ ಡಾ. ಎಸ್. ಆರ್. ಹೊಟ್ಟಿ, ವಿಭಾಗದ ಪ್ರಾಧ್ಯಪಕರು ಹಾಗೂ ಹೆಚ್ಚುವರಿ ಡೀನ್ ರಾದ ಡಾ. ವಿಶ್ವನಾಥ ಬುರಕಪಳ್ಳಿ, ಪ್ರೊ, ಉದಯ ಬಳಗಾರ ಸಲಹೇಗಾರರಾಗಿ ತಮ್ಮ ಕಾರ್ಯನಿರ್ವಹಿಸಿದರು,

ವಿಭಾಗದ ಚಂದ್ರಕಾಂತ ಬೀರಾದಾರ, ನಿತಿನ ಕಟ್ಟಿಶೆಟ್ಟರ, ಗೌರಿ ಪಾಟೀಲ, ಶರಣು ಹುಲಿ, ಗುರಪ್ಪ ಕಲ್ಯಾಣಿ, ರಶ್ಮೀ ತಳ್ಳಳಿ, ಅರ್ಚನಾ ಪಾಟೀಲ, ಸುಮಾ, ಮಲ್ಲಿಕಾರ್ಜುನ ರೆಡ್ಡಿ, ಅಂಬಾರಾಯ, ಗಂಗಾ ಧಾರಕ ಗೀತಾ ಕವಿತಾ ಮತ್ತು ಸುವರ್ಣಾ ಎಮ್.ಐ. ಅವರು ಕಾರ್ಯಾಗಾರದ ಸಂಘಟಕರಾಗಿ ಕಾರ್ಯನಿರ್ವಹಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

50 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago