ಬೆಂಗಳೂರು: ಯೋಜನೆ ಕಾರ್ಯಾರಂಭ ಮಾಡಿ ಅದನ್ನು ಕಾಲಾವಧಿಯೊಳಗೆ ಮುಗಿಸದೇ ಪ್ರತಿ ವರ್ಷ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿಕೊಂಡು, ಜನರ ತೆರಿಗೆ ಹಣ ನುಂಗುವುದನ್ನೇ ಅಭ್ಯಾಸ ಮಾಡಿಕೊಂಡಿರುವುದಕ್ಕೆ ತಾಜಾ ಉದಾಹರಣೆ ಎಂದರೆ ಶಿವಾನಂದ ವೃತ್ತದ ಬಳಿ ನಿರ್ಮಿಸಲು ಹೊರಟಿರುವ ಉಕ್ಕಿನ ಸೇತುವೆ ಎಂದು ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ವ್ಯಂಗ್ಯವಾಡಿದರು.
ನಗರದ ಶಿವಾನಂದ ವೃತ್ತದ ಉಕ್ಕಿನ ಸೇತುವೆ ಬಳಿ ಆಮ್ ಆದ್ಮಿ ಪಕ್ಷದಿಂದ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಸುಮಾರು 3 ವರ್ಷಗಳ ಹಿಂದೆ ಅಂದರೆ
ಜೂನ್ 30, 2017 ರಂದು ಕಾರ್ಯಾದೇಶವಾಗಿನಿಂದ ಕೇವಲ ಶೇ 40 ರಷ್ಟು ಕಾಮಗಾರಿ ಪೂರ್ಣಗೊಂಡಿರುವುದನ್ನು ನೋಡಿದರೆ ಬಿಬಿಎಂಪಿಯ ಆಡಳಿತ ವೈಖರಿಗೆ ಕನ್ನಡಿಯಾಗಿದೆ.
ಈ ಕಾಮಗಾರಿಯ ಅವಧಿ 18 ತಿಂಗಳು ಅಂದರೆ 2019ರ ಮಾರ್ಚ್ ಅಂತ್ಯಕ್ಕೆ ಮುಗಿಸಬೇಕಿತ್ತು, ಈಗಾಗಲೇ ಬರೋಬ್ಬರಿ 27 ತಿಂಗಳುಗಳು ಕಳೆದಿವೆ. 2020 ಮುಗಿಯುತ್ತಾ ಬಂದರೂ ಅದರ ಸುಳಿವಿಲ್ಲ. ಈ ಉಕ್ಕಿನ ಸೇತುವೆಯನ್ನು ಪ್ರಾರಂಭಿಸುವಾಗ ಅಂದಾಜು ಮಾಡಿದ್ದ ಯೋಜನಾ ವೆಚ್ಚ 19 ಕೋಟಿ. ಈಗಾಗಲೇ ಎರಡು ಬಾರಿ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿದ್ದು 60 ಕೋಟಿಗೆ ಮುಟ್ಟಿದೆ. ಇದೇ ರೀತಿ ಎಲ್ಲಾ ಕಾಮಗಾರಿಗಳನ್ನು ಕಾಲಾವಧಿಯಲ್ಲಿ ಮುಗಿಸದೆ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಈಗ ಇಲ್ಲಿ ಕಾಮಗಾರಿ ಆರಂಭಿಸಿದರೆ ಹಿಂದೆಂದೂ ಕಾಣದಷ್ಟು ಸಂಚಾರ ದಟ್ಟಣೆ ಉಂಟಾಗುತ್ತದೆ.ಶಿವಾನಂದ ಸರ್ಕಲ್ ಮಾತ್ರವಲ್ಲದೆ ಸುತ್ತಲಿನ ಮಲ್ಲೇಶ್ವರ, ಆನಂದರಾವ್ ವೃತ್ತ ಹಾಗೂ ಇನ್ನಿತರೆ ಕಡೆಗಳಲ್ಲೂ ಸಂಚಾರ ದಟ್ಟಣೆ ವಿಪರೀತವಾಗಲಿದೆ.
Mohan Dasari – President, Suresh Rathod – Vice President and Laxmikanth Roa – Political Advisor were present at the protest
ಮೊದಲು ಮೇಲ್ಸೇತುವೆ ಉದ್ದವನ್ನು 326 ಮೀ.ಗೆ ನಿಗದಿ ಮಾಡಲಾಗಿತ್ತು. ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷದ ನಂತರ ರೇಸ್ಕೋರ್ಸ್ ರಸ್ತೆ ದಿಕ್ಕಿಗೆ ಮೇಲ್ಸೇತುವೆ ಉದ್ದವನ್ನು 493 ಮೀ.ಗೆ ಏರಿಕೆ ಮಾಡಲಾಗಿದೆ ಎಂಬುದು ಏಕೆ ಎಂದು ಅಧಿಕಾರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಸಂಚಾರ ದಟ್ಟಣೆಯಿಂದ ಕಿರಿಕಿರಿ ಅನುಭವಿಸುತ್ತಿರುವ ಜನರಿಗೆ ಉತ್ತಮ ಸೌಕರ್ಯ ಒದಗಿಸುತ್ತೇವೆ ಎಂದು ಆರಂಭಿಸುವ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮುಂದೂಡಿ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿ, ಹಣ ನುಂಗುವ ಹುನ್ನಾರವಾಗಿದೆ. ಈ ಕೂಡಲೇ ಈ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಮುಗಿದಿರುವ ಕಾಮಗಾರಿಯ ಗುಣಮಟ್ಟ ಸಹ ಕಳಪೆ ಆಗಿದ್ದು ಈಗಾಗಲೇ ಹಾಕಿರುವ ಉಕ್ಕಿನ ಕಂಬಗಳ ಸಾಮರ್ಥ್ಯವೂ ಸಹ ಅನುಮಾನಸ್ಪದವಾಗಿದ್ದು ಅರ್ಧ ಕಾಮಗಾರಿ ಮುಗಿಸಿ ನಿಲ್ಲಿಸಿರುವ ಕಂಬಗಳು ತುಕ್ಕು ಹಿಡಿದಿವೆ.
ದೆಹಲಿ ಸರ್ಕಾರ ಈಗಾಗಲೇ ಸುಮಾರು 25 ಕ್ಕೂ ಹೆಚ್ಚು ಫ್ಲೈಓವರ್ಗಳನ್ನು ಸುಮಾರು 4 ವರ್ಷಗಳ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದೆ, ಇದು ಎಂಜಿನಿಯರಿಂಗ್ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.
ವಿಕಾಸಪುರಿಯಿಂದ ಮೀರಾಭಾಗ್ ಎಲಿವೇಟೆಡ್ ಕಾಮಗಾರಿ ಒಂದು ಕ್ರಾಂತಿಕಾರಕ ಯೋಜನೆ ಎಂದೇ ಕರೆಯಬಹುದು
ಈ ಯೋಜನೆಯ ಒಟ್ಟಾರೆ ಉದ್ದ: 4300, ವೆಚ್ಚ: ರೂ .559.60 ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಿದ್ದ ಯೋಜನೆಗೆ ಖರ್ಚಾಗಿದ್ದು 445 ಕೋಟಿ, ಉಳಿತಾಯ ರೂ 114.60 ಕೋಟಿ
ಈ ಕಾಮಗಾರಿ ಮಂಜೂರಾದ ದಿನಾಂಕ 24.07.2016 ಪೂರ್ಣಗೊಂಡ ದಿನಾಂಕ: 21.07.2017 ಕೇವಲ ಒಂದು ವರ್ಷದ ಅವಧಿಯಲ್ಲಿ ಉದ್ದನೆಯ ಎಲಿವೇಟೆಡ್ ಕಾಮಗಾರಿ ಮುಗಿಸಿರುವುದು ನಿಜಕ್ಕೂ ಹೆಮ್ಮೆಯ ಸಾಧನೆ
ಈ ಮೇಲಿನ ಎರಡು ನಿದರ್ಶನಗಳು ಮಾತ್ರ ನಿಮ್ಮ ಮುಂದೆ ಇರಿಸಲಾಗಿದೆ. ಕಳೆದ 6 ವರ್ಷಗಳಲ್ಲಿ ಇಂತಹ 20 ಕ್ಕೂ ಹೆಚ್ಚು ಯಶಸ್ವಿ ಕಾಮಗಾರಿಗಳನ್ನು ಮುಗಿಸಿದ ನಿದರ್ಶನವಿದೆ.
ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸದಿದ್ದರೆ ಎಲ್ಲಾ ಅಪೂರ್ಣ ಕಾಮಗಾರಿಗಳ ಎದುರು ಸರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…