ಕಲಬುರಗಿ: ಸಾಧಕರ ಶ್ರದ್ಧೆಘಿ, ಶ್ರಮ, ತ್ಯಾಗಗಳನ್ನೊಳಗೊಂಡ `ಮನದಾಳದ ಮಾತು’ ಕೃತಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಸಾಧಕರ ಮನದಾಳದ ಮಾತು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂಥ ಸಾಧಕರ ಮನದಾಳದ ಮಾತು ಜನರಿಗೆ ತಲುಪಿಸುವ ಸಲುವಾಗಿ ಕೃತಿ ಬಿಡುಗಡೆ ಮಾಡಲಾಗಿದೆ. ಯಾವುದೇ ಸಾಧಕ ತಾನು ಅನುಭವಿಸಿದ ಕಷ್ಟಘಿ, ಸಮಾಜ ಅವರಿಗೆ ಕೊಟ್ಟ ಪೆÇ್ರೀತ್ಸಾಹ ಎಲ್ಲವನ್ನು ದಾಖಲಿಸಿ, ಕೃತಿಯಾಗಿ ಬಿಡುಗಡೆ ಮಾಡಲಾಗಿದೆ. ಇದರ ಅವಶ್ಯಕತೆ ಮುಂದಿನ ಪೀಳಿಗೆಗೆ ತಿಳಿಸಲು, ಅವರಿಗೆ ಪ್ರೇರಣೆ ದೊರೆಯುವ ಕಾರಣಕ್ಕಾಗಿಯೇ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.
ಸಮಾಜದಲ್ಲಿ ಕಷ್ಟಪಟ್ಟು ಸಾಧನೆ ಮಾಡಿದರೆ ಜನರು ಅದಕ್ಕೆ ಮನ್ನಣೆ ಕೊಡುತ್ತಾರೆ. ಇಂದಿನ ಯುವಕರು ವೈಭವೀಕರಣ, ಪಾಶ್ಚ್ಯಾತೀಕರಣದತ್ತ ಯುವಕರ ಚಿತ್ತವಿದೆ. ಇವರು ಪ್ರಭಾವಗೊಂಡು ಸರಿಯಾಗಿಲ್ಲ ಎಂಬ ಭಾವನೆ ಎಲ್ಲರಲ್ಲೂ ಇದೆ. ಸಾಧಕರು ಪಟ್ಟ ಕಷ್ಟ, ಸಾಧನೆಯ ಪರಿಶ್ರಮದ ಬಗ್ಗೆ ಯುವಕರಿಗೆ ಪರಿಚಯಿಸಿದರೆ ಅವರೂ ಸರಿ ದಾರಿಯಲ್ಲಿ ಬರಬಹುದು. ಅವರು ತಮ್ಮ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಭಾವನೆ ಮೂಡಿ ಪ್ರೇರಣೆ ಸಿಗಬೇಕು ಎಂಬುದು ತನ್ನ ಭಾವನೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, 25 ಸಾಧಕರಲ್ಲಿ ನಾಲ್ವರು ನಮ್ಮನಗಲಿದ್ದಾರೆ. ಆದರೆ, ಅವರು ಇರದಿದ್ದರೂ ಅವರ ಸಾಧನೆ ಮರೆಯುವಂತಿಲ್ಲಘಿ. ರಾಜ್ಯದಲ್ಲಿ ಈ ಕೃತಿ ಮಾದರಿಯಾಗಲಿದೆ ಎಂದು ಹೇಳಿದರು. ನಮ್ಮಲ್ಲಿ ಸಾಧಕರು ಅನೇಕರಿದ್ದಾರೆ. ಅವರಲ್ಲಿ ಕೆಲವರನ್ನು ನಾವು ಮನದಾಳದ ಮಾತಿಗೆ ಕರೆ ತಂದಿz್ದÉೀವೆ. ಇದೇರೀತಿ ಎಲ್ಲ ಕಡೆ ಸಾಧಕರಿದ್ದಾರೆ. ಆದರೆ, ಅವರ ಬಗ್ಗೆ ದಾಖಲೆ, ಕೃತಿಗಳು ಹೆಚ್ಚು ಪ್ರಕಟವಾಗಿಲ್ಲಘಿ. ಅಂಥದರಲ್ಲಿ ಎಷ್ಟು ಸಾಧ್ಯವೋ ಅಷ್ಟು ಗುರುತಿಸುವ ಕಾರ್ಯ ಈ ಕೃತಿ ಮೂಲಕ ಮಾಡಿz್ದÉೀನೆ ಕೃತಿ ಹೊರಬರಲು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿನ ಕನ್ನಡ ಸಾಹಿತ್ಯ ಪರಿಷತ್‍ಗೆ 2 ಕೋಟಿ ರೂ. ಕೊಡಿಸಿದ್ದಾರೆ. ಆದರೆ, ಈಗಿನ ಕಲಬುರಗಿ ಉಸ್ತುವಾರಿ ಸಚಿವರು ಕಸಾಪಗೆ ಒಂದು ರೂಪಾಯಿಯೂ ನೀಡಿಲ್ಲಘಿ. ನಮ್ಮ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿದ್ದರೆ ಕಾಡಿಬೇಡಿ ಅವರಲ್ಲಿ ಹಣ ತರಬೇಕಿತ್ತು. ಆದರೆ, ಈಗ ಯಾರಿಗೆ ಕಾಡಿಬೇಡಬೇಕು ಎಂಬ ಅನಾಥಭಾವ ಕಾಡುತ್ತಿದೆ ಎಂದರು.
ಹಾರಕೂಡದ-ಚಿಂಚೋಳಿಯ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಡಾ.ಚನ್ನವೀರ ಶಿವಾಚಾರ್ಯರು `ಸಾಧಕರ ಮನದಾಳದ ಮಾತು’ ಕೃತಿ ಬಿಡುಗಡೆ ಮಾಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಕಲ್ಯಾಣರಾವ್ ಪಾಟೀಲ್ ಕೃತಿ ಪರಿಚಯ ಮಾಡಿದರು. 25 ಸಾಧಕರನ್ನು ಸನ್ಮಾನಿಸಲಾಯಿತು.
ಶರಣಬಸವೇಶ್ವರ ಸಂಸ್ಥಾನದ ಬಸವರಾಜ ದೇಶಮುಖ, ಕಸಾಪ ಗೌರವ ಕೋಶಾಧ್ಯಕ್ಷ ದೌಲತರಾಯ ಮಾಲಿ ಪಾಟೀಲ್, ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿಘಿ, ಡಾ.ವಿಜಯಕುಮಾರ ಪರುತೆ, ಬಿ.ಕೆ.ಹಿರೇಮಠ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು, ಸಾಧಕರ ಬಂಧುಗಳು ಇತರರಿದ್ದರು. ತನ್ಮಯ್, ಸ್ನೇಹಾ, ನೇಹಾ ಪ್ರಾರ್ಥಿಸಿದರು. ಡಾ.ವಿಜಯಕುಮಾರ ಪರುತೆ ಸ್ವಾಗತಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…