ಕಲಬುರಗಿ: ಜೇವರ್ಗಿ ತಾಲೂಕಿನ ಯಡ್ರಾಮಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದಕ್ಕೆ ಜೇವರ್ಗಿ ಕ್ಷೇತ್ರದ ಶಾಸಕರೂ ಆಗಿರುವ ವಿಧಾನ ಸಭೆಯ ಪ್ರತಿಪಕ್ಷ ಕಾಂಗ್ರೆಸ್ಸಿನ ಮುಖ್ಯ ಸಚೇತಕ ಡಾ. ಅಜಯಸಿಂಗ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಯಡ್ರಾಮಿಯನ್ನು ಹೊಸ ತಾಲೂಕವನ್ನಾಗಿ ಮಾಡಿದ ನಂತರ ಅದಕ್ಕೆ ಗ್ರಾಮ ಪಂಚಾಯತಿ ಬದಲು ಪಟ್ಟಣ ಪಂಚಾಯತಿಯ ಸ್ಥಾನಮಾನ ನೀಡಬೇಕೆಂಬುದು ಅಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ತಾವು ಸಂಬಂಧಪಟ್ಟ ಸಚಿವರನ್ನು ಭೆಟ್ಟಿಯಾಗಿ ಯಡ್ರಾಮಿ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಸಲ್ಲಿಸಿದ್ದೆ. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಇದೀಗ ಆದೇಶ ಹೊರಡಿಸಿದೆ. ಇದರಿಂದಾಗಿ ಯಡ್ರಾಮಿಗೆ ಹೆಚ್ಚಿನ ಅನುದಾನ ಬಂದು ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದು ಡಾ. ಅಜಯಸಿಂಗ್ ಹೇಳಿದ್ದಾರೆ.
ಯಡ್ರಾಮಿ ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿದ ನಂತರ ಒಟ್ಟಾರೆ ಪರಿಗಣಿಸಲ್ಪಡುವ ಪ್ರದೇಶ ೧೧.೩೫ ಚ.ಕಿ.ಮೀಟರ್. ಪೂರ್ವಕ್ಕೆ ಯಡ್ರಾಮಿ ಗ್ರಾಮವು ಜೇವಗಿ ಮತ್ತು ಚಿಗರಹಳ್ಳಿ ಮುಖ್ಯ ರಸ್ತೆ ಮೇಲೆ ನಿರ್ಮಾಣವಾಗಿದ್ದು, ಸರ್ವೆ ನಂ. ೨೫೯ ರಿಂದ ಪ್ರಾರಂಭಗೊಂಡಿದ್ದು, ದಕ್ಷಿಣಾಭಿಮುಖವಾಗಿ ಸರ್ವೆ ನಂ. ೪೪೨/೧ ಅಖಂಡಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯನ್ನೊಳಗೊಂಡು ಸರ್ವೆ ನಂ. ೪೪೨/೧ರವರೆಗೆ ಮತ್ತು ಸ.ನಂ. ಗಳಾದ ೪೪೭, ೪೪೧,೪೪೦ ಕೂಡ ಒಳಗೊಂಡಿರುತ್ತವೆ ಎಂದು ಡಾ. ಅಜಯಸಿಂಗ್ ವಿವರಿಸಿದ್ದಾರೆ.
ಅದೇ ರೀತಿ ಪಶ್ಚಿಮಕ್ಕೆ ಸ.ನಂ. ೨೨, ೧೪,೧೫ ಇರುತ್ತವೆ. ಕಡಕೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯತ್ನಾಳ ಗ್ರಾಮಕ್ಕೆ ಹೋಗುವ ರಸ್ತೆಯಿದೆ. ಅದೇ ರೀತಿ ಕಡೊಕೋಳ ಗ್ರಾಮಕ್ಕೆ ಹೋಗುವ ರಸ್ತೆಗೆ ಸ.ನಂ.೧೦,೨೩೩ಕ್ಕೆ ಅಂತ್ಯಗೊಂಡಿದೆ. ಉತ್ತರಕ್ಕೆ ಗೌಂಠಾಣ ಸ.ನಂ. ೧, ೨, ೩, ೪, ೫ ಇಲ್ಲಿ ಪುರಾತನ ಕಾಲದ ರಾಮತೀರ್ಥ ಕೂಡ ಇದೆ. ಅರಳಗುಂಡಗಿ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ೨೩೭ ರಿಂದ ಸ.ನಂ. ೨೦೭ಕ್ಕೆ ಅಂತ್ಯಕಂಡಿದೆ ಎಂದರು.
ಇದಲ್ಲದೇ ದಕ್ಷಿಣಕ್ಕೆ ಸುಂಬಡ ಗ್ರಾಮ ಪಂಚಾಯತಿಯಲ್ಲಿ ಬರುವ ಸುಂಬಡ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಹೊಂದಿಕೊಂಡಿರುವ ಸ.ನಂ. ೪೨೫, ೪೨೬, ೪೨೭, ೪೨೮, ೪೩೯, ೪೪೨/೧, ೪೩೫, ೪೩೪ ಒಳಗೊಂಡಿರುತ್ತದೆ. ಪೂರ್ವಕ್ಕೆ ಅಭಿಮುಖವಾಗಿ ತಾಂಡಾ ಇರುತ್ತದೆ. ಅದೇ ರೀತಿ ಯು.ಕೆ.ಪಿ. (ಕೃಷ್ಣಾ ಭಾಗ್ಯ ಜಲ ನಿಗಮ)ಕ್ಯಾಂಪ್ ಕೂಡ ಇರುತ್ತದೆ ಎಂದು ಡಾ. ಅಜಯಸಿಂಗ್ ತಿಳಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…