ಸುರಪುರ: ನಗರದ ತಳವಾರಗೇರಾ ಪ್ರಾದೇಶಿಕ ವಲಯ ಅರಣ್ಯ ಪ್ರದೇಶದಲ್ಲಿ ಈ ಹಿಂದೆ ನಿರ್ಮಿಸಲಾದ ಸಾಲುಮರದ ತಿಮ್ಮಕ್ಕ ಮಕ್ಕಳ ಉದ್ಯಾನವನ್ನು ನವೀಕರಣಗೊಳಿಸಿರುವುದನ್ನು ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಹಾಗು ತಾಲೂಕು ಪಂಚಾಯತಿ ಅಧ್ಯಕ್ಷ ಶಾರದಾ ಬಿ.ಬೇವಿನಾಳ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಾಜಾ ಹನಮಪ್ಪ ನಾಯಕ (ತಾತಾ) ಮಾತನಾಡಿ,ಹಿಂದಿನಿಂದಲೂ ನಗರದ ಜನರು ಮಕ್ಕಳಿಗಾಗಿ ಉದ್ಯಾನವನ ಬೇಕೆಂದು ಬೇಡಿಕೆ ಸಲ್ಲಿಸುತ್ತಿದ್ದರು.ಅದರಂತೆ ಕಳೆದ ಕೆಲ ವರ್ಷಗಳ ಹಿಂದೆಯೇ ಟ್ರೀ ಪಾರ್ಕ್ ನಿರ್ಮಾಣಗೊಳಿಸಲಾಗಿತ್ತು,ಅದನ್ನು ಮತ್ತಷ್ಟು ನವೀಕರಣಗೊಳಿಸಿ ಮಕ್ಕಳಿಗೆ ಮನೋರಂಜನೆಗಾಗಿ ಅಭಿವೃಧ್ಧಿಗೊಳಿಸಲಾಗಿದೆ.ಇಲ್ಲಿ ಇನ್ನಷ್ಟು ಅಭೀವೃಧ್ಧಿ ಕೆಲಸಗಳು ಆಗಬೇಕಿದೆ.
ಉದ್ಯಾನವನದ ನಿರ್ವಾಹಕರು ಇಲ್ಲಿ ಇನ್ನೂ ಮಕ್ಕಳಿಗಾಗಿ ಸಂಗೀತ ಕಾರಂಜಿ ನಿರ್ಮಾಣಗೊಳಿಸಬೇಕು,ಇದಕ್ಕಾಗಿ ಬೇಕಾಗುವ ಅನುದಾನದ ವ್ಯವಸ್ಥೆಯನ್ನು ಮಾನ್ಯ ಶಾಸಕರೊಂದಿಗೆ ಮಾತನಾಡಿ ಒದಗಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಅಧ್ಯಕ್ಷ ಶಾರದಾ ಬಿ.ಬೇವಿನಾಳ ಎಪಿಎಮ್‌ಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಅರಣ್ಯಾಧಿಕಾರಿ ಮೌಲಾಲಿ ಭೀಮಣ್ಣ ಚಿಕ್ಕನಹಳ್ಳಿ ದೊಡ್ಡ ದೇಸಾಯಿ ದೇವರಗೋನಾಲ ಸಣ್ಣ ದೇಸಾಯಿ ದೇವರಗೋನಾಲ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…