ಸುರಪುರ: ಜಿಲ್ಲೆಯಾದ್ಯಂತ ರೈತರು ಬೆಳೆದ ಭತ್ತವು ಕಟಾವಿಗೆ ಬಂದಿದ್ದು ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರ ಸುಲಿಗೆಗೆ ಇಳಿದಿದ್ದಾರೆ ಆದ್ದರಿಂದ ಭತ್ತ ಕಟಾವು ಯಂತ್ರಗಳ ದರವನ್ನು ನಿಗದಿಪಡಿಸುವಂತೆ ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅನೇಕ ಮುಖಂಡರು ಮಾತನಾಡಿ,ಈಗಾಗಲೆ ಸತತವಾದ ನೆರೆ ಮತ್ತು ಮಹಾ ಮಳೆಯಿಂದಾಗಿ ರೈತರು ಬೆಳೆದ ಹತ್ತಿ ತೊಗರಿ ಭತ್ತದ ಬೆಳೆಗಳು ಲಾಸಾಗಿವೆ.ಈಗ ಉಳಿದ ಅಲ್ಪಸ್ವಲ್ಪ ಭತ್ತವು ಕಟಾವಿಗೆ ಬಂದಿದೆ,ಈಗ ಕಟಾವು ಯಂತ್ರಗಳಿಗೆ ಸುಗ್ಗಿ ಆರಂಭವಾಗಿದೆ.ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರ ಅನುಕೂಲದ ಬದಲು ತಮ್ಮ ಲಾಭದ ಯೋಚನೆಯಲ್ಲಿ ತೊಡಗಿ ಭತ್ತ ಕಟಾವಿಗೆ ದುಪ್ಪಟ್ಟು ದರ ನಿಗದಿ ಮಾಡಿ ರೈತರ ಸುಲಿಗೆ ಮಾಡುತ್ತಿದ್ದಾರೆ.
ಆದ್ದರಿಂದ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಭತ್ತ ಕಟಾವು ಯಂತ್ರದ ದರವು ಗಂಟೆಗೆ ೧೮೦೦ ರೂಪಾಯಿಗಳ ನಿಗದಿ ಮಾಡಿದಂತೆ ನಮ್ಮ ಜಿಲ್ಲೆಯಲ್ಲಿಯೂ ದರ ನಿಗದಿ ಮಾಡಿ ಆದೇಶ ಹೊರಡಿಸಬೇಕು,ಹೆಚ್ಚಿನ ಬೆಲೆಯನ್ನು ಪಡೆಯುವ ಯಂತ್ರದ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.ಅದೇರೀತಿಯಾಗಿ ಭತ್ತ ಖರೀದಿಗೆ ಬರುವ ಖರೀದಿದಾರರು ಮುಗ್ಧ ರೈತರನ್ನು ನಂಬಿಸಿ ಭತ್ತ ಪಡೆದು ನಂತರ ಹಣ ನೀಡದೆ ಓಡಿ ಹೋಗಿರುವ ಸಾಕಷ್ಟು ಉದಾಹರಣೆಗಳಿವೆ.
ಆದ್ದರಿಂದ ಯಾವುದೇ ಭತ್ತ ಖರೀದಿದಾರ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳು ಅಥವಾ ತಹಸೀಲ್ದಾರರಿಂದ ಪರವಾನಿಗೆ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸು ಹಾಗು ಹಿಂಗಾರು ಬೆಳೆಗಳಿಗೆ ಏಪ್ರಿಲ್ ೨೮ರ ವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಒಂದು ವೇಳೆ ಈ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘದ ಕಾರ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆಗಾರ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ನಾಗೇಂದ್ರ ದೊರೆ ದೇವೆಗೌಡ ಪೊಲೀಸ್ ಪಾಟೀಲ್ ತಿರುಪತಿ ನಾಯಕ ಮಲ್ಲಪ್ಪ ಪೂಜಾರಿ ಸೂಲಪ್ಪ ಮಂಗಿಹಾಳ ದಂಡಪ್ಪಗೌಡ ಪೊಲೀಸ್ ಪಾಟೀಲ್ ದೇವಪ್ಪ ರಸ್ತಾಪುರ ಕೃಷ್ಣಪ್ಪ ನಾಯಕ ಬಸವರಾಜ ಪಾಟೀಲ್ ಕೆಂಚಪ್ಪ ಬೊಮ್ಮನಹಳ್ಳಿ ಮೌನೇಶ ಬೇಟೆಗಾರ ಹಣಮಂತ್ರಾಯ ಚೆಟ್ಟಿ ನಿಂಗರಡ್ಡಿ ಕಲುಕರ್ಣಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…