ಸುರಪುರ: ನಾರಾಯಣಪೂರ ಜಲಾಶಯದ ಮೇಲ್ಬಾಗದಲ್ಲಿನ ಕಾಮಗಾರಿ ಹೆಸರಿನಲ್ಲಿ ವಿಭಾಗ ಕಛೇರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆಸುತ್ತಿದ್ದಾರೆ, ಒಂದೆ ಕಾಮಗಾರಿಗೆ ಎರಡೆರಡು ಬಾರಿ ಟೆಂಡರ್ ಕರೆದು ಹಣ ಲಪಟಾಯಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ನನ್ನ ಅಧಿಕಾರಾವಧಿಯಲ್ಲಿ ನಾರಾಯಣಪುರ ಆರ್.ಬಿ.ಇ.ಡಿ ಮತ್ತು ಎಲ್.ಬಿ.ಇ.ಡಿಯ ಮೇಲ್ಬಾಗದಲ್ಲಿ ಹುಲ್ಲು ನೆಡುವುದು ಮತ್ತು ಇದಕ್ಕೆ ಸ್ಪಿಂಕಲರ್‌ಗಳನ್ನು ಅಳವಡಿಸುವ ಕಾಮಗಾರಿಗೆ ಟೆಂಡರ್ ಕರೆದು ಪೂರ್ಣಗೊಳಿಸಲಾಗಿತ್ತು. ಆದರೆ ಕೇವಲ ನಾಲ್ಕೇ ವರ್ಷದಲ್ಲಿ ಅದೇ ಕಾಮಗಾರಿಗೆ ಪುನಃ ಟೆಂಡರ್ ಕರೆದು ಕೋಟ್ಯಾಂತರ ರೂಪಾಯಿ ನಿಗದಿ ಪಡಿಸಿರುವುದನ್ನು ಗಮನಿಸಿದರೆ ಸರ್ಕಾರದ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುವ ತಂತ್ರ ಹೂಡಿರಿವುದು ಮೇಲ್ನೊಟಕ್ಕೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ್ದಾರೆ
ಅವ್ಯವಹಾರ ನಡೆಸುತ್ತಿರುವ ಕುರಿತು ಹಲವು ಬಾರಿ ನಾರಾಯಣಪುರ ಆಣೆಕಟ್ಟು ವಿಭಾಗದ ಹಿರಿಯ ಅಧಿಕಾರಗಳಿಗೆ ಪತ್ರಬರೆದು ತಿಳಿಸಿದರೂ ಸಹ ಯಾವೋಬ್ಬ ಅಧಿಕಾರಿಯು ಕಾಮಗಾರಿಯನ್ನು ನಿಲ್ಲಿಸಿ ಸದರಿ ವಿಷಯದ ಕುರಿತು ಪರಿಶೀಲಿಸದೆ ಇರುವುದನ್ನು ಗಮನಿಸಿದರೆ ಈ ಅವ್ಯವಹಾರಗಳಲ್ಲಿ ಅಧಕಾರಿಗಳ ಶಾಮೀಲಾಗಿರುವುದು ಸ್ಪಷ್ಟವಾಗುತ್ತದೆ.
ಈ ರೀತಿಯಲ್ಲಿ ಸರ್ಕಾರದಿಂದ ಬಂದಿರುವ ಬೃಹತ್ ಮೊತ್ತದ ಅನುದಾನವನ್ನು ಅನಾವಶ್ಯಕ ಟೆಂಡರ್ ಕರೆದು ಬೋಗಸ್ ಬಿಲ್ ಮಾಡುತ್ತಿರುವ ಕುರಿತು ಹಲವುಬಾರಿ ಕೆ.ಬಿ.ಜೆ.ಎನ್.ಎಲ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರಬರೆದು ತಿಳಿಸಲಾಗಿತ್ತು ಆದರೂ ಸಹ ಯಾವುದೆ ಕ್ರಮವಹಿಸದೆ ಇರುವುದು ಅಧಿಕಾರಿಗಳ ನಿರ್ಲಕ್ಷತನ ಎದ್ದು ತೋರುತ್ತಿದೆ. ಕಾರಣ ಸದರಿ ಕಾಮಗಾರಿಗಳನ್ನು ತಕ್ಷಣವೆ ನಿಲ್ಲಿಸಿ ಈ ಅವ್ಯವಹಾರದಲ್ಲಿ ಶಾಮೀಲಾದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಮುಂದಿನದಿನಗಳಲ್ಲಿ ನಾರಾಯಣಪೂರ ಆಣೆಕಟ್ಟು ವಿಭಾಗದ ಮುಖ್ಯ ಅಭಿಯಂತರರ ಕಛೇರಿ ಮುಂಭಾಗದಲ್ಲಿ ಪ್ರತಿಭಟಣೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…