ಸುರಪುರ: ಖ್ಯಾತ ಪತ್ರಕರ್ತ ಕಲಾವಿದ ಹಾಗು ಶಿಕ್ಷಣ ಪ್ರೇಮಿ ಬರಹಗಾರ ರವಿ ಬೆಳಗೆರೆಯವರ ನಿಧನಕ್ಕೆ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಸುರಪುರ ತಾಲೂಕು ಘಟಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಸಂತಾಪ ವ್ಯಕ್ತಪಡಿಸಿ,ರವಿ ಬೆಳಗೆರೆ ಕೇವಲ ತಮ್ಮ ಬದುಕಿಗಾಗಿ ಬರವಣಿಗೆಯನ್ನು ಬಳಸದೆ ಇಡೀ ಸಮಾಜದ ಸುಧಾರಣೆಗಾಗಿ ಮತ್ತು ಭ್ರಷ್ಟಾಚಾರದ ನಿರ್ಮೂಲನೆಗಾಗಿ ಮತ್ತು ಅಪರಾಧಗಳ ಕಡಿವಾಣಕ್ಕಾಗಿ ಪತ್ರಿಕೆಯಲ್ಲಿ ಬರೆಯುತ್ತಿದ್ದರು.
ಅವರ ಸಂಪಾದಕೀಯದ ಹಾಯ್ ಬೆಂಗಳೂರು ಪತ್ರಿಕೆಯು ಅದೆಷ್ಟೋ ಜನ ಅಪರಾಧ ಲೋಕದ ಯುವಕರನ್ನು ಬದಲಾಯಿಸಿದೆ, ಸಾವಿರಾರು ಜನ ಅಪರಾಧಿಗಳ ಮಕ್ಕಳಿಗೆ ತಮ್ಮ ಪ್ರಾರ್ಥನಾ ವಿದ್ಯಾಮಂದಿರದ ಮೂಲಕ ಅಕ್ಷರ ನೀಡಿ ಬಾಳನ್ನು ಬೆಳಗಿಸಿದ ಮಹಾನ್ ವ್ಯಕ್ತಿ.ಅಲ್ಲದೆ ಅವರು ಬರೆದ ಸುಮಾರು ಅರವತ್ತಕ್ಕೂ ಹೆಚ್ಚಿನ ಕೃತಿಗಳು ಪ್ರತಿ ಓದುಗನಲ್ಲಿ ಒಂದು ಸಂಚಲನ ಮೂಡಿಸವಂತವು ಹಾಗು ಲಕ್ಷಾಂತರ ಓದುಗರಿಗೆ ಬರವಣಿಗೆಯ ಹಾದಿಯನ್ನು ತಿಳಿಸಿರುವಂತವು,ಅಂತಹ ಅಕ್ಷರ ಮಾಂತ್ರಿಕ ಇನ್ನಿಲ್ಲವಾಗಿರುವುದು ಈ ನಾಡಿಗೆ ಬದುದೊಡ್ಡ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ರವಿ ಬೆಳಗೆರೆಯವರ ನಿಧನಕ್ಕೆ ಕೆಜೆಯು ತಾಲೂಕು ಉಪಾಧ್ಯಕ್ಷ ಮಲ್ಲು ಗುಳಗಿ ರವಿರಾಜ ಕಂದಳ್ಳಿ ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ ಕಾರ್ಯದರ್ಶಿ ಮಲ್ಲಿಕಾರ್ಜುನ ತಳ್ಳಳ್ಳಿ ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ ಧೀರೆಂದ್ರ ಕುಲಕರ್ಣಿ ಶ್ರೀಕರ ಜೋಷಿ ಹೊನ್ನಪ್ಪ ತೇಲ್ಕರ್ ಮುರಳಿಧರ ಅಂಬುರೆ ಮಾಳಪ್ಪ ಕಿರದಹಳ್ಳಿ ಮನಮೋಹನ ದೇವಾಪುರ ನಾಗರಾಜ ದೇಸಾಯಿ ರಾಘವೇಂದ್ರ ಮಾಸ್ತರ್ ಪುರುಷೋತ್ತಮ ದೇವತ್ಕಲ್ ಮದನ್ ಕಟ್ಟಿಮನಿ ಕಲೀಂ ಫರೀದಿ ಸೇರಿದಂತೆ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…