ಬಿಸಿ ಬಿಸಿ ಸುದ್ದಿ

ಪ್ರತಿ ಮಗುವಿನಲ್ಲಿ ವಿಶೇಷ ಪ್ರತಿಭೆ ಇದೆ ತೋರಿಸಲು ಪ್ರೋತ್ಸಾಹ ಅಗತ್ಯ: ನಟರಾಜ ಶಿಲ್ಪಿ

ಸುರಪುರ: ಇತ್ತಿಚಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲಿ ವಿಶೇಷವಾದ ಪ್ರತಿಭೆಗಳಿದ್ದು ಅವುಗಳನ್ನು ಹೊರಹಾಕಲು ವೇದಿಕೆ ಮತ್ತು ಪ್ರೋತ್ಸಾಹ ಅತ್ಯಂತ ಅವಶ್ಯಕವಾಗಿದೆ ಎಂದು ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಸದಸ್ಯ ನಟರಾಜ ಎಂ ಶಿಲ್ಪಿ ಹೇಳಿದರು.

ನಗರದ ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಇಂದು ಮಕ್ಕಳ ಕಲರವ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಮಕ್ಕಳ ಕಲರವ ೨೦೨೦ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ವಿಶೇಷವಾದ ಕಲೆ, ಕಲಾಶಕ್ತಿ ಹಾಗೂ ವಿಶಿಷ್ಟಪೂರ್ಣವಾದ ಕಲೆಗಳು ಅಡಕವಾಗಿದ್ದು ಅಂತಹ ಮಕ್ಕಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಪ್ರತಿಭೆ ಅನಾವರಣಮಾಡಲು ಎಲ್ಲರು ಸಹಕರಿಸಬೇಕು.

ತೀರ ಇತ್ತಿಚಿನ ಮಾದ್ಯಮಗಳು ಮಕ್ಕಳಿಗಾಗಿ ವಿಶೆಷವಾದ ಸಂಗೀತ ಮತ್ತು ನೃತ್ಯ ಸ್ಪರ್ದೆಗಳನ್ನು ಏರ್ಪಡಿಸುತ್ತಿದ್ದು ಆ ಮೂಲಕ ಗ್ರಾಮೀಣ ಪ್ರದೇಶದ ಅನೇಕ ಪ್ರತಿಭೆಗಳು ಮುಖ್ಯವಾಹಿನಿಗೆ ಬರುತ್ತಿವೆ ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕೂಡ ಮಕ್ಕಳ ಪರವಗಿ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ಬಾಲ್ಯದಲ್ಲಿಯೇ ಅವರಿಗೆ ಸಂಸ್ಕಾರ, ಸಂಸ್ಕೃತಿ, ಪ್ರೀತಿ, ವಿಶ್ವಾಸ ಮೂಡಿಸುವುದು ಅತ್ಯಂತ ಅವಶ್ಯವಾಗಿದೆ ಇಂದಿನ ಪಾಲಕರು ಮಕ್ಕಳ ಆಸೆಗಳಿಗೆ ತದ್ವಿವೃದ್ದವಾಗಿ ತಮ್ಮ ಆಸಕ್ತಿಗನುಗುಣವಾಗಿ ಮಕ್ಕಳ ಅಬ್ಯಾಸಮಾಡಲಿ ಎಂದು ಬಯಸುತ್ತಾರೆ, ಇದು ಆತಂಕಕಾರಿ ಬೆಳವಣಿಗೆ ಮಕ್ಕಳಿಗೆ ಸಂಪೂರ್ಣ ಸ್ವಾತಂತ್ಯ್ರ ನೀಡುವ ಮೂಲಕ ಅವರನ್ನು ಸರ್ವತೊಮ್ಮುಖವಾಗಿ ಶಸಕ್ತರನ್ನಾಗಿ ಮಾಡಬೇಕು ಎಂದು ಹೇಳಿದರು.

ಸಮಾರಂಭದ ಸಾನಿದ್ಯವಹಿಸಿದ್ದ ಲಕ್ಷ್ಮೀಫುರ ಮರಡಿ ಮಲ್ಲಿಕಾರ್ಜುನ ಶ್ರೀಗೀರಿ ಸಂಸ್ಥಾನಮಠದ ಪೂಜ್ಯ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಾಲ್ಕುಗೋಡೆಗಳ ಮಧ್ಯ ಮಕ್ಕಳ ಭವಿಷ್ಯ ರೂಪವಾಗುತ್ತಿದ್ದು ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದಾಗಿದೆ, ಬಾಲ್ಯದಲ್ಲಿಯೇ ಮಕ್ಕಳಿಗೆ ಸಾಹಿತ್ಯ ಸಂಗೀತದ ಬಗ್ಗೆ ಆಸಕ್ತಿ ಬೆಳಸಿದ್ದಲ್ಲಿ ಭವಿಷ್ಯದ ದಿನಗಳಲ್ಲಿ ಮಕ್ಕಳು ಅತ್ಯಂತ ಲವಲವಿಕೆ, ಕ್ರಿಯಾಶೀಲದಿಂದ ಬದುಕುತ್ತವೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಂಸ್ಕೃತಿಕ ಸಂಘಟಕಾರದ ನಾಗಯ್ಯಸ್ವಾಮಿ ಅಲ್ಲೂರು ಮಾತನಾಡಿದರು, ಇದೆ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಹೆಚ್. ಬಿ ತಿರ್ಥೆ ಕಲಬುರಗಿ ಅವರಿಗೆ ೨೦೨೦ ನೇ ಸಾಲಿನ ಗೌರವ ಪ್ರಶಸ್ತಿಯನ್ನು ಹಾಗೂ ಬಾಲ ಪ್ರತಿಭೆಗಳಾದ ತನ್ಮಯ ನಾಗರಹಳ್ಳಿ, ಸೃಷ್ಟಿ ಸಿದ್ದಯ್ಯ ಪಾಟೀಲ್, ನಿರಿಕ್ಷ ನಸಲವಾಯ್, ಪ್ರೇಮ್‌ಜಿ ಹುಲಕಲ್, ಆದರ್ಷ ಹೆಂಬತ್ತನಾಳ್, ಪಾರ್ಥ ಸಾರಥಿ ಸ್ಥಾವರಮಠ, ಹಣಮಂತ ಎದಲಭಾವಿ, ಸಾವಿತ್ರಿ ಮಾರನಾಳ, ರಾಕೇಶ ಪತ್ತಾರ, ಶ್ವೇತಾ ಮಲ್ಲಿಕಾರ್ಜುನ ಈ ಬಾಲ ಪ್ರತಿಭೆಗಳಿಗೆ ವಾರ್ಷಿಕ ಪ್ರಶಸ್ತಿಯನ್ನು ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು. ಶಿಶು ಸಾಹಿತಿ ನರಸಪ್ಪ ಚಿನ್ನಾಕಟ್ಟಿ ಮಕ್ಕಳ ಸಾಹಿತ್ಯದಲ್ಲಿ ಮಾನವಿಯ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ ಸಂಸ್ಥೆಯ ಮಕ್ಕಳ ಸರ್ವತೊಮ್ಮುಖ ಪ್ರಗತಿಗೆ ಪೂರಕವಾಗಿ ಕಾರ್ಯಾನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮಕ್ಕಳ ದಿನಾಚಾರಣೆಯ ಅಂಗವಾಗಿ ಪಂಡೀತ ಜವಹರಲಾಲ್ ನೆಹರು ಅವರ ಜನ್ಮ ದಿನಾಚರಣೆಯ ನಿಮಿತ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು, ಸುರಪುರದ ಖಾಸ್ಗತೇಶ್ವರ ನೃತ್ಯ ಕಲಾ ಸಂಸ್ಥೆ ಮಕ್ಕಳವತಿಯಿಂದ ವಿಶೇಷ ಭರತನಾಟ್ಯ ಕಾರ್ಯಕ್ರಮ ಹಾಗೂ ನಾಗರಹಳ್ಳಿ ಸಂಗೀತ ಪಾಠ ಶಾಲೆ ಮಕ್ಕಳಿಂದ ಜನಪದ ಸಂಗೀತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಸಿದ್ದಾರೂಢ ನಾಗರಹಳ್ಳಿ ಪ್ರಾರ್ಥಿಸಿದರು, ಸುನೀಲ ಕುಮಾರ ಶಿರಣಿ ಶಹಾಪೂರ ನಿರೂಪಿಸಿದರು, ಮಲ್ಲು ಬಾದ್ಯಾಪೂರ ಸ್ವಾಗತಿಸಿದರು, ಮೌನೇಶ ಐನಾಪೂರ ವಂದಿಸಿದರು, ಪ್ರಮುಖರಾದ ಶಿವರಾಜ ಕಲಿಕೇರಿ, ರಾಘವೆಂದ್ರ ಭಕರಿ, ಪ್ರಕಾಶ ವಜ್ಜಲ್, ಪ್ರವೀಣ ಜಕಾತಿ, ಶಿವಪ್ಪ ಹೆಬ್ಬಾಳ, ಬಸವರಾಜ ಹೆಳಸಂಗಿ ಸೇರಿದಂತೆ ಇತರರಿದ್ದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

37 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

39 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

42 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago