ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ೧೫ರ ಭೀಮನಗರದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿದ್ದು, ದಲಿತರಿಗೆ ಉತ್ತಮ ರಸ್ತೆಗಳ ಭಾಗ್ಯ ಒದಗಿಬಂದಿದೆ.
ಬಡಾವಣೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ವಾರ್ಡ್ ಸದಸ್ಯೆ ಸುಶಿಲಾಬಾಯಿ ಮಾರುತಿ ಮೋಸಲಗಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪ್ರಗತಿ ಕಾಲೋನಿ ಯೋಜನೆಯಡಿ ಸಮಾಜಕಲ್ಯಾಣ ಇಲಾಖೆ ಆದೀನದಲ್ಲಿ ಭೀಮನಗರ ಹಾಗೂ ಮರಾಠಿ ಗಲ್ಲಿ ಬಡಾವಣೆಗಳಲ್ಲಿ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದಕ್ಕಾಗಿ ಒಟ್ಟು ೨೩ ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಹಲವು ವರ್ಷಗಳಿಂದ ಉತ್ತಮ ರಸ್ತೆಗಳಿಗಾಗಿ ಬೇಡಿಕೆಯಿಟ್ಟು ಹೋರಾಡುತ್ತಿದ್ದ ಬಡಾವಣೆಯ ಜನತೆಗೆ ನ್ಯಾಯ ಸಿಕ್ಕಂತಾಗಿದೆ. ಬಡಾವಣೆಯಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು ಇನ್ನಷ್ಟು ಉತ್ತಮಗೊಳಿಸಲು ಚಿಂತನೆ ನಡೆಸಲಾಗುತ್ತಿದ್ದು, ಕಸ ವಿಲೇವಾರಿ ಹಾಗೂ ಬಡಾವಣೆಯ ಬೀದಿ ಸ್ವಚ್ಚತೆ ಕಾರ್ಯ ನಿರಂತರವಾಗಿದೆ ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷ ತಿಮ್ಮಯ್ಯ ಪವಾರ, ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಮಲ್ಲಯ್ಯ ಗುತ್ತೇದಾರ, ಮುಖಂಡರಾದ ಶ್ರವಣಕುಮಾರ ಮೊಸಲಗಿ, ಮಹ್ಮದ್ ಅಶ್ರಫ್ ಖಾನ್, ವಿಜಯಕುಮಾರ ಸಿಂಗೆ, ನಾಗೇಂದ್ರ ಜೈಗಂಗಾ, ಮಹ್ಮದ್ ಐಜಾಜ್ ಸೇರಿದಂತೆ ಬಡಾವಣೆಯ ಮುಖಂಡರು ಪಾಲ್ಗೊಂಡಿದ್ದರು.
ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…
ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…
ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…
ಕಲಬುರಗಿ; ಶಿಶು ಮಗುವಿಗೆ ಅಪಹರಣಕಾರರನ್ನು ಬಂಧಿಸಿದ ಕಲಬುರಗಿ ಪೆÇೀಲೀಸ್ ಇಲಾಖೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ ವ್ಯಕ್ತಪಡಿಸಿದೆ.…
ಕಲಬುರಗಿ; ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲಪೂರ, ಸೇಡಂ, ಆಳಂದ, ಚಿಂಚೋಳಿ ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್…