ತುಮಕೂರು: 12ನೇ ಶತಮಾನದಲ್ಲಿ ಕಾಯಕ ಜೀವಿಗಳು ಒಂದುಗೂಡಿ ಶರಣ ಸಂಕುಲ ಎಂಬ ನವಸಮಾಜ ನಿರ್ಮಾಣ ಮಾಡಿದರು, ಅಂದು ಜಾತಿಗಳಿಗೆ ಮನ್ನಣೆ ಇರಲಿಲ್ಲ, ಬದಲಾಗಿ ಮಾನವರು ಒಂದೇ ಎಂಬ ಸಂದೇಶ ಸಾರಿದರು ಎಂದು ಬೀದರ್ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಸುಖಾಲೆ ತಿಳಿಸಿದರು.
ತುಮಕೂರಿನ ಎಸ್‌ಐಟಿಯ ಬಿರ್ಲಾ ಆಡಿಟೋರಿಯಂ ಭೋದಕೇತರ ನೌಕರರ ಸಂಘದ ನೇತೃತ್ವದಲ್ಲಿ ನಡೆದ ಶ್ರೀವಸವ ಜಯಂತಿ ಹಾಗೂ ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮೀಜಿಗಳ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರ ಮಾರ್ಗದರ್ಶನದಲ್ಲಿ ವವನಕಾರರು ಅಕ್ಷರ ಕ್ರಾಂತಿ ಮೂಡಿಸಿದರು, ಜೊತೆಗೆ ತಮ್ಮ ಅನುಭವಗಳನ್ನು ವಚನಗಳಾಗಿ ರೂಪಿಸಿ ಮಾನವ ಕುಲಕ್ಕೆ ಉತ್ತಮ ಸಂದೇಶ ರವಾನಿಸಿದರು, ನಿಸರ್ಗ ಪರವಾದ ಕಾಯಕರ ಬಗ್ಗೆ ತಿಳಿಸಿ ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾದರು ಎಂದು ತಿಳಿಸಿದರು.
ಸಿದ್ದಗಂಗಾ ಮಠದತ್ತ ಇಡೀ ವಿಶ್ವವೇ ನೋಡುವಂತಾಗಿದ್ದು ಸಿದ್ದಗಂಗಾ ಶ್ರೀಗಳ ಕಾಯಕ ತತ್ವವೇ ಕಾರಣವಾಗಿದೆ, ಸ್ವಾಮೀಜಿಯವರ ಜೀವನ ಬಸವಣ್ಣನವರ ಜೀವನಕ್ಕೆ ಹತ್ತಿರವಾಗಿತ್ತು, ಅಹಂಕಾರ, ಸ್ವಜಾತಿ ಪ್ರೇಮ ಇಂದು ವಿಜೃಂಭಿಸುತ್ತಿದೆ, ಇದರ ಮಧ್ಯೆ ಎಲ್ಲವನ್ನೂ ಸಮಾಜಕ್ಕಾಗಿ ನೀಡುವ, ಬಡವರ ಉದ್ಧಾರಕ್ಕಾಗಿ ಬದುಕಿದ ಸಿದ್ದಗಂಗಾ ಶ್ರೀಗಳು ನಮಗೆಲ್ಲಾ ಆದರ್ಶ ಎಂದರು.
ಸಿದ್ದಗಂಗಾ ಮಠದಲ್ಲಿ ದಶಕ ದಶಕಗಳಿಂದ ಉರಿಯುತ್ತಿರುವ ಒಲೆ ಕೆಟ್ಟಿಲ್ಲ, ಜ್ಞಾನದ ಜ್ಯೋತಿ ಆರಿಲ್ಲ, ಕಾಯಕ ಮಾಡುತ್ತಿರುವ ಕೈಗಳಿಗೆ ಧನಿವಾಗಿಲ್ಲ, ಸಿದ್ದಗಂಗಾ ಶ್ರೀಗಳು ಇಷ್ಟಲಿಂಗ ಪೊಜೆ, ಜಂಗಮ ಪೊಜೆ ಮಾಡಿ ದೇವರಿಗೆ ಹತ್ತಿರವಾಗಿದ್ದಾರೆ, ಅವರು ತೋರಿರುವ ಮಾರ್ಗದಲ್ಲಿ ನಾವು ಇಂದು ಸಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಇಂದು ಸಮಾಜದಲ್ಲಿ ಮಹಿಳೆಯರಿಗೆ ದೊಡ್ಡ ಗೌರವ ಸ್ಥಾನಮಾನವಿದೆ, ಮಹಿಳೆಯರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ, ಇಂಥ ಮಹಿಳೆಯರನ್ನು ಸಮಾಜ ಗೌರವಿಸಬೇಕು ಎಂದರು.
ಇಂದು ಕಾಲೇಜಿನಲ್ಲಿ ಭೋದಕೇತರ ಸಿಬ್ಬಂದಿ ಅರ್ಥಪೊರ್ಣ ಕಾರ್ಯಕ್ರಮ ಮಾಡುತ್ತಿದೆ, ಬಸವ ಜಯಂತಿ ಆಚರಿಸುವ ಮೂಲಕ ಬಸವಣ್ಣನವರ ತತ್ವ ಸಿದ್ಧಾಂತವನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ, ಲಿಂಗೈಕ್ಯ ಸಿದ್ದಗಂಗಾ ಶ್ರೀಗಳು ಸಹ ಬಸವಣ್ಣನವರ ತತ್ವಾದರ್ಶ ನಂಬಿ ಕಾಯಕ ಮಾಡಿದರು, ಬಸವಣ್ಣನವರ ವಚನಗಳು ಮತ್ತು ಅವರ ಜೀವನ ಮೌಲ್ಯ ತಿಳಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲೂ ನಾಟಕ ಪ್ರದರ್ಶನ ಏರ್ಪಡಿಸುತ್ತಿದ್ದರು ಎಂದರು.
ಬಸವಣ್ಣ ಜಾತಿ ಧರ್ಮ ಮೀರಿ ಸಮಾನತೆ ಸಾರಿದರು, ಅದೇ ರೀತಿ ಸಿದ್ದಗಂಗಾ ಶ್ರೀಗಳು ಯಾವುದೇ ಜಾತಿ ಧರ್ಮಕ್ಕೆ ಪ್ರಾಮುಖ್ಯತೆ ನೀಡದೆ ಸಮಾನತೆ ಸಾರುವ ಕಾರ್ಯ ಮಾಡಿದರು, ಅವರಿಗೆ ಇಮದು ಭೋದಕೇತರ ಸಿಬ್ಬಂದಿ ಗುರುವಂದನೆ ಸಲ್ಲಿಸುತ್ತಿರುವುದು ಅರ್ಥಪÇರ್ಣವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ನೀವೃತ್ತ ನೌಕರರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು, ಜೊತೆಗೆ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಗೌರವಿಸಲಾಯಿತು. ಎಸ್‌ಐಟಿ ನಿರ್ದೇಶಕ ಡಾ.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು, ಸಿಇಓ ಡಾ.ಶಿವಕುಮಾರಯ್ಯ, ಪ್ರಾಂಶುಪಾಲ ಡಾ.ಕೆ.ಪಿ.ಶಿವಾನಂದ, ಭೋದಕೇತರರ ನೌಕರರ ಸಂಘದ ಅಧ್ಯಕ್ಷ ರೇಣುಕಯ್ಯ, ಕಾರ್ಯದರ್ಶಿ ಜಿ.ಹೆಚ್.ಮೋಹನ್‌ಕುಮಾರ್, ಖಜಾಂಚಿ ಗುರುಚೆನ್ನಬಸಪ್ಪ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…