ಬಿಸಿ ಬಿಸಿ ಸುದ್ದಿ

ಬಾಬಾಸಾಹೇಬರನ್ನು ಅರಿತುಕೊಂಡು ಪ್ರಬುದ್ದ ಭಾರತ‌ ನಿರ್ಮಾಣ: ಶಾಸಕ ಪ್ರಿಯಾಂಕ್ ಖರ್ಗೆ

ಕಲಬುರಗಿ: ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಸಂಪೂರ್ಣ ಅರಿತುಕೊಳ್ಳದ ಹೊರತು ಪ್ರಬುದ್ಧ ಭಾರತವಾಗಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ವಕ್ತಾರರೂ ಹಾಗೂ ಚಿತ್ತಾಪುರ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ನುಡಿದರು.

ಅಳಂದ ತಾಲ್ಲೂಕಿನ ಚಿಂಚನಸೂರು ಗ್ರಾಮದಲ್ಲಿ ಸ್ಥಾಪಿಸಲಾದ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ ಬಿ.ಆರ್. ಅಂಬೇಡ್ಕರ ಅವರ ಮೂರ್ತಿ ಅನಾವರಣಗೊಳಿಸಿ ಮಾತನಾಡುತ್ತಿದ್ದರು.

ಡಾ ಅಂಬೇಡ್ಕರ್ ಅವರು ವ್ಯಕ್ತಿ ಪೂಜೆಯನ್ನು ವಿರೋಧಿಸುತ್ತಿದ್ದರು. ಆದರೆ‌, ಇಂದು ನಾವೆಲ್ಲ ವೇದಿಕೆಗೆ ಆಗಮಿಸುವಾಗ ನೀವೆಲ್ಲ ಹೂಗಳನ್ನು ನಮ್ಮ ತಲೆಯ ಮೇಲೆ ಸುರಿಸಿ ಅಭಿಮಾನ ವ್ಯಕ್ತಪಡಿಸಿದಿರಿ. ಈ ತರ ವ್ಯಕ್ತಿಗಳ ಪೂಜೆ ಮಾಡುವ ಬದಲು ಬಾಬಾಸಾಹೇಬರ ಆಶಯಗಳನ್ನು ಪೂರ್ಣಗೊಳಿಸಬೇಕು ಎಂದು ಕರೆ ನೀಡಿದರು.

ಸ್ವಾತಂತ್ರ್ಯ ನಂತರ ದೇಶದಲ್ಲಿ‌ಇದ್ದ 571 ಸಣ್ಣಪುಟ್ಟ ಸಾಮ್ರಾಜ್ಯಗಳನ್ನು ಒಂದುಗೂಡಿಸಿ ದೇಶದ ವೈವಿದ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿತ್ತು. ಆ ಸಂದರ್ಭದಲ್ಲಿ ದೇಶದ ಜನರ ಹಿತ‌ಕಾಪಾಡುವ ಸಮಾನತೆ ಸಾಧಿಸಿಕೊಂಡು ಹೋಗುವ ಸಂವಿಧಾನ ಅಗತ್ಯವಿತ್ತು. ಅಂತಹ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ಡಾ ಬಾಬಾಸಾಹೇಬರ ಹೆಗಲಿಗೆ ಬಿತ್ತು.  ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿ ಭಾರತೀಯರ ಸ್ವಾಭಿಮಾನವನ್ನು ಕಾಪಾಡುವ ಹಕ್ಕುಗಳನ್ನು ಒಳಗೊಂಡ ಸಂವಿಧಾನ ರಚಿಸಿ ನಮಗೆಲ್ಲ ಒಂದು ಗೌರವದ ಬದುಕನ್ನು ಒದಗಿಸಿಕೊಟ್ಟ ಮಹಾನಾ‌ನಾಯಕ ಡಾ ಅಂಬೇಡ್ಕರ್ ಎಂದರು.

ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ ಬಾಬಾಸಾಹೇಬರು ಸಂವಿಧಾನದ ಕರಡು ಪ್ರತಿ ತಯಾರಿಸಿ ಸಂಸತ್ತಿಗೆ ಒಗಿಸಿದರು. ಆ ಸಂದರಭದಲ್ಲಿ ಸುಮಾರು 3000_ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಯಿತು.ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ‌ ಡಾ ಅಂಬೇಡ್ಕರ ಅವರು ಸುಮಾರು 20000 ಪುಟಗಳ ಉತ್ತರ ನೀಡಿದ್ದರು.  ಅದಾದ‌ ನಂತರ 1 ವರ್ಷ 11 ತಿಂಗಳ ನಂತರ ಸಂವಿಧಾನ ಅಂಗೀಕಾರಗೊಂಡಿತು‌ ಎಂದು ಸಂವಿಧಾನ ರಚನೆಯ ಸಂದರ್ಭದಲ್ಲಿ ಉಂಟಾದ ಅಡೆತಡೆಗಳನ್ನು ವಿವರಿಸಿದರು.

ಪ್ರಸ್ತುತ ಸನ್ನಿವೇಶದಲ್ಲಿ ಸಂವಿಧಾನವನ್ನು ವಿರೋಧಿಸಲಾಗುತ್ತಿದೆ. ಕಾರಣ ಸಂವಿಧಾನದಲ್ಲಿ ಸಮಾನತೆ ಇದೆ. ಇದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಸಂವಿಧಾನದ ವಿರೋಧ‌ ಪ್ರಕ್ರಿಯೆಗಳು ನಡೆದಾಗ ಜನಪ್ರತಿನಿಧಿಗಳು ಪ್ರಶ್ನಿಸಿಬೇಕು. ಶಾಸಕ ಮತ್ತಿಮುಡ ಅವರು ಮಾತನಾಡುತ್ತಾ ” ಸಂವಿಧಾನ ಇಲ್ಲದಿದ್ದರೆ, ನಾನಾಗಲೀ, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರು ಶಾಸಕರಾಗುತ್ತಿರಲಿಲ್ಲ ಎಂದರು. ಆದರೆ, ಮೋದಿ‌ ಪ್ರಧಾನಿಯಾಗುತ್ತಿರಲಿಲ್ಲ ಯಡಿಯೂರಪ್ಪ ಸಿಎಂ ಆಗುತ್ತಿರಲಿಲ್ಲ ಎನ್ನಬೇಕಿತ್ತು” ಎಂದು ಬಿಜೆಪಿ ನಾಯಕರು ಸಂವಿಧಾನ ಬದಲಾಯಿಸುವ ಕುರಿತು ನೀಡಿದ‌ ಹೇಳಿಕೆಗಳನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡುವುದು ನಮ್ಮ ಹಕ್ಕಾಗಿದೆ. ಆದರೆ, ಇತ್ತೀಚಿಗೆ ಪ್ರಶ್ನೆ ಮಾಡಿದರೆ ದೇಶದ್ರೋಹಿಗಳನ್ನಾಗಿ ಮಾಡಲಾಗುತ್ತಿದೆ. ಕೇಸು ದಾಖಲಿಸಿ ಮಾತನಾಡದಂತ ವಾತವಾರಣ ನಿರ್ಮಿಸಲಾಗುತ್ತಿದೆ ಎಂದು ವಿಷಾದಿಸಿದ ಪ್ರಿಯಾಂಕ್ ಖರ್ಗೆ ಜಾತಿ ಜಾತಿಗಳ ನಡುವೆ ಜಗಳ ಉಂಟುಮಾಡಿ ಹಾಗೂ ಧರ್ಮದ ಹೆಸರಲ್ಲಿ‌ದೇಶ ಒಡೆಯುವವರು ನಿಜವಾದ ದೇಶದ್ರೋಹಿಗಳು ಎಂದು‌ ಡಾ ಬಾಬಾಸಾಹೇಬರು ಹೇಳಿದ್ದಾರೆ. ನೀವೆ ಹೇಳಿ, ಈಗ ಇಂತಹ ಕೆಲಸ ಯಾರು ಮಾಡುತ್ತಿದ್ದಾರೆ ? ಎಂದು ಪ್ರಶ್ನಿಸಿದರು.

ದೇಶದ ಧ್ವಜ‌ವನ್ನು ಒಪ್ಪದ ಆರ್ ಎಸ್ ಎಸ್ ನವರು ಹಾಗೂ ಅಂತಹ ಕೆಲ‌ ಸಂಘಟನೆಗಳು ಈ ದೇಶದಲ್ಲಿ‌ ದೇಶಪ್ರೇಮಿಗಳು ಯಾರು ದೇಶದ್ರೋಹಿಗಳು ಯಾರು ಎಂದು ತೀರ್ಮಾನಿಸುತ್ತಿದ್ದಾರೆ. ಇಂದು ದೇಶ ನಡೆಯುತ್ತಿರುವುದು ಯಾವುದೇ ಧರ್ಮಗ್ರಂಥದಿಂದ ಅಲ್ಲ ಅದು ಸಂವಿಧಾನದಿಂದ ನಡೆಯುತ್ತಿದೆ ಎಂದು ಪ್ರತಿಪಾದಿಸಿ ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ  ರೂ 250 ಕೋಟಿ ವೆಚ್ಚದಲ್ಲಿ ಡಾ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪಿಸಲಾಗಿದೆ. ಇದಕ್ಕೆ ಕಾರಣ, ನಾನು ಐಟಿ‌ಬಿಟಿ ಸಚಿವರಾಗಿದ್ದಾಗ ಲಂಡನ್‌ಗೆ ಹೋಗಿದ್ದೆ. ಅಲ್ಲಿನ ಸ್ಕೂಲ್ ಆಫ್ ಎಕಾನಿಮಿಕ್ಸ್ ಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ವ್ಯವಸ್ಥೆಯ ಕುರಿತಂತೆ ಸರಕಾರಕ್ಕೆ ಸಲ್ಲಿಸಿದ್ದೆ. ಆ ಕಾರಣದಿಂದಾಗಿ ಸರಕಾರ ಎಕನಾಮಿಕ್ಸ್ ಶಾಲೆ ಸ್ಥಾಪಿಸಿತ್ತು ಎಂದು ಮೆಲುಕು ಹಾಕಿ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಪ್ರಬುದ್ಧ ಭಾರತ ನಿರ್ಮಾಣ ಮಾಡಬೇಕು ಎಂದು‌ಕರೆ‌ ನೀಡಿದರು.

‘ ಅಸ್ಪೃಶ್ಯತೆ ಕೋವಿಡ್ ಗಿಂತ ಭಯಾನಕ’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಡಾ ಜ್ಞಾನಪ್ರಕಾಶ್ ಸ್ವಾಮಿಜಿ, ಹೇಳಿದರು.

ಅಗ್ನಿ ದೇವರು ಎನ್ನುವುದಾದರೆ ನಿಮ್ಮ ಮನೆಗೆ ಬೆಂಕಿಬಿದ್ದಾಗ ನಂದಿಸುವ ಬದಲು ನಮಿಸಿ ಎಂದು ವ್ಯಂಗ್ಯವಾಡಿದರು. ಪೂಜೆ ಹೆಸರಲ್ಲಿ ದಶಕಗಳಿಂದಲೂ ನಮ್ಮನ್ನು ವಂಚಿಸಲಾಗುತ್ತಿದೆ. ಇದನ್ನು ಅರಿತುಕೊಂಡು ನೀವು ಶಿಕ್ಷಣ ಪಡೆದು ಡಾ ಬಾಬಾಸಾಹೇಬರ ಕನಸು ನನಸು ಮಾಡಿ ಎಂದು ಕರೆ ನೀಡಿದರು.

ಸಮಾನತೆ, ಮಾನವ ಹಕ್ಕುಗಳು ಹೋರಾಟಗಾರರ, ಸ್ವಾಭಿಮಾನದ‌ ಸಂಕೇತವಾದ ಬಾಬಾಸಾಹೇಬರು ಈ ದೇಶದ ಶೋಷಿತರ ಉಸಿರು. ಅವರ ಆಸೆಯಂತೆ ನೀವೆಲ್ಲ ಅಧಿಕಾರಿಗಳಾಗಬೇಕು ಅರ್ಜಿ ಕೊಡುವ ಜಾಗದಲ್ಲಿ ಇರುವುದು ಬೇಡ ಅರ್ಜಿ ಪಡೆದುಕೊಳ್ಳುವ ಜಾಗದಲ್ಲಿ‌ ಇರಬೇಕು ಎಂದು ಸ್ವಾಮೀಜಿ ಹೇಳಿದರು.

ತಮ್ಮ ವೈಯಕ್ತಿಕ ಜೀವನವನ್ನು ಧಾರೆ ಎರೆದು ನಮಗಾಗಿ ಸಂವಿಧಾನ ರಚಿಸಿದ್ದಾರೆ. ಸಂವಿಧಾನದಿಂದಾಗಿ ಇಂದು ನಾವೆಲ್ಲ ಸೌಲಭ್ಯ ಪಡೆದು ಜೀವನ ಸಾಗಿಸುತ್ತಿದ್ದೇವೆ. ಆದರೆ, ಇಂದಿನ ಪರಿಸ್ಥಿತಿ‌ ನೋಡಿದರೆ ಅಪಾಯದ ಅಂಚಿಗೆ ಸಾಗುತ್ತಿದೆ ಕಾರಣ ಸಂವಿಧಾನದ ಆಶಯಗಳಿಗೆ ಕೊಡಲಿಪೆಟ್ಟು ನೀಡಲಾಗುತ್ತಿದೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದರು.

ದಲಿತರನ್ನು ದಲಿತರ ಮೂಲಕವೇ ಮುಗಿಸುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ಸ್ವಾಮೀಜಿ, ಈ ಕುರಿತು ದಲಿತ ಬಂಧುಗಳು ಎಚ್ಚರಿಕೆ ವಹಿಸಬೇಕು ಎಂದರು.

ವೇದಿಕೆ ಮೇಲೆ ಭಂತೆ ಧಮ್ಮನಾಗ, ಸಿದ್ದಮಲ್ಲ ಶಿವಾಚಾರ್ಯರು, ಶ್ರೀ ಗಂಗಾಧರ ಹಿರೇಮಠ,  ಶಾಸಕರಾದ ಬಸವರಾಜ ಮತ್ತಿಮುಡ, ವಿಠಲ್ ದೊಡ್ದಮನಿ,ವಿಠ್ಠಲ್ ವಗ್ಗನ್, ಡಿಜಿ ಸಾಗರ, ವಿಜಯಕುಮಾರ ರಾಮಕೃಷ್ಣ, ಶೋಭಾ ಸಿರಸಗಿ ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago