ಸುರಪುರ: ನಗರದ ಪೊಲೀಸ್ ಠಾಣೆಯಲ್ಲಿ ವಿಶ್ವ ಪರಿಸರ ದಿನವನ್ನು ಅಚರಿಸಲಾಯಿತು. ಠಾಣೆಯಲ್ಲಿ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ,ಇಂದು ಪರಿಸರ ಕಾಳಜಿ ಎಂಬುದು ವಿಶ್ವ ಮಟ್ಟದಲ್ಲಿ ಗಮನ ಸೆಳೆದ ವಿಷಯವಾಗಿದೆ.ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಿದೆ.ಇಂದು ಮನುಷ್ಯನಿಗೆ ಶುದ್ಧವಾದ ಗಾಳಿ,ನೀರು, ಆಹಾರ ಯಾವುದು ಸರಿಯಾಗಿಲ್ಲ.ಇದರಿಂದ ಮನುಷ್ಯನ ಆರೋಗ್ಯದ ಮೇಲು ದುಷ್ಪರಿಣಾಮ ಬೀರುತ್ತಿದೆ.ಆದ್ದರಿಂದ ಪ್ರತಿಯೊಬ್ಬರು ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡೋಣ ಎಂದರು.
ಆರಕ್ಷಕ ನಿರೀಕ್ಷಕರಾದ ಆನಂದರಾವ್ ಮಾತನಾಡಿ,ಇವತ್ತು ದೇಶದಲ್ಲಿ ಮಳೆ ಕಡಿಮೆಯಾಗಿದೆ,ಎಲ್ಲೆಡೆ ನೀರಿನ ಅಭಾವ ಉಂಟಾಗಿದೆ,ಇದಕ್ಕೆ ಕಾರಣ ಪರಿಸರದ ಬಗ್ಗೆ ಕಾಳಜಿ ಇಲ್ಲವಾದುದಾಗಿದೆ.ರೈತರು ಸಂಕಷ್ಟ ಹೆದರಿಸುವಂತಾಗಿದೆ,ಸರಕಾರಗಳು ಪರಿಸರ ರಕ್ಷಣೆ ಮತ್ತು ಮರಗಳನ್ನು ಬೆಳೆಸಲು ಅನೇಕ ಯೊಜನೆಗಳನ್ನು ಜಾರಿಗೊಳಿಸಿದೆ,ಆದರೆ ಜನರನ್ನು ಅದನ್ನು ಅರಿತುಕೊಂಡು ಮರಗಳನ್ನು ಬೆಳೆಸಲು ಮುಂದಾದರೆ ಪರಿಸರ ಬೆಳೆದು ಮಾನವ ಸಮಾಜಕ್ಕೆ ದೊಡ್ಡ ಅನುಕೂಲವಾಗಲಿದೆ.ಆದ್ದರಿಂದ ಎಲ್ಲರು ಪರಿಸರ ಬೆಳೆಸುವತ್ತ ಮಜ್ಞರಾಗೋಣ ಎಂದರು.
ಠಾಣೆ ಸಿಬ್ಬಂದಿಗಳಾದ ಹೆಚ್.ಸಿ ಮನೋಹರ ರಾಠೋಡ,ಬಸವರಾಜ ಮುದ್ಗಲ್,ಸೋಮಯ್ಯ ಸ್ವಾಮಿ,ಮಹಾಂತೇಶ ಬಿರಾದಾರ,ಗಂಗಾಧರ ಸ್ವಾಮಿ,ಶರಣು ಅರಳಗುಂಡಿಗಿ,ಚಂದ್ರಶೇಖರ ರೈಟರ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…