ಆಳಂದ: ರಾಜಕೀಯ ಪಕ್ಷಗಳಿಗೆ ಅಧಿಕಾರ ಎನ್ನುವುದು ಸಾಧನವಾಗಬೇಕು ಹೊರತು ಗುರಿಯಾಗಬಾರದು ಎಂದು ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅಭಿಪ್ರಾಯಪಟ್ಟರು.
ಮಂಗಳವಾರ ಆಳಂದ ಪಟ್ಟಣದ ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲಾ ಅವರಣದಲ್ಲಿ ಆಳಂದ ಮಂಡಲ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ಅಭ್ಯಾಸ ವರ್ಗದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಭಾರತೀಯ ಜನತಾ ಪಕ್ಷವು ವಿಭಿನ್ನ ದೃಷ್ಟಿಕೋನ, ಸಿದ್ಧಾಂತ ಹೊಂದಿರುವ ರಾಜಕೀಯ ಪಕ್ಷವಾಗಿದ್ದು ಇಲ್ಲಿ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಆ ಕಾರಣಕ್ಕಾಗಿಯೇ ಇಂದು ಭಾರತೀಯ ಜನತಾ ಪಕ್ಷ ದೇಶದ ಶೇ. ೭೫% ಪ್ರದೇಶದಲ್ಲಿ ಆಡಳಿತದಲ್ಲಿದೆ ಎಂದು ಹೇಳಿದರು.
ಶ್ಯಾಮಪ್ರಸಾದ ಮುಖರ್ಜಿ, ದೀನ ದಯಾಳ ಉಪಾಧ್ಯಾಯ ಅವರ ಕನಸಿನ ಭಾರತ ನಿರ್ಮಾಣದತ್ತ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸಿದ್ದು ಇದು ಆಶಾದಾಯಕ ಬೆಳವಣಿಗೆ ಎಂದರು.
ಶಾಸಕ ಸುಭಾಷ್ ಆರ್ ಗುತ್ತೇದಾರ ಮಾತನಾಡಿ, ೧೬ ಕೋ. ಸದಸ್ಯರನ್ನು ಹೊಂದುವ ಮೂಲಕ ಭಾರತೀಯ ಜನತಾ ಪಕ್ಷ ಜಗತ್ತಿನ ಅತೀ ದೊಡ್ಡ ಪಕ್ಷವಾಗಿ ಬೆಳದಿದೆ. ಸತತ ಪ್ರಯತ್ನ ನಿರಂತರವಾದ ಆಶಾವಾದ ಹಾಗೂ ಹಲವು ಜನರ ತ್ಯಾಗದ ಫಲದಿಂದ ಪಕ್ಷ ಇಂದು ಅಧಿಕಾರದಲ್ಲಿದೆ ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಭ್ಯಾಸ ವರ್ಗದ ಸಂಚಾಲಕ ಹರ್ಷಾನಂದ ಎಸ್ ಗುತ್ತೇದಾರ, ನಿರ್ದಿಷ್ಟ ಧ್ಯೇಯ, ಉದ್ದೇಶಗಳನ್ನು ಹೊಂದಿರುವ ಭಾರತದ ಪಕ್ಷವಾಗಿದ್ದು ಇದು ಎಲ್ಲರನ್ನು, ಎಲ್ಲವನ್ನು ಒಳಗೊಂಡ ರಾಷ್ಟ್ರೀಯ ವಿಚಾರಧಾರೆಗಳನ್ನು ಪ್ರಚುರಪಡಿಸುವ ಕಾರ್ಯವು ಮಾಡುತ್ತಿದೆ ಹೀಗಾಗಿ ಬಿಜೆಪಿ ಇತರೆ ಪಕ್ಷಗಳಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುತ್ತದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟಿಂಗಳಿ, ಮಾತನಾಡಿದರು. ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಂದಗೂಳೆ ವಂದಿಸಿದರು. ಶರಣು ಕುಮಸಿ ನಿರೂಪಿಸಿದರು.
ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಸದಸ್ಯರಾದ ಗುರುಶಾಂತ ಪಾಟೀಲ ನಿಂಬಾಳ, ಕಲಾವತಿ ಮಲ್ಲಣ್ಣ ನಾಗೂರೆ ಮುಖಂಡರಾದ ಸಂಜಯ ಮಿಸ್ಕಿನ್ ಸೇರಿದಂತೆ, ಜಿ.ಪಂ, ತಾ.ಪಂ, ಪುರಸಭೆ ಸೇರಿದಂತೆ ವಿವಿಧ ಸ್ತರದ ಚುನಾಯಿತ ಪ್ರತಿನಿಧಿಗಳು ಹಾಗೂ ಭಾರತೀಯ ಜನತಾ ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉದ್ಘಾಟನೆಯ ನಂತರ ವಿವಿಧ ವಿಷಯಗಳ ಕುರಿತು ೫ ಗೋಷ್ಟಿಗಳು ಜರುಗಿದವು. ಪ್ರಮುಖರು ವಿಷಯ ಮಂಡನೆ ಮಾಡಿದರು.
ಬಾಕ್ಸ್: ಪಕ್ಷದ ನೂತನ ಪದಾಧಿಕಾರಿಗಳಿಗೆ ಅಭ್ಯಾಸವರ್ಗ ಹಮ್ಮಿಕೊಳ್ಳುವುದು ಬಿಜೆಪಿಯ ಕಾರ್ಯಸೂಚಿ ಅದರಂತೆ ಬಿಜೆಪಿಯ ಎಲ್ಲರಲ್ಲಿ ಪಕ್ಷದ ಕಾರ್ಯ, ಉದ್ದೇಶ ತಿಳಿಸುವ ಕೆಲಸವು ನಿರಂತರವಾಗಿ ನಡೆದುಕೊಂಡು ಬರುತ್ತಿದೆ- ಶಶಿಕಲಾ ಟೆಂಗಳಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…