ಶಹಾಬಾದ:ಮುಖ್ಯಮಂತ್ರಿ ಯಡಿಯೂರಪ್ಪನವರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಮರಾಠ ಸಮಾಜದ ಮುಖಂಡರು ಶಿವಾಜಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮರಾಠ ಸಮಾಜದ ತಾಲೂಕಾಧ್ಯಕ್ಷ ಶಂಕರ ಭಗಾಡೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿರುವುದಕ್ಕೆ ಮರಾಠ ಸಮಾಜದವರಿಗೆ ಎಲ್ಲಿಲ್ಲದ ಸಂತಸ ಉಂಟಾಗಿದೆ.ಇದರಿಂದ ಸಮಾಜದಲ್ಲಿ ಹಿಂದುಳಿದ ಜನರಿಗೆ ಬಹಳ ಅನುಕೂಲವಾಗಲಿದೆ.ಅಲ್ಲದೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಲು ಸಹಾಯವಾಗುತ್ತದೆ.ಈ ನಿರ್ಧಾರವನ್ನು ತೆಗೆದುಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ನಗರಾಧ್ಯಕ್ಷ ದತ್ತಾ ಶಿಂಧೆ, ಗೌರವಾಧ್ಯಕ್ಷ ಜ್ಞಾನೇಶ್ವರ ನನ್ನಾವರೆ, ಬಿಜೆಪಿ ಮುಖಂಡರಾದ ಅನೀಲ ಬೋರಗಾಂವಕರ್, ನಿಂಗಣ್ಣ ಹುಳಗೋಳಕರ್,ಸದಾನಂದ ಕುಂಬಾರ, ಕನಕಪ್ಪ ದಂಡಗುಲಕರ್,ಭೀಮಯ್ಯ ಗುತ್ತೆದಾರ, ಮರಾಠ ಸಮಾಜದ ಮುಖಂಡರಾದ ಚಂದ್ರಕಾಂತ ಸೂರ್ಯವಂಶಿ, ಪವನಕುಮಾರ ಜಾಧವ, ಅವಿನಾಶ ಸಾಳುಂಕೆ, ರಮೇಶ ಪವಾರ, ವಿಷ್ಣು ಸೂರ್ಯವಂಶಿ, ಅಶೋಕ, ಶಿವರಾಜ ಪವಾರ, ಪ್ರಭಾಕರ ಮಾನೆ,ಅಶೋಕ ಶಿಂಧೆ, ಸತೀಶ ಭಗಾಡೆ, ಬಾಬಾಸಾಹೇಬ ಸಾಳುಂಕೆ, ಶೋಮಶೇಖರ ಶಿಂಧೆ,ಶಿವಕುಮಾರ ಭಗಾಡೆ,ಡಾ.ಕಿಶನ್ ಜಾಧವ,ಲಕ್ಷ್ಮಣ ಜಾಧವ, ಸಂತೋಷ ಸಾವಂಥ,ಚಂದ್ರಕಾಂತ ಜಗತಪ, ಮುಖೇಶ ಮಾಂಗ,ರಾಮು ಶಿಂಧೆ, ದಶರಥ ಜಗತಪ,ಅಶೋಕ ಜಿಂಗಾಡೆ,ಬಸವರಾಜ ಬಿರಾದಾರ,ಭೀಮರಾವ ಸಾಳುಂಕೆ, ಉಮಾಕಾಂತ ಸೂರ್ಯವಂಶಿ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…