ಸುರಪುರ: ಕರ್ನಾಟಕದಲ್ಲಿಯೆ ಹುಟ್ಟಿ ಇಲ್ಲಿಯ ಅನ್ನ ನೀರು ಗಾಳಿ ಸೇವಿಸಿ ಇಲ್ಲಿಯ ನೆಲಕ್ಕಾಗಿ ಹೋರಾಟ ಮಾಡುವ ಮರಾಠ ಜನರಿಗಾಗಿ ಅಭಿವೃಧ್ಧಿ ನಿಗಮ ಬೇಕು,ಆದರೆ ಬೆಳಗಾವಿಯಲ್ಲಿ ವಿನಾಕಾರಣ ವಿವಾದಗಳನ್ನು ಹುಟ್ಟಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರಂತವರನ್ನು ಮಟ್ಟ ಹಾಕಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ ಅಭಿಪ್ರಾಯ ಪಟ್ಟರು.
ಈ ಕುರಿತು ನಗರದಲ್ಲಿ ಸುದ್ದಿಗೊರರೊಂದಿಗೆ ಮಾತನಾಡಿದ ಅವರು,ನಾನು ಕೂಡ ಒಬ್ಬ ಮರಾಠ ಆದರೆ ನಾನು ಎಂದೂ ಕೂಡ ಮಹಾರಾಷ್ಟ್ರದ ಪರವಾಗಿ ಮಾತನಾಡುವುದಿಲ್ಲ.ನಾನು ನಮ್ಮ ವಂಶಜರು ಸುಮಾರು ಎರಡು ನೂರು ವರ್ಷಗಳಿಂದ ಇದೇ ಕನ್ನಡ ನೆಲದಲ್ಲಿ ಬದುಕುತ್ತಿದ್ದೇವೆ,ನಮ್ಮಲ್ಲಿಯೂ ಅನೇಕ ಜನ ಕಡು ಬಡವರಿದ್ದಾರೆ ಅವರು ಎಲ್ಲರೂ ಕನ್ನಡಿಗರೆ ಆಗಿದ್ದಾರೆ.ಕನ್ನಡ ನೆಲದಲ್ಲಿನ ಕನ್ನಡದ ಮರಾಠರು ಬಡತನದಿಂದ ಬದುಕುವುದನ್ನು ತಪ್ಪಿಸಲು ಸರಕಾರ ಮರಾಠ ಅಭಿವೃಧ್ಧಿ ನಿಗಮ ಮಾಡಿದೆ,ಅದರ ಸದುಪಯೋಗವನ್ನು ಇಲ್ಲಿಯ ಮರಾಠ ಸಮುದಾಯಕ್ಕೆ ಸಿಗಲಿ.ಆದರೆ ಮರಾಠ ಒಬ್ಬ ಮಹಾರಾಷ್ಟ್ರದ ಪರವಾಗಿ ಧ್ವನಿ ಎತ್ತಿದರೆ ಅಂತವರನ್ನು ನಾಡಿನಿಂದ ಗಡಿಪಾರು ಮಾಡುವಂತ ಕೆಲಸವನ್ನು ಸರಕಾರ ಮಾಡಲಿ ಎಂದು ಗಂಭೀರವಾಗಿ ನುಡಿದರು.
ನಾನು ಮರಾಠನಿದ್ದರು ಕನ್ನಡಕ್ಕಾಗಿ ಹಿಂದೆ ಬೆಳಗಾವಿ ಮಹಾರಾಷ್ಟ್ರದ್ದು ಎಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಾರಾಡಿದ್ದ ಕಿರಣ್‌ಮೊರೆಗೆ ಮಸಿ ಬಳಿದು ಬುಧ್ಧಿ ಕಲಿಸುವಂತ ಕೆಲಸವನ್ನು ನಾನೆ ಮಾಡಿದ್ದೇನೆ,ಅಲ್ಲದೆ ಎರಡು ದಶಕಗಳಿಂದ ಕನ್ನಡದ ಕೆಲಸಕ್ಕಾಗಿ ಮೈ ಮೇಲೆ ಇಪ್ಪಕ್ಕೂ ಹೆಚ್ಚು ಕೇಸುಗಳನ್ನು ಹಾಕಿಸಿಕೊಂಡು ಜೈಲಿಗು ಹೋಗಿ ಬಂದಿರುವೆ, ನನ್ನಂತೆ ನಾಡಿನಲ್ಲಿನ ಎಲ್ಲಾ ಮರಾಠರು ಕೂಡ ಕನ್ನಡದ ಅಪ್ಪಟ ಅಭಿಮಾನ ಉಳ್ಳವರಾಗಿದ್ದಾರೆ.ಅಂತಹ ಎಲ್ಲಾ ಮರಾಠರ ಅಭಿವೃಧ್ಧಿಗಾಗಿ ರಚನೆಯಾಗಿರುವ ನಿಗಮಕ್ಕೆ ನಾನು ವಿರೋಧಿಸುವುದಿಲ್ಲ ಎಂದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…