ಬಿಸಿ ಬಿಸಿ ಸುದ್ದಿ

ವೀರಶೈವ ಮಹಾಸಭೆಯ ಪತ್ರ ಚಳುವಳಿಗೆ ವಿಸಿ ಪಾಟೀಲ್ ಚಾಲನೆ

ಕಲಬುರಗಿ: ಮಾಹಾಸಬಾ ಹಿರಿಯ ಸದಸ್ಯರಾದ ವಿಸಿ ಪಾಟೀಲ್ ಅಖಿಲ ಭಾರತ ವೀರಶೈವ ಮಹಾಸಭೆ ವತಿಯಿಂದ ನಗರದಲ್ಲಿ ನಾಲ್ಕುವರೆ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ವೀರಶೈವ ಲಿಂಗಾಯತ್ ಮಹಿಳಾ ವಸತಿ ನಿಲಯದ ಗುತ್ತಿಗೆ ಲಿಂಗಾಯತರಿಗೆ ಕೊಡಬೇಕೆಂದು ಎಂದು ಪತ್ರ ಚಳುವಳಿಗೆ ಚಾಲನೆ ನೀಡಿದರು

ನಂತರ ಮಾತನಾಡಿದ ಅವರು ಈ ನಿರ್ಧಾರ ಸಮಾಜದ ಎಲ್ಲ ಮುಖಂಡರ ನಿರ್ಧಾರವಾಗಿತ್ತು ಏಕೆಂದರೆ ಸಮಾಜದ ಕೆಲಸ ಸಮಾಜದವರು ಮಾಡಲಿ ಅವರಿಗೂ ಅಭಿಮಾನ ವಿರುತ್ತದೆ ಅಲ್ಲಿ ಲಾಭ-ನಷ್ಟ ನೋಡದೆ ಕೆಲಸ ಮಾಡುತ್ತಾರೆ ನಮ್ಮ ವಿದ್ಯಾರ್ಥಿನಿಯರಿಗೆ ಸುಸಜ್ಜಿತವಾದ ಕಟ್ಟಡ ಕಟ್ಟಿಕೊಡುತ್ತಾರೆ ಎನ್ನುವ ಭಾವನೆಯಿಂದ ಸಮಾಜದ ಮುಖಂಡರೆಲ್ಲರೂ ಸಲಹೆ ನೀಡಿದರು ಗಣನೆಗೆ ತೆಗೆದುಕೊಳ್ಳದೆ ಮಹಾಸಭೆಯ ಅಧ್ಯಕ್ಷರು ಲಿಂಗಾಯತರಲ್ಲ ದವರಿಗೆ ಗುತ್ತಿಗೆ ನೀಡಿರುವುದು ಸಮಾಜಕ್ಕೆ ಸಮಾಜದ ಮುಖಂಡರಿಗೆ ಅಸಮಾಧಾನವಾಗಿದೆ ಇದರ ಕುರಿತು 29ರಂದು ಕಲ್ಯಾಣ ಮಂಟಪದಲ್ಲಿ ಕರೆದಿರುವ ಮಹಾಸಭೆಯ ಸರ್ವಸದಸ್ಯರ ಮತ್ತು ಸಮಾಜದ ಗಣ್ಯರ ಸಭೆಗೆ ಎಲ್ಲರು ಆಗಮಿಸಿ ಮಹಾಸಭೆಯನ್ನು ಸರಿದಾರಿಯಲ್ಲಿ ಕೊಂಡೊಯ್ಯುವಂತ ಕೆಲಸ ಮಾಡಬೇಕಾಗಿದೆ ಸದಸ್ಯರಲ್ಲಿ ವೈಯಕ್ತಿಕವಾಗಿ ಮನವಿ ಮಾಡುತ್ತೇನೆ ಎಲ್ಲ ಹಿರಿಯ ಸದಸ್ಯರು ಭಾಗವಹಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಜಿಲ್ಲಾ ಯುವ ಘಟಕ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ಮಾತನಾಡಿ ವೀರಶೈವ-ಲಿಂಗಾಯತ ಹಿತ ಕಾಪಾಡಬೇಕಾದ ಮಹಾಸಭೆಯಹಿಂದಲೆ ಲಿಂಗಾಯತರಿಗೆ ಅನ್ಯಾಯ ಆಗಿದೆ ನೀವು ಸಮಾಜದ ಹಿತಚಿಂತಕರಾ ವಿರೋಧಿಗಳಾ ಎಂದು ಸದಸ್ಯರು ಮಾತನಾಡುತ್ತಿದ್ದಾರೆ ಹಾಗಾಗಿ ಸಮಾಜದ ಮಠಾಧಿಪತಿಗಳಾದ ಶ್ರೀ ಪರಮಪೂಜ್ಯ ಸಾರಂಗಧರ ದೇಶಿಕೇಂದ್ರ ಜಗದ್ಗುರುಗಳು ಪರಮಪೂಜ್ಯ ಪಾಳಾ ಶ್ರೀಗಳು ಮಾಜಿ ಸಚಿವರಾದ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಶಾಸಕರಾದ ಬಿಜಿಪಾಟೀಲ ದತ್ತಾತ್ರೆ ಯಗೌಡ ಪಾಟೀಲ್ ರೇವೂರ್ ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಬಿಆರಪಾಟೀಲ ಕೆಎಂಎಫ್ ಅಧ್ಯಕ್ಷರಾದ ಆರ್ ಕೆ ಪಾಟೀಲ್ ಉದೆಮಿ ಸಂತೋಷ್ ಬಿಲಗುಂದಿ ಸೇರಿದಂತೆ ಸಮಾಜದ ಎಲ್ಲ ಪ್ರಮುಖರಿಗೆ ಜನಪ್ರತಿನಿಧಿಗಳಿಗೆ ಬರೆದಿರುವ ಪತ್ರಗಳನ್ನು ಇಂದು ಪೋಸ್ಟ್ ಮಾಡುವ ಮುಖಾಂತರ ಪತ್ರ ಚಳುವಳಿಗೆ ಚಾಲನೆ ನೀಡಲಾಯಿತು 29ರ ಸಭೆಯಲ್ಲಿ ವಸತಿ ನಿಲಯದ ಗುತ್ತಿಗೆ ಮಠಾಧಿಪತಿಗಳನ್ನು ಗೌರವಅಧ್ಯಕ್ಷರನ್ನಾಗಿ  ನೆಮಿಸುವುದು.

ಈ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಇನ್ನು ರಚನೆಯಾಗದ ಮಹಿಳಾ ಘಟಕ ಚುನಾವಣೆಯಲ್ಲಿ ನಡೆದ ಮಾತುಕತೆಯಂತೆ ಮೂರು ಫೆನಲ್ ಕಡೆಯಿಂದ 20 ತಿಂಗಳಿಗೆ ಒಬ್ಬರಂತೆ ಅಧ್ಯಕ್ಷರನ್ನಾಗಿ ಮಾಡುವುದಾಗಿ ತೀರ್ಮಾನಿಸಿದ ನಂತರ ಅವಿರೋಧ ಆಯ್ಕೆ ಒಪ್ಪಂದ ಆಗಿತ್ತು ಅದರಂತೆ ಕೇವಲ ಐದು ತಿಂಗಳ ಅವಧಿ ಉಳಿದಿರುವ ಪ್ರಸ್ತುತ ಅಧ್ಯಕ್ಷರ ನಂತರ ನೂತನ ಅಧ್ಯಕ್ಷರ ಆಯ್ಕೆ ಸೇರಿದಂತೆ ಇನ್ನು ಹಲವಾರು ಪ್ರಮುಖ ವಿಷಯಗಳು ಚರ್ಚೆ ಮಾಡಬೇಕಾಗಿದೆ ಎಲ್ಲರೂ ಭಾಗವಹಿಸುವ ವಿಶ್ವಾಸ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾಸಭೆಯ ಜಿಲ್ಲಾ ಉಪಾಧ್ಯಕ್ಷರಾದ ರಾಜುಗೌಡ ನಾಗನಹಳ್ಳಿ ಸದಸ್ಯರುಗಳಾದ ತಾತ ಗೌಡ ಪಾಟೀಲ್ ಮಾಲಾ ಕಣ್ಣಿ ಮಾಲಾ ದಣುರ ಯುವಘಟಕ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ರಾಜಶೇಖರ್ ಬಂಡೆ ಬಸವರಾಜ್ ಇಲ್ಕಲ್ ಇನ್ನಿತರರಿದ್ದರು

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

36 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

39 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

42 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago