ಕಲಬುರಗಿ: ಇಂದು ನಗರದ ಅನ್ನಪೂರ್ಣ ಕ್ರಾಸ್ ಹತ್ತಿರದ ಕಲಾಮಂಡಳದಲ್ಲಿ ಕರ್ನಾಟಕ ರಾಜೋತ್ಸವದ 65ನೇ ಸಂಭ್ರಮಾಚರಣೆ ಅಂಗವಾಗಿ ಕವಿಗೋಷ್ಠಿ ಹಾಗೂ ಕರ್ನಾಟಕ ರಾಜೋತ್ಸವ ಪುರಸ್ಕಾರ ಸಮಾರಂಭವನ್ನು ಸಂಜೆ:5:15 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಎಚ್.ನಿರಗುಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ದಯಾಘನ್ ಧಾರವಾಡಕರ್ ರವರು ಉದ್ಘಾಟನೆಯನ್ನು ಮಾಡಲಿದ್ದು ,ಪ್ರಶಸ್ತಿ ಪ್ರಧಾನವನ್ನು ಚೆಂಬರ್ ಆಫ್ ಕಾಮರ್ಸ್ ನ ಜಂಟಿ ಕಾರ್ಯದರ್ಶಿಗಳಾದ ರವಿಕುಮಾರ್ ಸರಸಂಭಿಯವರು ಮಾಡಲಿದ್ದು,ಮುಖ್ಯ ಅತಿಥಿಗಳಾಗಿ ಮಾಜಿ ಉಪ ಮಹಾಪೌರರಾದ ಮಹೇಶ್ ಹೊಸುರಕರ್ ರವರು ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಹನುಮಂತರಾವ್ ಬಿ.ದೊಡ್ಡಮನಿ,ಹಿರಿಯ ಸಾಹಿತಿಗಳು ಕಲಬುರಗಿ ಇವರು ವಹಿಸಿಕೊಳ್ಳಲಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ ಸುಭಾಶ್ಚಂದ್ರ ಕಶೆಟ್ಟಿ, ಅಬ್ಬಾಸಲಿ ನದಾಫ್, ಡಾ. ಸಂಗಮೇಶ ಹಿರೇಮಠ, ಜಗದೀಶ ಕಡಬಗಾಂವ್, ಸಿದ್ದಲಿಂಗ್ ಬಾಳಿ, ಹೆಚ್.ಬಿ. ಪಾಟೀಲ್, ಶ್ರೀಸಂಜಯ ಪಾಟೀಲ್, ನಾಗಯ್ಯ ಸ್ವಾಮಿ ಅಟ್ಟೂರ, ನಾರಾಯಣ ಜೋಶಿ, ಯಶೋದಾ ಕಟಕೆ, ವಿರೇಶ ಕಂದಗಲ್, ಮಾರುತಿ ಗಂಜಗಿರಿ, ಮಂಜುನಾಥ ನಾಲವಾರಕರ್, ಶಿವಲಿಂಗಪ್ಪ ಗೌಳಿ,ಹಾಗೂ .ರೇಣುಕಾ ವಿ.ಸಿಂಗಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಕರ್ನಾಟಕ ರಾಜೋತ್ಸವ ಪುಸ್ಕಾರವನ್ನು ನೀಡಿ ಸನ್ಮಾನಿಸಲಾಗುತ್ತಿದೆ.
ನರಸಿಂಗ್ ರಾವ್ ಹೇಮನೂರ, ವೆಂಕಟೇಶ ಜನಾದ್ರಿ,ಡಾ.ಕೆ.ಗಿರುಮಲ್ಲ, ರೇಣುಕಾ ಡಾಂಗೆ, ಪರ್ವೀನ ಸುಲ್ತಾನ, ಮಲ್ಲಮ್ಮ ಕಾಳಗಿ, ಗೌರಿ ಪಾಟೀಲ್, ಪರಮೇಶ್ವರ ಶೆಟಗಾರ, ವಿಜಯಜುಮಾರ ರೋಣದ, ಬಾಬು ಜಾಧವ ಇವರೆಲ್ಲ ಕಾವ್ಯ ವಾಚನವನ್ನು ಮಾಡಲಿದ್ದು ಕಿರಣ್ ಪಾಟೀಲ್ ಹಾಗೂ ಚಾಮರಾಜ ದೊಡಮನಿಯವರಿಂದ ಕನ್ನಡ ಗೀತಗಾಯನವೂ ಕೂಡಾ ಜರುಗುವದೆಂದು ಪ್ರತಿಷ್ಠಾನದ ಅದ್ಯಕ್ಷರು ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…