ಭಾರತ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ್ ತಮ್ಮ ದಾಂಪತ್ಯ ಜೀವನದ ಎರಡನೇ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ.
2011ರಲ್ಲಿ ಮೊದಲ ಪತ್ನಿ ರಾಮಲತಾ ಜೊತೆ ವಿಚ್ಚೇದನ ಪಡೆದಿದ್ದ 47 ವರ್ಷದ ಪ್ರಭುದೇವ್, 8 ವರ್ಷದ ನಂತರ ಮತ್ತೊಂದು ಮದುವೆಯಾಗಿದ್ದಾರೆ. ಈ ವಿಷಯವನ್ನು ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡುವ ವೇಳೆ ಪ್ರಭುದೇವ್ ಸಹೋದರ ರಾಜು ಸುಂದರಂ ತಿಳಿಸಿದ್ದಾರೆ. ಮೂಲತಃ ಮುಂಬೈ ಮೂಲದ ಫಿಸಿಯೊಥೆರಪಿಸ್ಟ್ ಡಾ.ಹಿಮಾನಿ ಎಂಬುವವರನ್ನು ಪ್ರಭುದೇವ್ ವರಿಸಿದ್ದು, ಕೊರೊನಾ ಲಾಕ್ ಡೌನ್ ವೇಳೆ ಚೆನ್ನೈನಲ್ಲಿ ಸರಳವಾಗಿ ಕೋವಿಡ್ -19 ಮಾರ್ಗಸೂಚಿಯಡಿ ವಿವಾಹ ಕಾರ್ಯಕ್ರಮ ನಡೆದಿದೆ ಎಂದು ಸಂದರ್ಶನದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಖ್ಯಾತ ನೃತ್ಯ ನಿರ್ದೇಶಕ ಹಾಗೂ ಚಲನ ಚಿತ್ರ ನಟ, ನಿರ್ದೇಶಕರೂ ಆಗಿರುವ ಪ್ರಭುದೇವ್, ಕಾಲು ಮತ್ತು ಬೆನ್ನು ನೋವಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಫಿಸಿಯೊಥೆರಪಿಸ್ಟ್ ಡಾ.ಹಿಮಾನಿ ಜೊತೆ ಪ್ರೇಮಾಂಕುರವಾಗಿದೆ. ನಂತರ ಇಬ್ಬರು ಸುಮಾರು 2 ತಿಂಗಳು ಲೀವ್ ಇನ್ ರಿಲೆಷನ್ ಶಿಫ್ ನಲ್ಲಿದ್ದು, ಸ್ಪಲ್ಷ ಸಮಯಗಳ ಬಳಿಕ ಚೆನ್ನೈನಲ್ಲಿ ಸರಳವಾಗಿ ಕುಟುಂಬಸ್ಥರ ಉಪಸ್ಥಿತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪ್ರಭುದೇವ್ ತಮ್ಮ ಮೊದಲ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ನಂತರ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರ ಜೊತೆಗೆ ಕೆಲವು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಬಳಿಕ ಇವರಿಬ್ಬರು ಮದುವೆ ಆಗುತ್ತಾರೆ ಎಂಬ ಮಾತುಗಳು ಸಹ ಕೇಳಿಬಂದಿತ್ತು. ಆದರೆ ನಯನತಾರ ಮತ್ತು ಪ್ರಭುದೇವ್ ಕಾರಣಾಂತರಗಳಿಂದ ದೂರ ಸರಿದ್ದಿದ್ದರು.
ಸದ್ಯ ಪ್ರಭುದೇವ್ ವೈದ್ಯೆ ಹಿಮಾನಿ ಜೊತೆ ಮದುವೆಯಾಗಿದೆ ಎಂಬ ಸುದ್ದಿ ಅವರ ಸಹೋದರ ತಿಳಿಸಿದ್ದು, ಆದರೆ ಈ ಬಗ್ಗೆ ಪ್ರಭುದೇವ್ ಇದುವರೆಗೆ ಯಾವುದೇ ಮಾಹಿತಿ ಅಥವಾ ಸ್ಪಷ್ಟನೆ ನೀಡಿಲ್ಲ. ಇನ್ನೊಂದೆಡೆ ನಯನತಾರ ತಮಿಳು ಚಿತ್ರರಂಗದ ನಿರ್ದೇಶಕ ವಿಗ್ನೇಶ್ ಶಿವನ್ ಜೊತೆ ಡೇಟಿಂಗ್ ನಲ್ಲಿ ಇದ್ದು, ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಕೇಳಿಬರುತ್ತಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…