ಸುರಪುರ: ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ೬೪ನೇ ಜನುಮ ದಿನದ ಅಂಗವಾಗಿ ರಾಜಾ ವೆಂಕಟಪ್ಪ ನಾಯಕ ಅಭಿಮಾನಿಗಳಿಂದ ಮಕ್ಕಳಿಗೆ ಹಣ್ಣು ಹಾಲು ಬಟ್ಟೆ ಮತ್ತು ಹೊದಿಕೆಗಳನ್ನು ವಿತರಣೆ ಮಾಡಲಾಯಿತು.
ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿನ ದಾವಲಮಲಿಕ್ ಆಶ್ರಮದಲ್ಲಿನ ಎಲ್ಲಾ ಮಕ್ಕಳಿಗೆ ಹಣ್ಣು ಹಾಲು ವಸ್ತ್ರ ಮತ್ತು ಹೊದಿಕೆಗಳನ್ನು ವಿತರಿಸಿ ಹುಣಸಗಿ ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಮಾಲಿ ಪಾಟೀಲ ಮಾತನಾಡಿ,ಇಂದು ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರ ಜನುಮ ದಿನದ ಅಂಗವಾಗಿ ಅನಾಥಾಶ್ರಮದ ಮಕ್ಕಳಿಗೆ ಎಲ್ಲಾ ವಸ್ತುಗಳನ್ನು ವಿತರಿಸಿ ಅವರ ಅಭಿಮಾನಿಗಳು ಜನುಮ ದಿನವನ್ನು ಆಚರಿಸುತ್ತಿದ್ದು,ಪ್ರತಿ ವರ್ಷ ಅಧ್ಧೂರಿಯಾಗಿ ಜನುಮ ದಿನ ಆಚರಿಸಲಾಗುತ್ತಿತ್ತು ಈ ವರ್ಷ ಕೊರೊನಾ ಮತ್ತು ಪ್ರವಾಹ ಕಾರಣದಿಂದ ಸರಳವಾಗಿ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ ಎಂದರು.
ಅಲ್ಲದೆ ರಾಜಾ ವೆಂಕಟಪ್ಪ ನಾಯಕ ಅವರು ಸುರಪುರ ಮತ್ತು ಹುಣಸಗಿ ತಾಲೂಕಿನ ಅಭಿವೃಧ್ಧಿಯ ಹರಿಕಾರರಾಗಿದ್ದು ಮುಂಬರುವ ೨೦೨೩ರ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಆಶ್ರಮದ ದವಲ ಮಲಿಕ್ ಸ್ವಾಮೀಜಿ ಮುಖಂಡರಾದ ನಾಗರಾಜ ಜೊಗೂರ ಅವಿನಾಶ ನಾಯಕ ಕೊಡೇಕಲ್ ದುರುಗೇಶ ಗೆದ್ದಲಮರಿ ಪರಶುರಾಮ ಮುದನೂರ ಪರಶುರಾಮ ಅರಕೇರಿ ಹೆಚ್.ಸಿ.ಸಾಹುಕಾರ ಕನಕು ಜಂಗಳಿ ಕೊಡೇಕಲ್ ಕಾಸಿಂ ನಾರಾಯಣಪುರ ವಿರೇಶ ಗುಳಬಾಳ ಶಿವು ಚಲವಾದಿ ಅಂಬ್ರೇಶ ಇಸ್ಲಾಂಪುರ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…