ಕಲಬುರಗಿ: ಮುಕ್ತಾಯಕ್ಕಗಳ ಗುರು ಸಮಾನವಾದಅಣ್ಣಅಜಗಣ್ಣಇಲ್ಲವಾದರೂ ಆಕೆಗೆ ಆತತತ್ತ್ವದರೂಪದಲ್ಲಿ ಬದುಕಿರುವುದು ವೇದ್ಯಸಂಗತಿ.ತಂಗಿ ಮುಕ್ತಾಯಕ್ಕಳನ್ನು ಅಜಗಣ್ಣ ಬೆಳೆಸಿದ ಪರಿ, ಅದು ಕೇವಲ ಒಬ್ಬಅಣ್ಣತಂಗಿಯನ್ನು ಬೆಳಸಿದ ರೀತಿ ಅಷ್ಟೇ ಅಲ್ಲ, ಒಬ್ಬಗುರುತನ್ನ ಶಿಷ್ಯನನ್ನು, ಒಬ್ಬಆಧ್ಯಾತ್ಮಜ್ಞಾನದಅನುಭಾವಿಯಾಗಿ ಹೇಗೆ ಬೆಳಸುತ್ತಾನೆ ಎಂಬುದರಕುರುಹಾಗಿದೆಎಂದು ಮೈಸೂರುಜೆ.ಎಸ್.ಎಸ್. ಮಹಾವಿದ್ಯಾಪೀಠದ ಪ್ರಕಟನಾ ವಿಭಾಗದ ನಿರ್ದೇಶಕರಾದ ಪ್ರೊ. ಮಲ್ಲಿಕಾರ್ಜುನ ಮೊರಬದ ಅವರು ಅಭಿಪ್ರಾಯ ಪಟ್ಟರು.
ಕಲಬುರಗಿ ಬಸವ ಸಮಿತಿಯಅನುಭವ ಮಂಟಪದಲ್ಲಿ ನಡೆದ ಲಿಂ.ಡಾ. ಎಂ.ಎಸ್. ಲಠ್ಠೆ ಸ್ಮರಣಾರ್ಥದತ್ತಿಕಾರ್ಯಕ್ರಮದಲ್ಲಿ ಭಾಗವಹಿಸಿ ಮೊರಬದ ಮಲ್ಲಿಕಾರ್ಜುನಅವರು ಮಾತನಾಡುತ್ತಿದ್ದರು. ಡಾ. ಎಂ.ಎಸ್. ಲಠ್ಠೆ ಅವರುಜನಪದ ಸಾಹಿತ್ಯ ಮತ್ತು ವಚನಸಾಹಿತ್ಯಎರಡರಲ್ಲೂ ಕೃಷಿ ಮಾಡಿದವರು.ಅವರು ಈ ಭಾಗದಜನಪದ ಸಾಹಿತ್ಯವನ್ನು ಸಂಗ್ರಹಿಸಿ ಪ್ರಟಿಸಿದ್ದು ಒಂದು ಮಾದರಿ ಕೆಲಸ. ಅವರ ’ಜನಪದಕವಿಚರಿತೆ’ ಕನ್ನಡ ಸಾಹಿತ್ಯ ಸಂಸ್ಕೃತಿಯಇತಿಹಾಸದಲ್ಲಿಒಂದುಅದ್ಭುತವಾದ ಸಂಶೋಧನಕೃತಿಯಾಗಿದೆ. ಈ ಕೃತಿ ಹೊರಬಂದನಂತರಕನ್ನಡ ಸಂಶೋಧನಕ್ಷೇತ್ರದಲ್ಲಿ ಮೊದಲಬಾರಿಗೆಜನಪದ ಕವಿಗಳನ್ನು ಗಮನಿಸಿ ಸಂಶೋಧನೆ ಪ್ರಾರಂಭವಾದಇತಿಯಾಸವನ್ನು ನಾವು ಮರೆಯುವಂತಿಲ್ಲಎಂದು ಪ್ರೊ.ಮೊರಬದಅವರುಅಭಿಪ್ರಾಯಪಟ್ಟರು.
ಶರಣೆ ಮುಕ್ತಾಯಕ್ಕಳನ್ನು ಕುರಿತು ಮಾತನಾಡುತ್ತ, ಅವಳ ಅಣ್ಣಅಜಗಣ್ಣನಜೊತೆಗೆ ಮುಕ್ತಾಯಕ್ಕಗಳ ಸಂಬಂಧ ಗುರು-ಶಿಷ್ಯರ ಸಂಬಂಧದಂತೆಕಾಣುತ್ತದೆ.ಅಣ್ಣಅಜಗಣ್ಣತನ್ನನ್ನುಯಾರೂಅರಿಯದಂತೆಒಬ್ಬಅರಿವಿನ ಬೊಂಬೆಯಂತೆ ಬೆಳೆಸಿದ ಎನ್ನುತ್ತಾಳೆ. ’ಉರಿಯ ನುಂಗಿದಕರ್ಪುರದಂತೆ’ ಎಂಬುದು ಸಾಮಾನ್ಯ ಮಾತು.ಆದರೆ ಮುಕ್ತಾಯಕ್ಕ ’ಅಗ್ನಿಕರಗಿಕರ್ಪುರ ಉಳಿದುದಕ್ಕೆ ಬೆರಗಾದೆನಯ್ಯಾ’ ಎನ್ನುತ್ತಾಳೆ. ಅಂದರೆಕರ್ಪುರಅಗ್ನಿಯ ಸ್ಪರ್ಷದಲ್ಲಿತನ್ನ ಪರಿಮಳವನ್ನು ಬೀರುವಂತೆ, ಆಧ್ಯಾತ್ಮದ ಸಂಪರ್ಕದಲ್ಲಿಅರಿವುತನ್ನ ಪರಿಕಮಳವನ್ನು ಬೀರಿ ನಿಲ್ಲುತ್ತದೆ. ಹಾಗೆಯೇಅಜಗಣ್ಣನೆಂಬ ಆಧ್ಯಾತ್ಮಿಯ ಸಂಪರ್ಕದಲ್ಲಿತನ್ನಅರಿವುಅನುಭಾವವಾಗಿ ಅರಳಿ ನಿಂತ ಪರಿಯನ್ನು ಮುಕ್ತಾಯಕ್ಕ ವರ್ಣಿಸುತ್ತಾಳೆ. ಇದು ನಿಜವಾದಆಧ್ಯಾತ್ಮದಅರಿವು, ಈ ಅರಿವು ಹರಡುವ ಸಗಂಧವಾಗಿರುತ್ತದೆ ಎಂಬ ಅಭಿಪ್ರಾಯವನ್ನು ಮೊರಬದಅವರು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದಡಾ.ಜಯಶ್ರೀದಂಡೆಅವರು ಉಪಸ್ಥಿತರಿದ್ದರು. ದತ್ತಿ ದಾನಿಗಳಾದ ಪ್ರೊ. ರವೀಂದ್ರ ಲಠ್ಠೆ ಅವರು ಸ್ವಾಗತಕೋರಿದರು. ಉದ್ದಂಡಯ್ಯಅವರುಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…