ಬಿಸಿ ಬಿಸಿ ಸುದ್ದಿ

ಕಾಲ್ಚೆಂಡ ‘ನೀಲಿ ಚೇ’ ಇನ್ನಿಲ್ಲ.!!

– ಆಶಿಕ್ ಮುಲ್ಕಿ

ಇದು‌ ಕಾಲ್ಚೆಂಡು ಗದ್ಗತವಾಗುವ ಸಮಯ. ಒಡೆಯನ ಕಳೆದುಕೊಂಡು ಕಣ್ಣೀರಾಗುವ ಹೊತ್ತು.‌ ಮಾಂತ್ರಿಕನ ಕಳೆದುಕೊಂಡ ಹಸಿರ ಹಾಸಿಗೆಗೆ ಮುದುಡಿ ಕೂಡುವ ಗತಿ. ಬಲೆಯ ಮೂಲೆ ಮೂಲೆಯಲ್ಲೂ ಬಿಕ್ಕಿ ಬಿಕ್ಕಿ ಅಳುವ ಸದ್ದು. ಎರಡು ತುದಿಯಲ್ಲಿ ನೆಟ್ಟ ಕಂಬಗಳು ಅವುಡುಗಚ್ಚಿ ನಿಲ್ಲುವ ಪರಿ.‌ ಹಳದಿ ಕಣ್ಣೀರಾಗಿ, ಕೆಂಪು ನೆನಪಾಗಿ ಬದಲಾದ ಸ್ಥಿತಿ. ಕಾಲ್ಚೆಂಡು ದಿಗ್ಗಜ ಮರಡೋನಾ ಇನ್ನಿಲ್ಲ ಎನ್ನುತ್ತಲೇ, ಹೀಗೆ ಇಡೀ ಮೈದಾನ ಶೋಕವಾಗಿ ಬಿಟ್ಟಿದೆ.

ಮೆಸ್ಸಿ ದಿ ಬೆಸ್ಟ್. ಆ ಬಗ್ಗೆ ತಕರಾರೇ ಸಲ್ಲ. ಆದರೆ ಹಾಗೇ ಹಿಂದಕ್ಕೆ ನಡೆದರೆ ಮೆಸ್ಸಿ ಅನ್ನೋ ಮಹಾನ್ ಪ್ರತಿಭೆಯ ಮಾದರಿ ಈ ಮರಡೋನಾ. ದಿಗ್ಗಜನಿಗೇ ಮಾದರಿಯಾದ ಈ ಮರಡೋನರನ್ನು ಏನೆಂದು ಸಂಭೋಧಿಸುವುದು..? ಈಗ ಒಂದೇ ಮಾತಿನಲ್ಲಿ, ಹೀಗೆ ಹೇಳಿ ನಿಲ್ಲಿಸಬಹುದು ಈಗ. ದಿವಂಗತ ದಿಗ್ಗಜ.

ಒಂದು ಆತ್ಮಸೆಳೆತದ ಮಾತು. ಮೆಸ್ಸಿ ನನ್ನನ್ನು ಖುಷಿ ಪಡಿಸುತ್ತಾನೆ. But this fellow ಮರಡೋನಾ ನನ್ನನ್ನು ಸೆಳೆಯುತ್ತಾನೆ. ಎದೆಯೊಳಗೆ ಅಚ್ಚೆಯಾಗಿ ಉಳಿಯುತ್ತಾನೆ. ದೀರ್ಘವಾಗಿ ಕಾಡುತ್ತಾನೆ. ನಾನೇನು ಮರಡೋನಾರ ಕಾಲ್ಚಳಕವನ್ನು ಕಣ್ಣಾರೆ ಕಂಡವನಲ್ಲ. ನೇರಪ್ರಸಾರ ನೋಡಿದವನೂ ಅಲ್ಲ. Still, ಮರಡೋನಾ ಎಂದರೆ ಜಿನುಜಿನುಗಿ ಬರುವ ಹುಮ್ಮಸ್ಸು ಇದೆಯಲ್ಲಾ, ಯೂಟ್ಯೂಬಿನ ಕೆಂಪು ಗೆರೆಯ ಮೇಲೆ ಕೈ ಇಡದೆ ನೋಡುವಷ್ಟಿದೆ.

1982 ಇಡೀ ಜಗತ್ತು ಅದೊಂದು ವಿಸ್ಮಯಕ್ಕೆ ಸಾಕ್ಷಿಯಾಗಿತ್ತು. ಆದರೆ ಅದೊಂದು ವಿಸ್ಮಯ ಎಂದು ತಿಳಿಯ ಬೇಕಾದರೆ ಮತ್ತೆ ಐದು ವಸಂತ ಕಾಯಬೇಕಾಯ್ತು. ಹೌದು, 1978ರಲ್ಲಿ ವಯೋಮಿತಯ ಕಾರಣಕ್ಕೆ ವಿಶ್ವಕಪ್ ನಿಂದ ಅರ್ಜೆಂಟೀನಾ ಟೀಂನಿಂದ ಹೊರಗುಳಿದ ಮರಡೋನಾ 1982ರಲ್ಲಿ ತಂಡ ಕೂಡಿದರು. But First Impression is the best Impression ಅನ್ನೋದು ಮರಡೋನಾಗೆ ಹೇಳಿದ ಮಾತಲ್ಲ. ಮೊದಲ ಲಗ್ಗೆಯಲ್ಲಿ ಮೈದಾನವಿಡೀ ಎಡವಿ ಬಿದ್ದ ಮರಡೋನಾ ನಂತರ ಎದ್ದು ನಿಂತಿದ್ದು 1987ರ ಮಹಾ ಯುದ್ಧದಲ್ಲಿ. ಆನಂತರ ಸೃಷ್ಟಿಯಾಗಿದ್ದು ಇಂದಿಗೆ ಇತಿಹಾಸ. ಬರೀ ಇತಿಹಾಸವಲ್ಲ ಜಗತ್ತೇ ಗೆದ್ದು ಬೀಗಿದ ಓರ್ವ ಬಡ ತಾಯಿಯ ರೋಚಕ ವೃತ್ತಾಂತ.

ಈ‌ ನಡುವೆ ಸೋಲುಗಳಿದ್ವು. ಬದುಕಿನ ಸಂಘರ್ಷಗಳಿದ್ವು. ಅವಮಾನಗಳಾದ್ವು. ಸನ್ಮಾನಗಳಾದ್ವು. ಕಾಂಟ್ರವರ್ಸಿಗಳಾದ್ವು. ಆದರೂ ಅವರು ನಿಜಕ್ಕೂ ಗ್ರೇಟ್. ಯಾಕಂದ್ರೆ ಅವರ ಹೆಸರು ಮರಡೋನಾ. ಮನುಷ್ಯತ್ವ ಹಾಗೂ ಸಹೋದರತ್ವ ಮೈಗೂಡಿಸಿಮೊಂಡ ಅಪ್ಪಟ ಮನುಷ್ಯ ಪ್ರೇಮಿ. ಚೇ ಅನ್ನೋ ಕ್ರಾಂತಿಯನ್ನು ತೊಗಲಿಗಂಟಿಸಿ ಬದುಕಿದವರು. ಕವಿತೆಗಳನ್ನು ಹಾಡುತ್ತಾ, ಕುಣಿಯುತ್ತಾ ಕುಣಿಸುತ್ತಾ ಬದುಕಿದವರು. ಫ್ಯಾಸಿಸಮ್ ಅನ್ನು ಕಣ್ಣೋಟದಿಂದಲೇ ಧಿಕ್ಕರಿಸಿದವರು. & he did. In all the way.

ಹೀಗೆ ಹೇಳಿ‌ ಕೂತರೆ ಮರಡೋನಾ‌ ಮುಗಿಯದ ಅಧ್ಯಾಯ. ಯೋಚನೆಗೂ ನಿಲುಕಿದ, ಹಾಳೆಗೂ ಸಿಗದ ಮಹಾ ಬದುಕು. ಮೆಸ್ಸಿನ ಅನ್ನೋ ದಿಗ್ಗಜನ ಮೈಯ ರೋಮಗಳೆಲ್ಲಾ ಎದ್ದು ನಿಲ್ಲುವಂತೆ ಮಾಡಿದ ಮರಡೋನಾ ಅನ್ನೋ ಮಹಾನ್ ದಿಗ್ಗಜ ಇನ್ನಿಲ್ಲ. ಅರಗಿಸಿಕೊಳ್ಳಿ.‌ ಸಾಧ್ಯವಾದರೆ, ಈ ನಮ್ಮ ಅಲ್ಪ ಬದುಕನ್ನು ಜಿಂಕೆಯಂತೆ ಕುಣಿದು ರೋಚಕಗೊಳಿಸಿದ್ದಕ್ಕೆ ಕೃತಘ್ನರಾಗಿ.

ಹೊರಡುವ ಮುನ್ನ ಮರಡೋನಾ ಹೇಳಿದ ಮಾತಿದು

“I worked hard all my life for this. Those who say I don’t deserve anything, that it all came easy, can kiss my arse.”

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago