ಚಿತ್ತಾಪುರ : ಭಾರತ ಸಂವಿಧಾನ ಆರಂಭವಾಗುವುದೇ ‘ಭಾರತದ ಜನತೆಯಾದ ನಾವು ‘ಎಂದು. ಈ ಪ್ರಸ್ತಾವನೆ ಕೊನೆಗೊಳ್ಳುವುದು, ‘ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದು, ಆದ್ದರಿಂದ ಇದನ್ನು ಯಾವ ಹೊರಗಿನ ಶಕ್ತಿಯೂ ನಮ್ಮ ಮೇಲೆ ಹೇರಿಲ್ಲ, ನಾವೇ ಇದನ್ನು ಬರೆದುಕೊಂಡಿರಿವ ಇದು ನಮಗಾಗಿರುವ ನಮ್ಮ ಸಂವಿಧಾನ ಎಂದು ಹಿರಿಯ ಪ್ರಾಧ್ಯಾಪಕ ಪ್ರೊ, ಅನೀಲಕುಮಾರ ಮಂದೋಲಕರ್ ಹೇಳಿದರು.
ತಾಲ್ಲೂಕಿನ ಚಿತ್ತಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸಂವಿಧಾನ ದಿನ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸರಿಯಾಗಿ 71 ವರ್ಷಗಳ ಹಿಂದೆ, ಎಂದರೆ 1949ರ ನವೆಂಬರ್ 26ರಂದು ಭಾರತದ ಸಂಸತ್ ಭವನದಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿತ್ತು. ಸಂವಿಧಾನ ರಚನಾ ಸಭೆಯ 2 ವರ್ಷ 11 ತಿಂಗಳು 18 ದಿನಗಳ ಕಠಿಣ ಪರಿಶ್ರಮ ಸಾರ್ಥಕವಾದ ದಿನವಾಗಿ ಭಾರತವು ತನ್ನದೇ ಆದ ಒಂದು ಸಂವಿಧಾನವನ್ನು ಪಡೆದಿತ್ತು. ಎಂದು ಅವರು ಹೇಳಿದರು.
ಸಮಾಜ ಶಾಸ್ತ್ರ ಪ್ರಾಧ್ಯಾಪಕ ಡಾ. ಎ. ಜಿ ಖಾನ್ ಮಾತನಾಡಿ ಡಾ. ಬಾಬಾಸಾಹೇಬ್ ಭೀಮರಾವ ಅಂಬೇಡ್ಕರ್ ಅವರು ರಚಿಸಿದ ಈ ಬೃಹತ್ ಸಂವಿಧಾನದ ಆಶೆಯಗಳು ಪ್ರತಿಯೊಬ್ಬ ಭಾರೀತಿಯನೂ ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸರ್ವರಿಗೂ ಸಮ ಪಾಲು, ಸಮ ಬಾಳು ನೀಡಿದ ಸಂವಿಧಾನಕ್ಕೆ ಗೌರವ ಸಲ್ಲಿಸದಂತೆ ಆಗುತ್ತದೆ. ಈ ದೇಶದ ಏಕೈಕ ಧರ್ಮ ಅದು ಭಾರತದ ಸಂವಿಧಾನ ಆಗಿದೆ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯಕುಮಾರ ಎಚ್. ಸಾಲಿಮನಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಜಗತ್ತಿನಲ್ಲಿಯೇ ಮಹಿಳೆಯರ ಹಿತ ಕಾಪಾಡಿ ಅವರಿಗೂ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ, ಸಮಾನತೆ, ನೀಡಿದ ಏಕೈಕ ವ್ಯಕ್ತಿ ಡಾ. ಬಾಬಾಸಾಹೇಬ್ ಅಂಬೇಡ್ಕರ್. ಶೋಷಿತ ಸಮುದಾಯದಲ್ಲಿ ಜನಿಸಿದ ಅಂಬೇಡ್ಕರ್ ರವರು ಭಾರತ ದೇಶದಲ್ಲಿ ಶೋಷಣೆಗೆ, ದಬ್ಬಾಳಿಕೆಗೆ ಒಳಪಟ್ಟ ಜನರಿಗೆ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ದೊರಿಯಬೇಕೆಂದು ಹಗಲಿರುಳು ಶ್ರಮಿಸಿದ್ದಾರೆ ಎಂದು ಅವರು ಹೇಳಿದರು. ಡಾ. ಶ್ರಾವಣ ಕಾಂಬಳೆ, ಡಾ. ಸಾವಿತ್ರಿ ಕುಲಕರ್ಣಿ, ಡಾ. ನುಜಹತ್ ಫರಹೀನ, ಡಾ. ಭಾಗ್ಯಲಕ್ಷ್ಮಿ ರೆಡ್ಡಿ, ಡಾ. ಪಂಡಿತ ಬಿ ಕೆ, ಡಾ. ಮಲ್ಲಪ್ಪ ಮಾನೆಗಾರ್, ಡಾ. ಲಕ್ಷ್ಮಿಕಾಂತ ಶಿರೊಳ್ಳಿ, ಡಾ. ಫರ್ಹೀನ ಫಾತಿಮಾ, ಡಾ. ಪೂಜಾ ಹೊನ್ನುಟಗಿ, ಡಾ. ಸಾವಿತ್ರಿ ದೇಸಾಯಿ, ಡಾ ಮಹೇಂದ್ರ ಪಟ್ಟಣಕರ್ ವಂದಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…