ಶಹಾಬಾದ:ಇಡೀ ಜಗತ್ತಿನಲ್ಲಿ ನಡೆಯದ ಸಾಮಾಜಿಕ ನ್ಯಾಯವನ್ನು ಅನುಷ್ಠಾನಕ್ಕೆ ತರುವ, ಸಮಾನತೆ ಸಮಾಜ ಕಟ್ಟುವ ಸಂವಿಧಾನವನ್ನು ರಚಿಸಿ, ಎಲ್ಲಾ ಶೋಷಿತ ವರ್ಗಗಳ ಪಾಲಿಗೆ ಆಶಾಕಿರಣವಾದವರು ಡಾ.ಬಾಬಾ ಸಾಹೇಬ ಅಂಬೇಡ್ಕರ್ರವರು ಎಂದು ದಸಂಸ ಜಿಲ್ಲಾ ಸಂಚಾಲಕ ಸುರೇಶ ಮೆಂಗನ ಹೇಳಿದರು.
ಅವರು ದಲಿತ ನೌಕರರ ಸಂಘದ ವತಿಯಿಂದ ನಗರದ ಅಂಬೇಡ್ಕರ್ ಪ್ರತಿಮೆಯ ಆವರಣದಲ್ಲಿ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಆಯೋಜಿಸಲಾದ ವಿಚಾರ ಸಂಕೀರಣ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಈ ದೇಶದ ಚರಿತ್ರೆ ಶುದ್ಧವಾಗಿರಲಿಲ್ಲ. ಕೇವಲ ಸುಳ್ಳುಗಳಿಂದ ಕೂಡಿತ್ತು. ಇಲ್ಲಿನ ಜನರಿಗೆ ಸ್ವತಂತ್ರವಾಗಿ ಬದುಕುವ ಹಕ್ಕಿರಲಿಲ್ಲ. ಎಲ್ಲೂ ಓಡಾಡುವಂತಿರಲಿಲ್ಲ. ಅಲ್ಲದೇ ಅಸ್ಪೃಶ್ಯರನ್ನು ಮುಟ್ಟುವಂತಿರಲಿಲ್ಲ. ಹೀಗೆ ಅನೇಕ ಕಟ್ಟುಪಾಡುಗಳ ಅಸಮಾನತೆಯನ್ನು ಹೊಂದಿತ್ತು. ಇದನ್ನು ತಿಳಿದುಕೊಂಡ ಬಾಬಾ ಸಾಹೇಬ ಅಂಬೇಡ್ಕರ್ರವರು ವಿಶ್ವದ ಅತಿ ದೊಡ್ಡ ಸಂವಿಧಾನ ರಚಿಸುವ ಮೂಲಕ ಭಾರತೀಯರ ಬದುಕು ರೂಪಿಸಿದ ಮಹಾನ್ ನಾಯಕರಾದರು. ಇಂದು ದೇಶದ ರಾಷ್ಟ್ರಪತಿಗೂ, ಅಧಿಕಾರಿಗಳಿಗೂ, ಕಸಗುಡಿಸುವವನಿಗೂ ಅಲ್ಲದೇ ದೇಶದ ಸಾಮನ್ಯ ವ್ಯಕ್ತಿಗೂ ಜಾತಿ ಬೇಧವಿಲ್ಲದೇ ಒಂದೇ ರೀತಿಯ ಮತದಾನದ ಹಕ್ಕನ್ನು ಒದಗಿಸಿದ್ದು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅದು ಸಂವಿಧಾನದ ಮೂಲಕ ಎಂದು ಹೇಳಿದರು.
ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಮಾತನಾಡಿ, ಅಂಬೇಡ್ಕರ ಸತತ ಪರಿಶ್ರಮದ ಫಲವಾಗಿ ಸಂವಿಧಾನ ರೂಪುಗೊಂಡಿದೆ. ದೀನ ದಲಿತರಿಗೆ ಬೆಳಕು ನೀಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ. ಹೀಗಾಗಿ ಅವರು ದೇಶದ ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ. ಭಾರತ ಇದೀಗ ಮುಂದುವರೆಯುತ್ತಿರುವುದು ಅವರ ಚಿಂತನೆಯ ಫಲವಾಗಿದ್ದು, ದೇಶವು ಸದಾ ಕಾಲ ಅವರಿಗೆ ಸ್ಮರಿಸಲಿದೆ ಎಂದರು.
ಭರತ್ ಧನ್ನಾ, ಬಸವರಾಜ ಮಯೂರ,ಪ್ರವೀಣ ರಾಜನ್,ಶಂಕರ ಜಾನಾ, ಸುನೀಲ ಮೆಂಗನ ವೇದಿಕೆಯ ಮೇಲಿದ್ದರು.ಅಲ್ಲಮಪ್ರಭು ಮಸ್ಕಿ ಅಧ್ಯಕ್ಷತೆ ವಹಿಸಿದ್ದರು.
ರವಿ ಮುತ್ತಗಿಕರ್ ನಿರೂಪಿಸಿದರು, ಇಮ್ಯಾನುವೆಲ್ ಸ್ವಾಗತಿಸಿದರು, ಪರಶುರಾಮ ವಂದಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…