ಶಹಾಬಾದ:ಸಾವಿರಾರು ರೂ.ಖರ್ಚು ಮಾಡಿ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸುವುದು ನೋಡಿದ್ದೆವೆ.ಅಲ್ಲದೇ ಮನೆಯಲ್ಲಿ ಹಾಗೂ ದೊಡ್ಡ ಹೊಟೇಲಗಳಲ್ಲಿ ನೂರಾರು ಜನರಿಗೆ ಆಹ್ವಾನ ನೀಡಿ ಆಡಂಬರದ ಕಾರ್ಯಕ್ರಮವನ್ನು ಕಂಡಿದ್ದೆವೆ.ಆದರೆ ನಗರದಲ್ಲೊಬ್ಬರು ತಮ್ಮ ಮಗಳ ಹುಟ್ಟು ಹಬ್ಬವನ್ನು ಪೌರಕಾರ್ಮಿಕರ ಮಧ್ಯೆ ವಿಶೇಷವಾಗಿ ಆಚರಿಸಿಕೊಂಡ ಬಗೆ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ನಗರದ ಗುರುರೇವಣಸಿದ್ಧಪ್ಪ ಮತ್ತು ಭಾಗ್ಯಶ್ರೀ ಅವರ ಎರಡು ವರ್ಷದ ಪುತ್ರಿ ಸೃಷ್ಠಿ ಅವಳ ಹುಟ್ಟು ಹಬ್ಬವನ್ನು ಯಾವುದೇ ಆಡಂಬರವಾಗಿ ಆಚರಿಸದೇ, ಅಧಿಸೂಚಿತ ಕ್ಷೇತ್ರ ಸಮಿತಿ ಪೌರಕಾರ್ಮಿಕರ ಮತ್ತು ಜಿಇ ಗುತ್ತಿಗೆ ನೌಕರರ ಜತೆ ಹಾಗೂ ಅಲಸ್ಟಾಂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳ ಮಧ್ಯೆ ಸರಳವಾಗಿ ಆಚರಿಸಿಕೊಂಡರು.
ಅಲ್ಲದೇ ಮಾನವ ಜನ್ಮ ದೊಡ್ಡದು, ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳೀರಾ, ಕರೋನಾ ಬಂದರೆ ಮನೆಯಲ್ಲಿದ್ದವನೇ ಮಹಾಶೂರ, ಕೊರೊನಾವನ್ನು ಸೋಲಿಸೋಣ ದೇಶವನ್ನು ಗೆಲ್ಲಿಸೋಣ, ಮಾಸ್ಕ್ ಧರಿಸೋಣ ಕರೊನಾ ಓಡಿಸೋಣ, ಮಾಸ್ಕ ಧರಿಸಿ ಯೋಗ್ಯರಾಗೋಣ, ರೋಗ ಬಂದಾಗ ಸಾಮಾಜಿಕ ನೆಮ್ಮದಿಗಾಗಿ ಮನೆಯಲ್ಲಿರಿ, ಕೋವಿಡ್-19 ಮನುಕುಲಕ್ಕೆ ಆಪತ್ತು ಹೀಗೆ ನಾಗರಿಕರ ಗಮನ ಸೆಳೆಯುವಂತಹ ಘೋಷಣೆಗಳನ್ನು ಹೊಂದಿರುವ ಭಿತ್ತಿ ಚಿತ್ರಗಳಿಂದ ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಕಳಿಕಳಿಯನ್ನು ತೋರಿದರು.
ಬಸವಣ್ಣನವರ ಕಾಯಕ ದಾಸೋಹದ ಮೂಲ ತತ್ವದ ಆಧಾರದ ಮೇಲೆ ಕಾಯಕ ಜೀವಿಗಳಾದ ಪೌರಕಾರ್ಮಿಕರ, ಹಿರಿಯರ ಆಶೀರ್ವಾದ ಮತ್ತು ಹಾರೈಕೆ ನಮ್ಮ ಮಗಳ ಮೇಲೆ ಇರಲಿ ಹಾಗೂ ಸಾಮಾಜಿಕ ಸಂದೇಶ ಇತರರಿಗೆ ರವಾನೆಯಾಗಲಿ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ ಎಂದು ಗುರು ರೇವಣಸಿದ್ದಪ್ಪ ಪೂಜಾರಿ ತಿಳಿಸಿದರು.
ಕೇವಲ ಹುಟ್ಟು ಹಬ್ಬದ ಕಾರ್ಯಕ್ರಮವಲ್ಲದೇ ಸಾಮಾಜಿಕವಾಗಿ ಸಂದೇಶ ಸಾರುವ ನಿಟ್ಟಿನಲ್ಲಿ ಕೊರೊನಾ ಜಾಗೃತಿ ಹಾಗೂ ಮಾಸ್ಕ ವಿತರಣೆ ಕೂಡ ಮಾಡಲಾಯಿತು.ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಲಸ್ಟಾಂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ದೇವೆಂದ್ರ ಗಾಯಕವಾಡ, ನಾನು ವೃತ್ತಿ ಜೀವನದಲ್ಲಿ ಹುಟ್ಟು ಹಬ್ಬವನ್ನು ಈ ರೀತಿಯಾಗಿ ಆಚರಣೆ ಮಾಡಿಕೊಂಡಿರುವುದನ್ನು ನೋಡಿದ್ದು ಮೊದಲನೇ ಬಾರಿ.ಇಂತಹ ವೈಚಾರಿಕ ನೆಲೆಗಟ್ಟಿನ ಮೇಲೆ ಆಚರಣೆಗಳಾದರೆ ಸಮಾಜಕ್ಕೆ ಒಳ್ಳೆ ಸಂದೇಶ ಹೋಗುತ್ತದೆ.ಅಲ್ಲದೇ ಇನ್ನೊಬ್ಬರಿಗೆ ಪ್ರೇರಣೆಯಾಗುತ್ತದೆ ಎಂದರು.
ನಂತರ ಎಲ್ಲಾ ಪೌರಕಾರ್ಮಿಕರಿಗೆ ಹಾಗೂ ನಿವೃತ್ತ ನೌಕರ ವರ್ಗದವರಿಗೆ ಊಟದ ವ್ಯವಸ್ಥೆ ಹಾಗೂ ಸಿಹಿತಿಂಡಿ ವಿತರಿಸಿದರು.
ಕುರುಬ ಸಮಾಜದ ಅಧ್ಯಕ್ಷ ಮಲ್ಕಣ್ಣ ಮುದ್ದಾ, ಸಂಗೋಳ್ಳಿರಾಯಣ್ಣ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ, ರೈತ ಮುಖಂಡ ಮರಲಿಂಗ ಕಮರಡಗಿ, ಶಿವಶರಣಪ್ಪ ಜೆಟ್ಟೂರ್,ಶಾಂತಪ್ಪ ಪೂಜಾರಿ ಹೊನಗುಂಟಾ,ರಾಮಲಿಂಗ ಮಾಕಾ, ಭೀಮಾಶಂಕರ ದಂಡೋತಿ ಇತರರು ಇದ್ದರು.
ಮನೆಯಲ್ಲಿ ಎಷ್ಟು ವೈಭವದಿಂದ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರೂ ಇಲ್ಲಿನ ಶ್ರಮ ಜೀವಿಗಳಾದ ಪೌರಕಾಮರ್ಿಕರ ನಡುವೆ ಆಚರಿಸುವಾಗ ಸಿಗುವ ಸಂತೋಷ ಮತ್ತು ತೃಪ್ತಿ ಮತ್ತೆಲ್ಲೂ ಸಿಗುವುದಿಲ್ಲ.ಅವರು ನನ್ನ ಮಗಳಿಗೆ ಹಾರೈಸಿದ ಪರಿ ಮಾತ್ರ ಅಚ್ಚಳಿಯದಂತದ್ದು- ಭಾಗ್ಯಶ್ರೀ ರೇವಣಸಿದ್ದಪ್ಪ ಪೂಜಾರಿ.
ಇಂದಿನ ಯುವಕರು ಹುಟ್ಟು ಹಬ್ಬವನ್ನು ಸರಕಾರಿ ಕಟ್ಟಡದಲ್ಲಿ, ಬೈಕ್ ಮೇಲೆ ಕೇಕ ಇಟ್ಟು ಕತ್ತರಿಸುವುದು, ಮೊಟ್ಟೆ ಒಡೆಯುವುದು, ಕುಡಿಸು-ತಿಂದು ಕುಪ್ಪಳಿಸುವುದು, ಶಾಲು, ಪೇಠಾ, ಹೂವಿನ ಹಾರವನ್ನು ಹಾಕಿ ಆಡಂಬರದ ಆಚರಣೆ ಮಾಡುತ್ತಿರುವುದು ದುರ್ದೈವ.ಇದರಿಂದ ನಮ್ಮ ಆಚರಣೆ ಹಳಿ ತಪ್ಪುತ್ತಿದೆ. ಇಲ್ಲಿನ ವೈಚಾರಿಕ ಆಚರಣೆಗಳಿಂದ ಇಂದಿನ ಯುವಕರಿಗೆ ಪಾಠವಾಗಲಿ-ಶಿವಶರಣಪ್ಪ ಜೆಟ್ಟೂರ್ ಉಪಾಧ್ಯಕ್ಷ ಬಸವ ಸಮಿತಿ ಭಂಕೂರ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…